Posts

Showing posts from 2020

ಕನ್ನಡ ನಮ್ಮ ಭಾಷೆ

 ಕನ್ನಡ ನಮ್ಮ ಭಾಷೆ ಕನ್ನಡ ಭಾಷೆ ಜೇನಸಿಹಿಯಂತೆ  ನುಡಿಯು ಸುಧೆಯ ಸವಿದಂತೆ ಎದೆಭಾಷೆಗೆ ದನಿಗೂಡಿದ ನುಡಿಯು ತಂಪು ತೀಡಿದ ತಂಗಾಳಿಯು ಅಕ್ಕರೆಯ ಅಮ್ಮನ ಮಮತೆ ಸವಿದ   ಸಿಹಿ ಸಕ್ಕರೆಯಂತೆ ಒಲವ ಮಾತ ಮುತ್ತುಗಳು  ಮನಕೆ ಹೊಳೆದಂತೆ  ಬೆಳಕು ಅರಳಿ ನಗುವ ಕುಸುಮದಂತೆ ಸೊಗಸಾಗಿ  ಆಡುವ ಮಾತು ಅಳುವ ಕಂದನ ರಮಿಸುವಂತೆ ತಾಯಿ ಪ್ರೀತಿ ಜೋಗುಳವು ಹರಸುವ ಹಾರೈಕೆ ಭರವಸೆ ಸಡಗರ ಸಂಪ್ರೀತಿ ಸೆಳೆವಂತೆ ಬೆಸೆದ ಬಂಧಗಳ  ಒಲವು ನಗುವ ಮನದಂಗಳ ಚೆಲುವು ಕವಿ  ಕಲ್ಪನೆಯು ಮಿಂದೇಳುವ ಕಡಲು ಪದ ಹಾಡಲು ತಲೆದೂಗುವ ಗಾನವು ಸ್ವರಗಳ ಇಂಪೊಳಗೆ ಮಾಧುರ್ಯ  ಹರಡುವ ಕಂಪು ಕನ್ನಡದ ಸೌಂದರ್ಯ ಇತಿಹಾಸದ ಪುಟಗಳಲ್ಲಿ ಗರಿಮೆಯು ಸಾರಿದ ಶಾಸನದಿ ಭಾಷೆಯ ಹಿರಿಮೆಯು ಕನ್ನಡ ಭಾಷೆ ಒಲವಿನ ಸ್ಪೂರ್ತಿ ನಿತ್ಯ ಜಗಕೆ ಹರುಡತ ಕೀರ್ತಿ ಸಿದ್ದು ಮೂರ್ತಿ, ತುಮಕೂರು

ನಮ್ಮ ನಾಡು ಕರುನಾಡು

 ನಮ್ಮ ನಾಡು ಕರುನಾಡು ***************** ಕನ್ನಡ ನಾಡು ಹೆಮ್ಮೆಯ ಬೀಡು,ಸಿರಿಗಂಧದ ತವರೂರು ಸಿರಿ ಸೊಬಗ ಸಡಗರ ಮೈದಳೆದು ಮೆರೆಯುವ ನಾಡು ಅಂದದ ಸಿರಿ  ತುಂಬಿ ತುಳುಕುವ ಸುಂದರ ಸೀಮೆ ಅಚ್ಚ ಹಸಿರಿನ ಚಿತ್ತಾರ ಚೆಲ್ಲಿದ, ನಿಸರ್ಗ ಭೂರಮೆ ಶಿಲ್ಪಕಲೆಗಳ ಸೊಗಡು, ಸಂಸ್ಕೃತಿ ಸಾರುವ ನೆಲೆವೀಡು ಗತವೈಭವ ಗರಿಮೆಯ ಘನತೆ ತೋರುವ ಸಿರಿನಾಡು ಸಾಹಿತ್ಯ ಸುಧೆಯು ಹೊನ್ನುಳೆ ಹರಿಸುವ ಹೊನ್ನಾಡು ಕವಿಗಳ,ಕಲಿಗಳ,ದಾಸಶರಣರ ನೆಲೆ ನಾಡು ಗಿರಿಗಳೊತ್ತ  ಸೀಮೆಯಸಾಲು ಒಡಲಲಿ ಖನಿಜದಬೀಡು ರಸರಿಷಿಗಳ ಸಿರಿ ನಾಡು ಕಾವ್ಯ ಕುಸುರಿಯ ಕರುನಾಡು ಅಕ್ಕರೆಯ ಅಂದದ ನುಡಿ ಹರಡಿದೆ ಕಸ್ತೂರಿ ಕಂಪು ಒಲವಿನ ಮಾತಿನ ಸಕ್ಕರೆಯು,ಬಿರಿದ ಹೂಗಳ ಕಂಪು ವೀರ ಶೂರರು ಆಳಿದ ವೈಭವ, ಶೌರ್ಯದ ಕರುನಾಡು ಕೋಟೆ ಕೊತ್ತಲ ನಾಡ ಖ್ಯಾತಿಯ ಸಾರುವಂತಿದೆನೋಡು ನದಿ ವನಸಿರಿ ಸೊಬಗಿನ ಸಂಸ್ಕೃತಿ ಸೊಗಡಿನ  ತಾಣ ನಲ್ಮೆಯ ತೋರುವ  ಕನ್ನಡಿಗ ,ನಾಡಿನ ಐಸಿರಿ ಕಾಣಾ ಸಿದ್ದು ಮೂರ್ತಿ, ತುಮಕೂರು

ಖಿದ್ಮಾ ಸಾಹಿತ್ಯ ಬಳಗದ ಪುರಸ್ಕಾರ

Image
 

ಆ ರಾತ್ರಿಯಲ್ಲಿ

 ಆ ರಾತ್ರಿಯಲ್ಲಿ ಸುತ್ತಲೂ ಹಚ್ಚ ಹಸಿರಿನ ತೋಟ  ನಡುವೆ ರಾಮಜ್ಜ ನ ಮನೆ..,ಕೂಡು ಕುಟುಂಬ ಸುಂದರ ಸಂಸಾರ ...ರಾಮಜ್ಜನ ಮಗ ಸುರೇಶ ೫ ವರ್ಷಗಳಿಂದ ಭಾರತೀಯ ಸೈನ್ಯ ದಲ್ಲಿ ಸೇವೆಯಲ್ಲಿದ್ದಾನೆ..ಸುರೇಶನ ಹೆಂಡತಿ ಸಂಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನ ದೇಶಸೇವೆಗೆ ಪ್ರೋತ್ಸಾಹಿಸುತ್ತಾ ಚಂದದ ಸಂಸಾರವನ್ನು  ನಡೆಸುತ್ತಿದ್ದಾಳೆ...! ಸುರೇಶ ನ ಅಜ್ಜಿ ರಂಗಜ್ಜಿಗೆ ಸುರೇಶನ ಮೇಲೆ ತುಂಬಾ ಪ್ರೀತಿ.. ದಿನವೂ ಸುರೇಶನ ಪೋಟೋವನ್ನು ನೋಡುತ್ತಾ ನೆನೆಸಿಕೊಳ್ಳುತ್ತಾ ಇರುತ್ತಾಳೆ... ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಸುರೇಶ ಅಜ್ಜಿ ಯ ಆರೈಕೆಯಲ್ಲಿ ಬೆಳೆಯುತ್ತಾನೆ...ಅಜ್ಜಿಯ ನೀತಿ ಕಥೆ, ಧೈರ್ಯ,ಸಾಹಸ, ತ್ಯಾಗ ಬಲಿದಾನ ಕಥೆಗಳ ತಿರುಳು ಸುರೇಶನನ್ನು ಸೈನ್ಯಕ್ಕೆ ಸೇರಿಸಲು ಪ್ರೇರೇಪಿಸಿದವು.. ಅಜ್ಜಿಯು ಸುರೇಶನ ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರಲ್ಲೇ ಸುರೇಶನನ್ನು ಕಾಣುತ್ತಾ ಇರುತ್ತಾಳೆ.. ರಾಮಜ್ಜ ಹೊಲಮನೆಯ ತೋಟದ ಕೆಲಸಗಳಲ್ಲೇ ಮಗ್ನನಾಗಿರುತ್ತಾನೆ.. ಸಂಗೀತಾ ತನ್ನ ಗಂಡನ ನೆನಪಿನಲ್ಲೇ ನಿತ್ಯ ದಿನ ದೂಡುತ್ತಿರುತ್ತಾಳೆ.. ಅದೊಂದು ದಿನ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಗಳ ಚಿತ್ತಾರ,ತಳಿರು ತೋರಣಗಳಿಂದ ಸಿಂಗಾರಗೊಂಡಿದೆ....ಅಡಗೆಮನೆಯಿಂದ ಘಮ ಘಮಿಸುವ ಹೋಳಿಗೆ ಹೂರಣ,ಗರಿ ಗರಿ ಚಕ್ಕುಲಿ ಹಪ್ಳ ಹಬ್ಬದೂಟದ ಅಡುಗೆಮನೆ ತುಂಬಿ ತುಳುಕಿದೆ.. ಮನೆಯ ತಲೆಬಾಗಿಲ ಚಿಗುರು ಮಾವಿನ ತಳಿರು ತೋರಣ ಬಾಳೆಕಂದಿನ ಸ್ವಾಗತ ಚಂದದ ಅಲಂಕಾರಗಳು ಹಬ್ಬದ ಸಂ...

ಜಡೆಗವನ ಸ್ಪರ್ಧೆ

Image
  ಜಡೆಗವನ ಸ್ಪರ್ಧೆ ಯಲ್ಲಿ ಅತ್ಯುತ್ತಮ ಸ್ಥಾನ

ವಾರದ ಸವಾಲು ಸ್ಪರ್ಧೆ

Image
 

ಗುರು ಸಾಕ್ಷಾತ್ ಪರಬ್ರಹ್ಮ

----------------------------------- ನ್ಯಾನೋ ಕಥಾ ಸ್ಪರ್ಧೆ ----------------------- ಗುರು ಸಾಕ್ಷಾತ್ ಪರಬ್ರಹ್ಮ ----------------------------  ಸಣ್ಣ ಹಳ್ಳಿಯ ಕನ್ನಡ ಶಾಲೆ ಯಲ್ಲಿ ಕಲಿತು ಜಿಲ್ಲಾಧಿಕಾರಿಯಾಗಿ ಹಳ್ಳಿಗೆ ಹೆಮ್ಮೆಯಾಗಿದ್ದ ಪ್ರವೀಣನನ್ನು ಊರಿನ ಎಲ್ಲಾ ಮುಖ್ಯಸ್ಥರು ಸೇರಿ ಸನ್ಮಾನಿಸಲು,ವೇದಿಕೆಯ ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ಏನೋ ಅರಿತಂತವನಾಗಿ ಪ್ರವೀಣ ಖುರ್ಚಿ ಯಿಂದೆದ್ದು ವೇದಿಕೆಯ ಮುಂಬಾಗದಲ್ಲಿ ಊರುಗೋಲಿಡಿದು ಕುಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು  ತೋಳಿಡಿದು ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ನಂತರ ತನ್ನೆಲ್ಲ ಸನ್ಮಾನ ಪರಿಕರಗಳನ್ನು ಅವರ ಚರಣಗಳಿಗರ್ಪಿಸಿ,ಹೇಳುತ್ತಾ "ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನಿರ್ದೇಶಕರಂತೆ ಜೀವನದ ಗುರಿಯನ್ನು ತಲುಪಲು ಸಹಾಯ ಮಾಡಿದ ಗುರುಗಳು ನಮ್ಮ ಶ್ಯಾಮಣ್ಣ ಮಾಸ್ತರು... ಹಾಗಾಗಿ ನನ್ನೆಲ್ಲ ಸನ್ಮಾನ ಗಳು ಗುರುಗಳ ಚರಣಗಳಿಗರ್ಪಣೆ"..!.ಎಂದಾಗ ಮಾಸ್ತರರ ಕಣ್ಣಾಲಿ ತುಂಬಿದ್ದವು .,ಸಭೆಯ ಕರತಾಡನ ಮುಗಿಲು ಮುಟ್ಟಿತ್ತು.. ಸಿದ್ದು ಮೂರ್ತಿ, 

ಬಿಕ್ಕುವ ದನಿ

  ------------------ ಶೀರ್ಷಿಕೆ:ಬಿಕ್ಕುವ ದನಿ ************** ಬಿಕ್ಕುವ ದನಿ ಮಡುಗಟ್ಟಿದೆ ಮಾತಾಗದೆ ಎದೆಭಾಷೆಗೆ ದನಿಗೂಡದೆ ಮೌನ ತಾಳಿದೆ ಮಬ್ಬರಿದು ಬೆಳಕು ಹರಿಯುವ ಮುನ್ನ ದುರುಳರ ಕ್ರೂರದಂಡಿಗೆ ಪಥನ ಗೊಂಡಿದೆ ಮನ ಅಮಲು ಏರಿದ  ಕರಗಳ ತೆಕ್ಕೆಯೊಳು ನಶೆಯ  ಗುಂಗಿನ ಹೊಳಪು  ನಮ್ಮಬದುಕ ಕನಸುಗಳ ಗದ್ದಗೆಯೇರಿ ಹೊಂಚು ಆಸೆಗಳೇ  ಗಹಗಹಿಸುತ್ತಿವೆ ಕನಸುಕಾಣುವ ಮುನ್ನ ಆಸೆಹುಟ್ಟುವ ಮುನ್ನ ಬದುಕ ಮುನ್ನುಡಿ ಬರೆವ ಹೊತ್ತಿಗೆಯಲ್ಲಿ ರಕ್ಕಸ ಮನಗಳ ಕ್ರೂರ ಕಾಮನೆಯ ಗೀಚಿ ಬೆತ್ತಲಾಗಿಸಿದ ನಮ್ಮ ಬದುಕು ಕ್ಷಣದಲಿ ಮರೆಮಾಚಿ ಮಿಕ್ಕಿ ಮಿಗಿಲಾಗಿ ಉಂಡು ತೇಗುವಕಾಮನೆ ನಮ್ಮ ಬದುಕ ತುಳಿತದ‌ ಯಾತನೆ ಉಸಿರಾಡಲು ಮಾತ್ರ ಈ ದೇಹವಂತೆ ರಕ್ಕಸರ ತುಳಿತಕ್ಕೆ ನಲುಗಲು ಹೇಳಿಮಾಡಿಸಿದಂತೆ ಅವರ ಅಮಲ ಮೋಜಿನ ಘಮಲಿನಲಿ  ಬೆವರಹನಿಯ ಕಂಟು ವಾಸನೆಗೆ ಆಸೆ ಕಮರಿ ಹೆಣ್ಣಾದ ನಮ್ಮೀ ಭವಿಷ್ಯದ  ಬದುಕ  ಕನವು ಕದಡಿ ಶೋಷಣೆಯ ಹತ್ತಿಕ್ಕಲು ದನಿ ಬಿಕ್ಕುತ್ತಿದೆ.. ಸಿದ್ದು ಮೂರ್ತಿ, ತುಮಕೂರು.

ನೃತ್ಯ ಹಾಗೂ ಆರೋಗ್ಯ

ನೃತ್ಯ ಹಾಗೂ ಆರೋಗ್ಯ ***************** ನಾಟ್ಯವು ಭಾರತೀಯ ಸಂಸ್ಕೃತಿಯಲ್ಲಿ ಪಾರಂಪರಿಕವಾಗಿ ಬಂದಿರುವ ಸಾಂಪ್ರದಾಯಿಕ ಕಲೆ.ನೃತ್ಯವು ಒಂದು ಮನರಂಜನಾ ಕಲೆಯಾದರೂ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ, ಧರ್ಮ,ಆಚರಣೆ, ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅಭಿವ್ಯಕ್ತ ಕಲೆ.... ವಿವಿಧ ಭಾವ ಭಂಗಿಗಳಲ್ಲಿ ನವರಸಗಳನ್ನು ವ್ಯಕ್ತಗೊಳಿಸುತ್ತಾ , ಸನ್ನಿವೇಶವನ್ನು ವೈಭವವಾಗಿ ಸಮಗ್ರವಾಗಿ, ಆಕರ್ಷಕವಾಗಿ ಬಿತ್ತರಗೊಳಿಸುವ ಕಲೆ ನೃತ್ಯಕ್ಕಿದೆ... ಕಣ್ಣು, ಕಾಲುಗಳು,ಕೈಗಳು,ದೇಹ ಇವುಗಳ ಯಥೋಚಿತ ಚಲನೆ ಮೂಡಿಸುವ ಆಕರ್ಷಕ ಭಂಗಿಗಳು ನೋಡುಗರ ಮನದಲ್ಲಿ ಕುತೂಹಲ ಆಕರ್ಷಣೆಯನ್ನು ಕಾಯ್ದಿಟ್ಟುಕೊಂಡು ಭಾವನೆಗಳನ್ನು ಅರಳಿಸುವ ಅಧ್ಬುತ ಕಲೆ ಈ ನಾಟ್ಯ..., ಹಾಗೆಯೇ ಈ ನಾಟ್ಯದಿಂದ ಸಮಯೋಚಿತವಾಗಿ ಚಲಿಸುವ ಅಂಗಗಳಿಂದ ನಿಯಮಿತ ರಕ್ತಸಂಚಾರ ಗಳು ಅಂಗಾಂಗ ಗಳ ಕಾರ್ಯ ಸಮರ್ಪಕವಾಗಿ ಆಗುವುದರ ಜೊತೆಗೆ ಏಕಾಗ್ರತೆಯೂ ಸಿದ್ಧಿಸುತ್ತದೆ..ಕ್ರಮೇಣ ಮಾನಸಿಕ ಆರೋಗ್ಯ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ... ಆದುದರಿಂದ ನೃತ್ಯ ಪರೋಕ್ಷವಾಗಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ... ಯೋಗಾಭ್ಯಾಸದಿಂದ ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೋ ಹಾಗೆಯೇ ನೃತ್ಯ ಹಾಗೂ ನೃತ್ಯಾಭ್ಯಾಸ ಗಳು ಕೂಡ ಪರೋಕ್ಷವಾಗಿ ಯೋಗಾಭ್ಯಾಸದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ... ಎಂಬುದನ್ನು ನಿಸ್ಸಂಶಯವಾಗಿ ಈ ಸಂದರ್ಭದಲ್ಲಿ ಹೇಳಬಹುದು... ನಾಟ್ಯದ ವ...

ಅಭಿನಂದನಾ ಪತ್ರ

Image
 

ದೇಶಭಕ್ತಿ ಗೀತೆ ಸ್ಪರ್ಧೆ

Image
 

ಅಭಿನಂದನಾ ಪತ್ರ

Image
 

ಗುರು ಸಾಕ್ಷಾತ್ ಪರಬ್ರಹ್ಮ

 ಗುರು ಸಾಕ್ಷಾತ್ ಪರಬ್ರಹ್ಮ ----------------------------  ಸಣ್ಣ ಹಳ್ಳಿಯ ಕನ್ನಡ ಶಾಲೆ ಯಲ್ಲಿ ಕಲಿತು ಜಿಲ್ಲಾಧಿಕಾರಿಯಾಗಿ ಹಳ್ಳಿಗೆ ಹೆಮ್ಮೆಯಾಗಿದ್ದ ಪ್ರವೀಣನನ್ನು ಊರಿನ ಎಲ್ಲಾ ಮುಖ್ಯಸ್ಥರು ಸೇರಿ ಸನ್ಮಾನಿಸಲು,ವೇದಿಕೆಯ ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ಏನೋ ಅರಿತಂತವನಾಗಿ ಪ್ರವೀಣ ಖುರ್ಚಿ ಯಿಂದೆದ್ದು ವೇದಿಕೆಯ ಮುಂಬಾಗದಲ್ಲಿ ಊರುಗೋಲಿಡಿದು ಕುಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು  ತೋಳಿಡಿದು ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ನಂತರ ತನ್ನೆಲ್ಲ ಸನ್ಮಾನ ಪರಿಕರಗಳನ್ನು ಅವರ ಚರಣಗಳಿಗರ್ಪಿಸಿ,ಹೇಳುತ್ತಾ "ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನಿರ್ದೇಶಕರಂತೆ ಜೀವನದ ಗುರಿಯನ್ನು ತಲುಪಲು ಸಹಾಯ ಮಾಡಿದ ಗುರುಗಳು ನಮ್ಮ ಶ್ಯಾಮಣ್ಣ ಮಾಸ್ತರು... ಹಾಗಾಗಿ ನನ್ನೆಲ್ಲ ಸನ್ಮಾನ ಗಳು ಗುರುಗಳ ಚರಣಗಳಿಗರ್ಪಣೆ"..!.ಎಂದಾಗ ಮಾಸ್ತರರ ಕಣ್ಣಾಲಿ ತುಂಬಿದ್ದವು .,ಸಭೆಯ ಕರತಾಡನ ಮುಗಿಲು ಮುಟ್ಟಿತ್ತು.. ಸಿದ್ದು ಮೂರ್ತಿ, 

ಶಾಯರಿಗಳು

**************** ವಿಷಯ: ಶಾಯರಿ """""""""""""" ------------------------------- ಶಾಯರಿ ೧: ಧರ್ಮದ ಬೆಳಕು -------------------------------- ಜಗದ ಧರ್ಮಗಳು ಸಾರುವ ನೀತಿಯೂ ಒಂದೇ ಸಕಲ ಧರ್ಮಗಳ  ಬದುಕಿನ ದಾರಿಯೂ ಒಂದೇ ಅರಿತವರೇ ನಡೆಯುವರು ಜಾತಿಯ ದಾರಿ ಹಿಡಿದು ಧರ್ಮ ತೋರುವ ದೇವನೊಲಿಸುವ ದಾರಿ ತೊರೆದು ------------------- ಶಾಯರಿ ೨: ಶ್ರಮ ------------------- ಕನಸುಗಳು ನನಸಾಗಿಸುವಂತ ಶ್ರಮವಿರಲಿ ಶ್ರಮದ ಬದುಕಲ್ಲಿ ನಮ್ಮ ಒಲವಿರಲಿ ಒಲವಿನ ಬದುಕಲ್ಲಿ ನಮ್ಮ ವಿಶ್ವಾಸವಿರಲಿ ವಿಶ್ವಾಸದ ಬದುಕಲ್ಲಿ ನಿರೀಕ್ಷಿಸಿದ ಫಲ ನಮ್ಮದಾಗಲಿ. -ಸಿದ್ದು ಮೂರ್ತಿ, ತುಮಕೂರು.

ವಾರದ ಸ್ಪರ್ಧೆ

Image
 ವಾರದ ಸ್ಪರ್ಧೆ" ಶಾಯರಿ "ಯಲ್ಲಿ ಅತ್ಯುತ್ತಮ ಸ್ಥಾನ

ಅಭಿನಂದನಾ ಪತ್ರ

Image
 

ಕರೋನಾ ಸಮಯದ ಸ್ವಾತಂತ್ರ್ಯೋತ್ಸವ

 ಕರೋನಾ ಸಮಯದ ಸ್ವಾತಂತ್ರ್ಯೋತ್ಸವ ಶೀರ್ಷಿಕೆ: ಏನೇ ಬರಲಿ ಒಗ್ಗಟ್ಟಿರಲಿ...!! """""""""""""""""""""""""""" ನಮ್ಮ ಭಾರತ ವೈವಿದ್ಯತೆಯಿಂದ ಕೂಡಿದರೂ ಏಕತೆಯಿಂದ ಮೆರೆವ ಅಭಿವೃದ್ಧಿ ಶೀಲ ರಾಷ್ಟ್ರ..,ಹಲವು ಧರ್ಮಗಳ ನೆಲೆಯಾದ ಸುಸಂಸ್ಕೃತ ರಾಷ್ಟ್ರ., ವೈಶಿಷ್ಟ್ಯ ಪೂರ್ಣ ಭೌಗೋಳಿಕ ಲಕ್ಷಣಗಳು, ಪ್ರಾಕೃತಿಕ ಸಂಪನ್ಮೂಲಗಳ ಹೊಂದಿದ ರಾಷ್ಟ್ರ. ಭಿನ್ನ ವಿಭಿನ್ನ ವಾದ ಪದ್ದತಿ,ಆಚರಣೆ, ಭಾಷೆ, ಸಂಪ್ರದಾಯ, ಉಡುಪು ಗಳಿದ್ದರೂ ನಾವೆಲ್ಲರೂ ಭಾರತೀಯರೆಂಬ ಸಹೃದಯ ಏಕತಾ ಮನೋಭಾವವನ್ನು ಬೇರೆ ಯಾವ ರಾಷ್ಟ್ರದೊಂದಿಗೆ ಹೋಲಿಕೆ ಮಾಡುವುದು ಅಸಾಧ್ಯ....   ಇಂತಹ ದೇಶ ಈ ಮೊದಲು ಬ್ರಿಟೀಷರ ಕಬಂಧ ಬಾಹುಗಳಿಂದ ನಲುಗಿ.,ದೇಶದ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಇಂದಿಗೆ 73 ವರ್ಷ ಗಳು ಸಂದಿವೆ .,  ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶದ ವೀರಪುರುಷರ ತ್ಯಾಗ ಬಲಿದಾನ ಗಳ ಸಂಕೇತದಂತೆ ಪ್ರತಿವರ್ಷ ಆಗಸ್ಟ್ 15ರಂದು ಆಚರಿಸುವ  ಮಹಾಹಬ್ಬ ತನ್ನದೇ ಆದ ವೈಶಿಷ್ಟ್ಯ ತೆಹೊಂದಿದೆ.. ದೇಶಾಭಿಮಾನ ದೇಶಪ್ರೇಮ  ದೇಶದೆಲ್ಲೆಡೆ ಸಾಮೂಹಿಕವಾಗಿ ಅಭಿವ್ಯಕ್ತವಾಗುವ ಆ ಸುಸಂದರ್ಭ ಅಭೂತಪೂರ್ವ ವಾದುದು... ಆದರೆ ಆಗಸ್ಟ್ 2020  ಈ ವರ್ಷ...

ಹಾಸ್ಯ ಕತೆ

ಹಾಸ್ಯ ಕತೆ ಯಾವ ಲೈನು...?! ತಿಂಗಳುಗಳು ಕಳೆದರೂ ಶಾಲೆ ಆರಂಭ ವಾಗದಿದ್ದರೂ ತರಗತಿಗಳಂತೂ ಆರಂಭ ವಾದವು.ಅದೂ ಆನ್ಲೈನ್ ತರಗತಿಗಳು.. ಬರೋಬ್ಬರಿ ಮೂರ್ನಾಲ್ಕು ತಿಂಗಳಿಂದ ಮನೆಯೊಳಗೆ ಆಟೋಟಗಳಲ್ಲಿ ಮಗ್ನನಾಗಿದ್ದ ಗುಂಡು ಓದನ್ನೇ ಮರೆತಂತೆ,ಕೆಲವೊಂದು ಕಲಿತಿದ್ದು ನೆನೆಪಿಗೆ ಬಾರದೇ ಹೋಗಿದೆ... ಅಲ್ಲಿಗೂ ಎಚ್ಚೆತ್ತ ಸರ್ಕಾರ ಆನ್ಲೈನ್ ಶಿಕ್ಷಣ ನೀಡಲು ಶುರುಮಾಡ್ತು...!! ಟಿ.ವಿ.ಮೊಬೈಲ್ನಲ್ಲಿ ಗೇಮ್, ಚೋಟಾಭೀಮ್ ನೋಡುತ್ತಿದ್ದ ಗುಂಡನಿಗೆ ಟಿ.ವಿ.ಮೊಬೈಲ್ನಲ್ಲಿ ಪಾಠ ಅಂದ ತಕ್ಷಣ ಎಲ್ಲೋ ಒಂದ್ಕಡೆ ಗುಂಡನಿಗೆ ಭಯ ನಿರಾಶೆ.. ತರಗತಿಯಲ್ಲಿ ಪ್ರತಿಸಾರಿ ಪ್ರಶ್ನೆ ಕೇಳಿ ತಬ್ಬಿಬ್ಬು ಆಗಿ ಏಟು ತಿನ್ನುತ್ತಿದ್ದ ಗಣಿತ ಕ್ಲಾಸ್ನ ಮಿಸ್ ನೆನಪಾಯ್ತು ಗುಂಡನಿಗೆ.. ಇತ್ತ ಆಟದ ಕಡೆ ಗಮನ ಇಲ್ಲ ಓದಿನ ಕಡೆನೂ ಗಮನ ಇರದೇ ಗುಂಡನ ಮನೆ ಚಡಪಡಿಸ್ತು... ಅಷ್ಟರಲ್ಲಿ ಅವನಿಗೆ ಅವರಜ್ಜಿ ನೆನಪಾಗಿ ಅಜ್ಜಿ ಕಡೆ ಸಹಾಯ ತಗೆದುಕೊಂಡ್ರಾಯ್ತು ಅಂತ ಸಮಾಧಾನ ಪಟ್ಕೊಂಡ.. ಇತ್ತ ಅಜ್ಜಿಗೆ ಆನ್ಲೈನ್ ಪಾಠದ ಘಮಲು ಇಲ್ಲ ಗಂಧನೂ ಇಲ್ಲ..ಮಿಸ್ ಮನೆಗೆ ಬಂದು ಪಾಠ ಹೇಳ್ತಾರೆ ಅಂತ ತಿಳ್ಕೋಂಡಿದ್ದಾರೆ ಅಜ್ಜಿ... ಒಂದಿನ ಅಜ್ಜಿ ಬಂದು..ಏನೋ ಗುಂಡ ಈವತ್ತು ನಿಮ್ಮ ಮಿಸ್ ನಿನಗೆ ಪಾಠ ಮಾಡೋಕೆ ಮನೆಗೆ ಬರ್ತಾರಂತೆ ಹೌದಾ..?!!!  ಮನಸ್ಸಿನಲ್ಲಿ ಏನೋ ಯೋಚಿಸುತ್ತ ಗುಂಡ ಹೇಳ್ದಾ..."ಹೌದು ಅಜ್ಜಿ ನಮ್ಮ ಮನೆಗೆ ಮಿಸ್ ಬರ್ತಾರೆ ಅವರಿಗೆ ಏನಾದ್ರೂ ತಿಂಡಿ ಮಾಡಜ್ಜಿ.. ಅಂತ ಅಜ್ಜಿನ ಕುಸುಲಾಯಿಸಿ...

ಟಂಕಾ

********* ಟಂಕಾ-೧ ********** ಕರೋನ ದಾಳಿ ಜೀವನೆಲೆಗೆ ಹಾನಿ ದುಸ್ತರಗೊಂಡ ಬಾಳಿನ ನಿತ್ಯಗೋಳು ಇತ್ತ ನೆಮ್ಮದಿ ಹಾಳು ************* ಟಂಕಾ-೨ ************* ಸದಾ ನಾನೆಂಬ ಭಾವವು ಒಳಿತಲ್ಲ ನಮ್ಮವರೆಂದು ಬಾಳು ಜೊತೆಜೊತೆಗೆ ಬದುಕನ್ನು ಗೆಲ್ಲುವೆ ಸಿದ್ದು ಮೂರ್ತಿ, 

ಸಭ್ಯತೆ

ಸಭ್ಯತೆ (ನ್ಯಾನೋ ಕಥೆ) ರಾಜಪ್ಪ ಮತ್ತು ರಾಮಪ್ಪ ತಮ್ಮಿಬ್ಬರು ಮಕ್ಕಳೊಂದಿಗೆ ಒಂದು ಕಚ್ಚಾ ರಸ್ತೆ ಯಲ್ಲಿ ವಾಯುವಿಹಾರಕ್ಕೆಂದು ತೆರಳಿರುತ್ತಾರೆ. ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿದ್ದ ರಾಮಪ್ಪ ತನ್ನ ಮಗನನ್ನು  ಹೊಗಳುತ್ತಾ ಶಾಲೆಯಲ್ಲಿ ಓದು  ಆಟಗಳೆಲ್ಲದರಲ್ಲಿ ನನ್ನ ಮಗ ಮುಂದು ಶಾಲೆ ನನ್ನ ಮಗನಿಗೆ ಎಲ್ಲಾ ಕಲಿಸುತ್ತದೆ ಎನ್ನುತ್ತಾನೆ..ಅಷ್ಟರಲ್ಲಿ ಮುದುಕನೊಬ್ಬ ನೀರು ನಿಂತ ರಸ್ತೆ ದಾಟಲಾಗದೆ ಜಾರಿ ಬೀಳುತ್ತಾನೆ.ಸಾಮಾನ್ಯ ಕನ್ನಡ ಶಾಲೆಯಲ್ಲಿ ಓದುತ್ತಿದ್ದರಾಜಪ್ಪನ ಮಗ ಓಡಿಬಂದು ಮುದುಕನನ್ನು  ಹಿಡಿದುಕೊಂಡು ನಿಧಾನವಾಗಿ ಮೇಲೇಳಲು ಸಹಾಯ ಮಾಡುತ್ತಾ ಕೈ,ಮತ್ತು ಬಟ್ಟೆಗಂಟಿದ ಮಣ್ಣನ್ನು ತನ್ನ ಕೈಯಿಂದ ಸ್ವಚ್ಚ ಗೊಳಿಸುತ್ತಾ ನಿಧಾನವಾಗಿ ಮುದುಕನನ್ನು ಸ್ವಲ್ಪ ದೂರದ ವರೆಗೆ ಕೈ ಹಿಡಿದು ನಡೆಸುತ್ತಾನೆ..ಇದನ್ನು ರಾಮಪ್ಪಮತ್ತು ಅವನ ಮಗ ಮೂಕವಿಸ್ಮಿತರಾಗಿ ನೋಡುತ್ತಾ ನಿಂತರು..!!!. ಓದಿನಲ್ಲಿ ಎಷ್ಟೇ ಮುಂದಿದ್ದರು ಸಭ್ಯತೆ ಕಲಿಸದ ಶಿಕ್ಷಣ ನಿಜಕ್ಕೂ ವ್ಯರ್ಥ., ಪರಿಪೂರ್ಣ ವಲ್ಲ ಸಿದ್ದು ಮೂರ್ತಿ..

ಟಂಕಾ

  ಸಂಘ ಸಂಘಜೀವಿಯ ಮಾನವ ಸಮಾಜದ ಸುಗಮಕಾರ ಕೂಡಿ ಬಾಳುವ ಇಚ್ಚೆ ಹೊರುವ ಸಮಭಾರ ಸಾಹಿತ್ಯ ಮನದ ಭಾವ ಅರಳಿದ ಸುಮವು ಪರಿಮಳವು ಚೆದುರಿ ಚೆಲ್ಲುವಂತೆ ಸಾಹಿತ್ಯ ಕುಸುಮವು ಸೇವೆ ನಿಸ್ವಾರ್ಥ ಸೇವೆ ನಮ್ಮ ಗುರಿಯಾಗಲಿ ಬದುಕಿನಲಿ ಇದು ನೀತಿಯಾಗಲಿ ಅರಿತು ನಡೆಯಲು ಶ್ರಮ ಶ್ರಮವಿಲ್ಲದೆ ಪಡೆವ ಜಯ ವ್ಯರ್ಥ ಫಲನಿರೀಕ್ಷೆ ಇಲ್ಲದ ಶ್ರಮಗಳ ಗೆಲುವು ನಿತ್ಯ ಸತ್ಯ ಸಿದ್ದುಮೂರ್ತಿ

ಪತ್ರಿಕೆ ಯಲ್ಲಿ ಪ್ರಕಟಗೊಂಡ ಬರಹ

Image

ಪತ್ರಿಕೆ ಯಲ್ಲಿ ಪ್ರಕಟಗೊಂಡ ಬರಹ

Image

ಚಿಂತನ ಬರಹ

Image

ನ್ಯಾನೋ ಕಥಾ ಸ್ಪರ್ಧೆ

Image

ಪ್ರಶಸ್ತಿ ಗೌರವಗಳು

Image

ಸೋದರ ವಾತ್ಸಲ್ಯ

Image

ಆಸೆಯ ಬಾಳು

ಆಸೆಯ ಬಾಳು ಈಡೇರದ ಆಸೆಗೆ ಬದುಕ ನೆಮ್ಮದಿ ಹಾಳು ಸುಖದ ಗೀಳಿಗೆ ಗಂಟು ಬಿದ್ದ ಬಾಳು ಆಸೆಯ ಬೆನ್ನೇರಿ ಓಡುವ ಗೀಳು ನಿಲುಕದ ಆಸೆಗಳು ಬದುಕಲಿ ತಂದಿಟ್ಟ ಗೋಳು..! ಸಿದ್ದುಮೂರ್ತಿ

ಆಧ್ಯಾತ್ಮಿಕ ವಿಚಾರ

••••••••••••••••••••••• ಆಧ್ಯಾತ್ಮಿಕ ವಿಚಾರ ಒಂದು ಚಿಂತನೆ °°°°°°°°°°°°°°°°°°°°°°°°°°°°° ಆಧ್ಯಾತ್ಮಿಕತೆ ಮನುಷ್ಯನ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಬದಲಾಯಿಸಬಲ್ಲ ಒಂದು ಉತ್ತಮ ವಾದ "ಜ್ಞಾನ ಧಾರೆ"ಇದು ಧರ್ಮದ ಯಥೋಚಿತವಾದ ಜ್ಞಾನಗಳನ್ನು ಒಬ್ಬ ಸಾಮಾನ್ಯ ವ್ಯಕ್ತಿಗೆ ನೀಡಿ ಅವನ ಸುಪ್ತಜ್ಞಾನವನ್ನು ಎಚ್ಚರಿಸುವ ಮೂಲಕ, ಮೌಲ್ಯಗಳು, ಸಕಾರಾತ್ಮಕ ಆಲೋಚನೆಗಳು, ಏಕಾಗ್ರತೆ, ಧ್ಯಾನ, ನಂಬಿಕೆ, ತಾಳ್ಮೆ,ಈ ಎಲ್ಲಾ ಗುಣಗಳು ಅವನಲ್ಲಿ ಮೈಗೂಡುವಂತೆ ಮಾಡುತ್ತದೆ.., ಪ್ರಸ್ತುತ ಸಮಾಜದಲ್ಲಿ ಕಾಣೆಯಾಗುತ್ತಿರುವ ಮೌಲ್ಯಗಳು ವ್ಯವಸ್ಥೆ, ನೀತಿ, ವಿಶ್ವಾಸ, ನಡೆನುಡಿ ಎಲ್ಲವೂ ಆಧ್ಯಾತ್ಮ ಜ್ಞಾನದ ಅರಿವಿಲ್ಲದ ಕಾರಣ ವ್ಯಕ್ತಿಯ ವ್ಯಕ್ತಿತ್ವದಿಂದ ಮರೆಯಾಗುತ್ತಿವೆ., ಸಂಸ್ಕೃತಿ, ಸಂಸ್ಕಾರಗಳು ಮರೀಚಿಕೆಯಾಗಿದೆ.. ಆದ್ದರಿಂದ ಪ್ರಸ್ತುತ ಆರೋಗ್ಯ ಕರ ಸಮಾಜ ನಿರ್ಮಾಣ ವು ಆಧ್ಯಾತ್ಮಿಕ ಹಿನ್ನೆಲೆಯ ವ್ಯಕ್ತಿ ಮತ್ತು ಸಮುದಾಯದಿಂದ ಸಾಧ್ಯ ಎಂಬ ಆಶಯ ವನ್ನ ತೋರುತ್ತೇನೆ.. ಆಧ್ಯಾತ್ಮಿಕ ವಿಚಾರಗಳು ವ್ಯಕ್ತಿಯ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ.. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ವ್ಯಕ್ತಿತ್ವ ಹೊಂದಲು ಸಹಕಾರಿಯಾಗಿದೆ.. ಆಧ್ಯಾತ್ಮ ತತ್ವಗಳು ಧರ್ಮದ ಹಿನ್ನೆಲೆ ಹೊಂದಿರುವ ಕಾರಣ ಆ ತತ್ವಗಳನ್ನು ತನ್ನ ಜೀವನದಲ್ಲಿ ಅನ್ವಯಿಸಿಕೊಳ್ಳವ ವ್ಯಕ್ತಿ ಸತ್ಪ್ರಜೆ , ಸತ್ಪುರುಷರ ಸಾಲಿನಲ್ಲಿ ರಾರಾಜಿಸುತ್ತಾನೆ... ಆಧ್ಯಾತ್ಮದ ವ...

ಕಾನನರೋಧನ

🌱ಕಾನನರೋಧನ🌱 ಹಚ್ಚ ಹಸಿರು ಪಚ್ಚೆ ಪೈರು ಗಿಡ ಬಳ್ಳಿ ನಗುತಾವೆಂದು ವಸುಂಧರೆಯ ಬಳಸಿ ತಾ ಹಸಿರು ಹೊದಿಸಿ ನಲಿತಾವೆಂದು ಧರಣಿ ನವವಧುವಂತೆ ನಾಚಿದ ಮಿಂಚು ನಲಿವುದೆಂದು ನೆಲಮುಗಿಲ ಸಂಗಮದ ಶಾಶ್ವತ ಸೊಬಗ ಕಾಣುವುದೆಂತು ಧರಣಿಯ ಜೀವಬಳ್ಳಿಯ ಉಸಿರ ಕಸಿವ ಸ್ವಾರ್ಥ ದಲ್ಲಿ ಬಲಿಯಾದ ಕುಡಿಗಳ, ಎಲೆ ಬಳ್ಳಿ ರೆಂಬೆ ಕೊಂಬೆಗಳ..., ಕೊನೆಗೆ ಮೂಲ ಬೇರುಗಳ ಹಿರಿದು ತಗೆದ ಹಿಗ್ಗಿನಲಿ ಕುಣಿದಿದ್ದ ಸ್ವಾರ್ಥ ,ಧರಣಿಒಡಲ ನೋವ ಇಮ್ಮಡಿಸಿತು ಅರಳಿ ನಗುವ ಹೂವ ಮೊಗ್ಗಲ್ಲಿ ಚಿವುಟಿ ಎಸೆದು ಬಿಗಿದಪ್ಪಿದ ಲತೆಬಳ್ಳಿಯ ನಡುವ ಕತ್ತರಿಸಿ ತೆಗೆದು ಬಿರುಗಾಳಿಗೆ ತೂಗಿ ತಡೆವ ಮರಗಳ ಒಡಲು ಕೊಯ್ದ ವನ ವ ಕಾಡಿದ ರೋಧನಕೆ,ಮನೆಯಂಗಳ ಮಿನುಗಿತು ಧರೆಗುರುಳಿದ ಮರಗಳು ಜೀವ ಕಳೆದಕೊಂಡು ಬಯಲುದ್ದ ರಂಗಾಗಿ ಮಲಗಿದ ರಹದಾರಿಗಳು ಮಲಿನ ಗಾಳಿ ಒಸರಿ ಇಂಚೂಬಿಡದ ಕಾಂಕ್ರೀಟು ವನಗಳು ಕೋಪದಿ ರಾಚಿದ ಮಳೆಗೆ ಕೊಚ್ಚಿ ಹೋಗುವ ಮಣ್ಣರಾಶಿ ನರನ ನಡೆಗೆ  ಕೋಪದಿ ಗುಡಗಿಹಳು ಧರಣಿ ಸ್ವಾರ್ಥ ದ ತಳಹದಿ ಕಳಚುವ ತನಕ,ಜೀವರಾಶಿಗೆ ಕಂಟಕ ತಳೆದು, ಕುಕೃತ್ಯ ಗಳ ತೆರೆದು ಕೊಲ್ಲುವತನಕ ಅರಿವು ಮೂಡುವ ತನಕ, ಮನುಜನ ಸ್ವಾರ್ಥ ಅಳಿವತನಕ..!!!! 🌱ಸಿದ್ದುಮೂರ್ತಿ🌱

ಸಾರ್ಥಕತೆ

ಸಾರ್ಥಕತೆ ************ ಸ್ವಂತಿಕೆ ಯಲ್ಲಿ ಸೊಗಸುಂಟು ಹಂಚಿ ಉಣ್ಣುವ ಬದುಕಲ್ಲಿ ನೆಮ್ಮದಿಯುಂಟು ಸದಾ ನಾನೆನ್ನುವ ಜೀವಕ್ಕೆ ಗೋಳುಂಟು, ನಾವು ನಮ್ಮವರೆಂದರೆ ಬದುಕು ಸಾರ್ಥಕವುಂಟೆಂದ ಮಾಲತೇಶ..!! ಸಿದ್ದು ಮೂರ್ತಿ

ಆತ್ಮಬಲ

ಆತ್ಮಬಲ ಶ್ರಮದಲ್ಲಿ ಫಲವುಂಟು, ಪ್ರಯತ್ನಗಳಲ್ಲಿ ಗೆಲುವುಂಟು ಛಲದೊಳು ಗುರಿಯುಂಟು ನಂಬಿಕೆ, ವಿಶ್ವಾಸ ಕಾಯಕ ನಿಷ್ಠೆ,ಆತ್ಮಬಲದ ಅರಿವುಳ್ಳ ಬದುಕ ರೂಢಿಸಿಕೊಂಡು ಹೋಗುವದ ತಿಳಿ ಶ್ರೀ ಮಾಲತೇಶ ಸಿದ್ದುಮೂರ್ತಿ

ನಿಗೂಢ ಛಾಯೆ

ನಿಗೂಢ ಛಾಯೆ ~~~~~~~~~~~ ಕಾರ್ಮುಗಿಲು ಕವಿದ ಕತ್ತಲು ಬೆಳಕ ನುಂಗಿ ವ್ಯಾಪಿಸುತ್ತಿದೆ ಚದುರುತ್ತಿವೆ ವೇಗದಲ್ಲಿ ಕರಿನೆರಳ ಛಾಯೆಗಳು ಕತ್ತಲೊಳಗೆ ಉಳಿದ ಜೀವಿಗಳ ಜೀವ ಹಿಂಡುವ ಹುನ್ನಾರದಲಿ... ದಿನದ ಬೆಳಕೋ ಮಾಮೂಲು ಮೌನಗತ್ತಲ ತಲುಪದ ಕಂದೀಲು ಊರ ತೊರೆದು ಬದುಕ ಅರಸಿ ದುಡಿವ ಛಲಗಳ ಹಿಂಡುಗಳು ಬೀದಿ ಬದಿಯ ಬಿಡಾರಗಳು ನಿತ್ಯ ವ್ಯಥೆಯ ಕಥೆಗಳು... ಅಲಲ್ಲಿ ಅಣಿಯಾದ ಜಾಲ ಹೊಂಚುಹಾಕಿ ಕುಳಿತಂತೆ ಕಾಲ ಕೊನೆಗಾಗಿ ಜೀವಿಗಳ ಉಳಿಗಾಲ ವ್ಯಥೆಯ ಹೊದ್ದ ಬದುಕು ನೆಮ್ಮದಿ ಹುರಿದು ಮುಕ್ಕಿದ ಭಯದಣಕು ಮನವು ಮೌನದೆರೆಯ ಮುಸುಕು.... ಬದುಕಿದು ಬೂದಿಯಂತೆ ನಿಗಿ ನಿಗಿಸುವ ಕೆಂಡಗಳ ಮರೆಮಾಚಿ ದಹಿಸುವ ಕಿಚ್ಚ ಒಡಲೊಳಗಿಟ್ಟು ಕಾಲದೊಳಗೆ ನಿಗೂಢ ದಂತೆ ವಾಸ್ತವದಲಿ ಅರಿವಾಗದಂತೆ ಬಂದೆರುಗುವ ವಿಧಿ ತಿಳಿಯದಂತೆ....   ~ಸಿದ್ದುಮೂರ್ತಿ.

ನಂಟು

ನಂಟು ಜೇನ ಸಿಹಿಯಂತೆ ಬಂಧಗಳು ಒಲವು ಜಿಗುಟು ಅಂಟಿನಂತೆ ಪ್ರೀತಿಯ ನವಿರು ಎಳೆಯ ಜಾಲ ನಲಿವು ಚೆಲುವು ಗಳಲ್ಲಿ ಬೆಸೆದುಕೊಂಡಂತೆ ಬಿಡಿಸಲಾಗದ ನಂಟು ಬದುಕಲ್ಲಿ ಉಳಿದಂತೆ -ಸಿದ್ದುಮೂರ್ತಿ

ಕನಸು

ಕನಸು ಕಾಣದ ತಿರುವುಗಳ ರಹದಾರಿ ಅರಿವುಗಳ ಮರೆಮಾಚಿ ನಿಗೂಢಗಳ ಸರಣಿ ಹಿಂದಿಟ್ಟು ಮುಂದಿಟ್ಟ ನಿಲುವುಗಳು ಭವಿತವ್ಯದ ಕನಸುಗಳಾಗಿ ಸಿದ್ದು ಮೂರ್ತಿ

ಹಾವಳಿ

ಹಾವಳಿ ಅಸಂಖ್ಯ ಜೀವಹಾನಿ ಮುಗಿಯದಂತಿದೆ ಈ ದುರಂತ ಕಹಾನಿ ಅಳಿಯುವದೆಂತು ಈ ಕರೋನಾದ ಹಾವಳಿ ಸಿದ್ದು ಮೂರ್ತಿ

ಇಬ್ಬನಿ

ಇಬ್ಬನಿ ಹಸಿರು ಹಾಸು ಹೊಳೆವ ಹನಿ ಮುತ್ತು ಪ್ರಕಾಶಿಸಿದೆ ಚೆಲುವಿನ ಗಮ್ಮತ್ತು.. ನಿಸರ್ಗ ಕರಾಮತ್ತು ~ಸಿದ್ದು ಮೂರ್ತಿ

ಒಲವು

ಒಲವು ಒಲವ ಮಾತು ಅರಳಿದಂತೆ ಸುಮ ನಗುತಲಿದೆ ಸಿದ್ದು ಮೂರ್ತಿ

ಮನ ಮುಗಿಲು

ಮನ ಮುಗಿಲು ಮನ ಮುಗಿಲು ಭಾವ ತಾರೆಗಳಂತೆ ಆಸೆ ಹೊಳಪು ಸಿದ್ದು ಮೂರ್ತಿ

ಹಸಿವು

ಹಸಿವು ~~~~~~ ಕಷ್ಟಗಳಿವು ಯಾರ ಹೊಣೆ, ಬದುಕ ಜೊತೆ ಅಣಿಯಾದ ಹೊರೆ ಹಗಲಿರುಳು ನೋವು ನಲಿವುಗಳ ಜೊತೆಗೆ ಹಸಿವೊತ್ತ ಒಡಲ ಜೀವ ನಲುಗಿದೆ. ದಿನವಿಡಿ ದುಡಿದು ದಣಿವ ಬದುಕ ಹಸಿದ ಚೀಲಕೆ ತುತ್ತುತುಂಬುವ ತನಕ ತೆವಳುವ ದಿನಗಳು ತ್ರಾಸ ಹೊತ್ತುಗಳು ಹಸಿವೇ ಬದುಕ ಗುರಿಯಾದ ಆಸೆಗಳು. ಬದಿಯ ಬಿಡಾರವೆ ,ಬದುಕ ವಠಾರ ಹರಡಿ ಕಲಸಿದ ಮರಳು ಸಿಮೆಂಟು ಜೆಲ್ಲಿಯೊಳಗೆ ಬೆರೆತ ಕನಸುಗಳ ಕಪಾಟು ಗಾರೆಗೆ ಬೆರೆತ ಬದುಕು ಹಸಿವನೀಗಿದ ಪಾಟು. ತಿರುಗಿದರು ಹಸಿವ ಕಳೆಯಲು,ಅಂಗಲಾಚಿ ಕಂಕುಳ ಕುಡಿ ಹೊತ್ತು,ಹಸಿದಜೀವ ಕೈ ಚಾಚಿ ಹರಕು ಚಿಂದಿ.,  ಚಿದ್ರಗೊಂಡ ಮನದಿಚ್ಚೆಗಳು ಹಸಿವು ನೀಗಿ ದೊಡನೆಯೆ ಅರಳೊ ಇಚ್ಚೆಗಳು. ಶ್ರಮಿಕರು ಅರಸಿದ, ಶ್ರಮದ ಬದುಕು ಜೊತೆಗಂಟಿದ ವ್ಯಥೆಯ  ಅಣುಕು ನೋವು ನಲಿವ ಮಿಶ್ರಣದ ಸೊಗಡು ಆಸೆ ಕನಸುಗಳ ಉಂಡು ತೇಗಿದೆ .,ಹಸಿವಿನ ಬದುಕು. ಸಿದ್ದು ಮೂರ್ತಿ

ಅರಿವು

ಅರಿವು ತನ್ನ ತಾ ಅರಿಯದೇ,ತಿಳಿಯದೇ ಇತರರನ್ನು ಅರಿಯಲು ಮುಂದಾದೊಡೆ ಅರಿವಿನ ಅರ್ಥವೇ ಅನರ್ಥ  ಶ್ರೀ ಮಾಲತೇಶ  -ಸಿದ್ದುಮೂರ್ತಿ

ಆಸೆ

ಆಸೆ ಇನ್ನಿಲ್ಲದಂತೆ ಕಾಡುತ್ತದೆ ., ಬಣ್ಣದ ಭಾವಗಳ ಹೊತ್ತು ಕನಸ್ಸಿನ ರೆಕ್ಕೆಗಳ  ಕಟ್ಟಿ ಎಲ್ಲೆ ಮೀರಿ ಹಾರುತ್ತದೆ , ಮಿಕ್ಕಿ ಮಿಗಿಲಾದರೂ ನಿಲ್ಲದೇ ಓಡುತ್ತದೆ ಮರೀಚಿಕೆಯ ಹಿಂದೆ... -ಸಿದ್ದುಮೂರ್ತಿ

ಸತ್ಯಾರ್ಥ ಪ್ರಕಾಶ

  ಸತ್ಯಾರ್ಥ ಪ್ರಕಾಶ ಹಾಗೆಯೇ ತಾಳ್ಮೆ ಮನುಷ್ಯನ ವ್ಯಕ್ತಿತ್ವವನ್ನೇ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.. ಆದ್ದರಿಂದ ತನ್ನೆಲ್ಲಾ ಕೆಲಸಗಳಲ್ಲಿ ತಾಳ್ಮೆ ಅಗತ್ಯ... ತಾಳ್ಮೆಯಿಂದ ನಮ್ಮ ಸಹನಾ ಶಕ್ತಿ ಯನ್ನು ಹೆಚ್ಚಿಸುತ್ತದೆ. ಸಂಧರ್ಭ ಗಳು ಯಾವುದೇ ಇರಲಿ, ಪರಿಸ್ಥಿತಿ ಗಳು ಹೇಗೇ ಇರಲಿ ನೋವಿರಲಿ ನಲಿವಿರಲಿ ಅವುಗಳನ್ನು ಮೊದಲು ಸಮಾನ ಮನಸ್ಕನಾಗಿ ಸ್ವೀಕರಿಸುವುದು ಬಹುಮುಖ್ಯ.ಅದೇ ಸಹನಾ ಶಕ್ತಿ. ಈ ಸಹಿಷ್ಣುತೆ ಮನೋಭಾವ ಸಕಾರಾತ್ಮಕ ಆಲೋಚನೆ ಯೆಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ.ಈ ಸಕಾರಾತ್ಮಕ ಆಲೋಚನೆ ಗಳು ನಮ್ಮ ಯಾ ವುದೇ ಸಮಸ್ಯೆ ಗಳನ್ನು ಪರಿಹರಿಸುವಲ್ಲಿ ಸೂಕ್ತ ಮಾರ್ಗದರ್ಶನ ನನ್ನು ನೀಡುತ್ತದೆ. ಆದ್ದರಿಂದ ಸಹನೆಯಿಂದ ವರ್ತಿಸುವುದು ಮುಖ್ಯ ವಾಗಿರುತ್ತದೆ ಸಹನೆಯಂತ ಆದರ್ಶ ಗುಣಗಳನ್ನು ನಾವು ಬೆಳಸಿಕೊಳ್ಳೋಣ.. ಸಹನೆಯನ್ನು ಮೀರಿದ ವರ್ತನೆ ಗಳು ನಮ್ಮನ್ನು ಕೋಪಕ್ಕೆ ಎಡೆಮಾಡಿ ಕೊಡುತ್ತದೆ , ಮತ್ತು ಮುಂದಾಗುವ ಅನರ್ಥ ಗಳಿಗೆ ಬೆಲೆ ತೆರಬೇಕಾಗುತ್ತದೆ.....

ಸಾಮರಸ್ಯ

ಸಾಮರಸ್ಯ ಮುಗಿಲ ಚೆಲವೋ ನೇಸರ ಭುವಿಗೋ ವನಸಿರಿ ಸಾಗರ ರವಿಯ ಹೊಂಬೆಳಕ ಧಾರೆ ಭುವಿಗೆ ಸಂಚಲನ ಧಾರೆ ನಡುವೆ ನವಿರ ಚೆಲುವು ನಿಸರ್ಗ ಸೊಬಗಿನ ಒಲವು ಮಧುರ ಬಂಧದ ನಲಿವು ತಳೆದ ಸಾಮರಸ್ಯದ ಹೊನಲು -ಸಿದ್ದುಮೂರ್ತಿ

ಮನವೆಂಬ ಹೂ

ಮನವೆಂಬ ಹೂ ಮನವೆಂಬ ಹೂವಿಗೂ ಸದಾ ಅರಳುವ ಇಂಗಿತ ಒಲವಾಗಿ ಮಮತೆಯಾಗಿ ವಾತ್ಸಲ್ಯವಾಗಿ ಪ್ರೀತಿಯಾಗಿ ಭಕ್ತಿಯಾಗಿ ಇಚ್ಚೆಯಾಗಿ ಭಾವರಸಗಳು ಸದಾ ಅರಳುತ್ತಾ ಆಯಾ ಭಾವದ ಕುಸುಮ ಸೂಸುವ ಸುಗಂಧದಂತೆ. ಪರಿಮಳ ಭರಿತ.... -ಸಿದ್ದುಮೂರ್ತಿ

ಅಂತ್ಯವಲ್ಲ ಆರಂಭ

Image
 ಅಂತ್ಯವಲ್ಲ ಆರಂಭ ~~~~~~~~~~ ಬದುಕ ಬುತ್ತಿಯ ಭಾರ ಹೊತ್ತು ಇಳಿಸಂಜೆಯ ಜೀವಕೆ ನೆನಪಾಗಿ ನೋವು ಮಾತಾಗದೆ   ಮಡುಗಟ್ಟಿದೆ ಮೌನ ಮುಸಿ ನಕ್ಕು ಮರೆಯಾಗಿದೆ ಬೊಗಸೆಯಲಿ ಬಚ್ಚಿಟ್ಟ ಕಾಳಜಿ ಹೊಸತನ ತಳೆದು ತೊರೆಸಿದೆ.. ಟಿಸಿಲೊಡೆದ ರಂಬೆಗೆ ಅಂಟಿದ್ದ ಹಣ್ಣೆಲೆ ಅಲ್ಲಲ್ಲಿ ಉದುರುದುರಿ ಚೆದುರಿವೆ ನೆಲೆಗಾಣದೆ... ಆಗಿನ್ನೂ ಕುಡಿಗಳ ಆರೈಕೆ ಬಸಿದ ನೆತ್ತರ ಬೆವರನಿಯ ಬಡಕಲು ದೇಹವೇ ಕಣ್ಣೊಳಗೆ ಬಚ್ಚಿಟ್ಟು ನೀರೆರೆದು ಪೋಷಿಸಿತ್ತು ಹಸನಾಗಿ ಬೆಳೆದು ಸೊಗಸಾದ ಬದುಕಿನಾಶ್ರಯ ಪಡೆವ ಕನಸೊತ್ತು.. ಉರುಳುರಳಿದ ದಿನಗಳು ಬದಲಾದ ಋತುಗಳಲ್ಲಿ ಉದುರಿದೆಲೆಗಳ  ಚಿಗುರಿದೆಲೆಗಳು ನಗುವ ಹಸನು ಬದುಕ ಹಿಂದೆ ಬಸವಳಿದ ಶ್ರಮಗಳ ಮರೆತು .. ಅರಿಯದ ಪ್ರಜ್ಞೆಗಳು ಹಿಂಡಿಂಡು ಸಾಗಿ ಹಂಡೆಗಟ್ಟಲೆ ಅಭಿಷೇಕ ಸುರಿದ ಶಿಲೆಗಳೇನು, ಕರಗಿ ವರವಿತ್ತವೇ ಹತ್ತಿರದ ಹೆತ್ತು ಹೊತ್ತ ಜೀವಗಳ ಮರೆತು ತೊರೆವವರ ಬದುಕು ಎತ್ತಲಾಗಿ..? ಬೆಂದು ಸುಕ್ಕಾದರೂ ಅಂಜದ ಎದೆ ತಳೆದ ಅದಮ್ಯ ಇಚ್ಚೆ,ತೊರೆದಹಂಗು ಕೈಹಿಡಿದವಳ ಕರಪಿಡಿದು ಸಾಗಿದೆ ಹೊಸ ಇಂಗಿತದಲಿ ಹೊಸ ಬದುಕ ಆರಂಭಿಸಿ... ಸಿದ್ದುಮೂರ್ತಿ

ರೈತಾಪಿ ಜೀವನ

ರೈತಾಪಿ ಜೀವನ ~~~~~~~ ಹಸಿರು ಹೊದ್ದ   ಸೀಮೆ, ಉಸಿರಲಿ ಬೆರೆತ ಗರಿಮೆ ಸೊಬಗ ಸೊಗಡು ಅಂಟಿ ಮೆರೆದ ಬದುಕು ಸಿರಿಯಲಿ ಮನೆಯಂಗಳ  ಚಿತ್ರಣ ಮನವೊ ನಗುವ ಅಂಕಣ ದಿನವೂ ಹೊಸ ಕಳೆಯು ತಳೆದು ದೂಡುವ ಬದುಕು ನಿತ್ಯ ಹೃದಯಂಗಮ ಮೂಡಣ   ನೇಸರ   ಏರಿದ   ನಗುತಲಿ ನಿದಿರೆಯ  ಕಳೆದು ಮೈಯ ಗೊಡವಿ ನಿತ್ಯ ಗೆಲಸ ಹೆಗಲಿಗೇರಿ ನಿಷ್ಕಲ್ಮಶ  ಭಾವ, ತೂಗಿ ತೊನೆವ ತೆನೆಯಂತೆ ಹಸನಾದ ನೆಲದಲ್ಲಿ ಕನಸ   ಬೀಜ ಬಿತ್ತಿದೆ.. ಕಣ್ಣ ರೆಪ್ಪೆಯೊಳಗೆ ಬಚ್ಚಿಟ್ಟಿ ಕನಸ ಕೂಸಂತೆ ಪೋಷಿಸಿಟ್ಟಿ ಬೆಳೆಯ ಫಸಲು ನಿರೀಕ್ಷಿಸಿ... ಚಿಗುರು ಒಡೆಯುವ ಬಯಕೆಯು  ತನ್ನೊಳಗೆ ಅವಿತು ವರುಣನ   ಕಾಯ್ವ ಮನಗಳಿಗೆ ಹೊಲ ಗದ್ದೆಗಳೇ ಬೆಲ್ಲ ಮೆದ್ದ ಬದುಕಂತೆ ದಣಿದ ದೇಹ ಬಸಿದರಕ್ತ ಬೆವರು ಹನಿ ಕಾಲಿಗೆ ಅಂಟಿದ ಕೆಸರು ಮುದ್ದೆ ಬಾಯಿ ಮೊಸರು ಸವರಿದಂತೆ ಸುಖದ ಜಾಡ ಹಿಡಿದು ಸವೆದ ಜೀವವು ರಾಶಿ ಮಾಡಿ ಹಿಗ್ಗುವ   ಸುಗ್ಗಿ ಯಂತೆ.. ಗೋಧೂಳಿ ಹೊತ್ತು ರಾಸುಗಳ   ಹಿಂಡಿಂಡು ಸಾಗಿದ   ಸಾಲುಗಳು, ಸಾಲಿಕ್ಕಿದ ಬಾನಾಡಿ  ದಂಡು ಮುಗಿಲು  ಮುಡಿದ ಹೂಗಳಂತೆ... ದಿನದ   ಬದುಕು ಮರಳಿತ್ತು ಗೂಡಿಗೆ.... ••ಸಿದ್ದುಮೂರ್ತಿ

ದೈವ (ವಚನಗಳು)

ವಚನ-೧ ಕಂಡ ಶಿಲೆಗಳಿಗೆಲ್ಲಾ ಪಂಚಾಮೃತ ಸುರಿದು ಪ್ರಚಾರದ ಸ್ವಾರ್ಥ ಕ್ಕೆ ದಾನವೆರೆದು ನಿಜಹಸಿವುಗಳ ಕಡೆಗಿಟ್ಟು ,ಹೆತ್ತವರ ಮರೆತು ದೈವ ಕಾಣಹೊರಟವರ ಮೆಚ್ಚನಾ ಶ್ರೀಮಾಲತೇಶ ~~ಸಿದ್ದು ಮೂರ್ತಿ

ಸೃಜನಶೀಲತೆ

ಇದುವರೆಗೂ ಯಾರೂ ಮಾತನಾಡದ ಸಂಗತಿಗಳ ಬಗ್ಗೆ ಯೋಚಿಸುವುದೇ ಸೃಜನಶೀಲತೆ...   ~ಹೋವರ್ಡ ಗಾರ್ಡನರ್ (ಮನೋವಿಜ್ಞಾನಿ)

ಧರ್ಮ ಮಾರ್ಗ

ಲೇಖನ ಮಾಲಿಕೆ ೧           ಶೀರ್ಷಿಕೆ:ಧರ್ಮ ಮಾರ್ಗ ಬಹಳ ಹಿಂದಿನಿಂದಲೂ  ನಾವು ನಮ್ಮ ಜೀವನದಲ್ಲಿ ಅನೇಕ ಆಚರಣೆಗಳು, ಪದ್ದತಿಗಳು, ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದೇವೆ.ಇವೆಲ್ಲ ನಮ್ಮ ಜೀವನವನ್ನು ಒಂದು ಚೌಕಟ್ಟಿನಲ್ಲಿ ಇಟ್ಟಿರುತ್ತದೆ.. ಆದರೂ ಇವು ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹೀಗೆ ಜೀವನದಲ್ಲಿ ಅಳವಡಿಸಿಕೊಂಡಿರುವ ಕಾನೂನು ಕಟ್ಟಳೆಗಳೇ 'ಧರ್ಮ ಶಾಸ್ತ್ರಗಳು'..ಇವು ಮೌಲ್ಯಯುತವಾದ ಜೀವನತತ್ವಗಳನ್ನು ಸಾರುತ್ತವೆ.ಒಂದುರೀತಿಯಲ್ಲಿ ಧರ್ಮ' ಜೀವನಸಂವಿಧಾನ ,'ವಾಗಿದೆ.. ಇದು ಪ್ರತಿಯೊಂದು ಹಂತದಲ್ಲೂ ಜೀವನನಡೆಸುವ ಮಾರ್ಗ,ಆದರ್ಶ ಮಾನವೀಯ ಮೌಲ್ಯ, ಸನ್ನಡತೆ, ಸಂಸ್ಕಾರ ಗಳನ್ನು ಅರ್ಥೈಸುವ ಸಾರ.. ಶಿಷ್ಟಾಚಾರ,ಸಭ್ಯತೆ, ಸನ್ನಡತೆಯ  ಆಚರಣೆಗಳೇ ಸಂಸ್ಕಾರಗಳು.. ಉತ್ತಮ ನಾಗರೀಕತೆ ಶಿಸ್ತು ಬದ್ಧತೆ,ಗುರುತರ ಜವಾಬ್ದಾರಿ, ರೀತಿ ನೀತಿಗಳು ,ಮಾನವೀಯತೆಗಳು ಸಂಸ್ಕಾರದ ಅರ್ಥದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಸಮಾಜ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದಲ್ಲಿ ನ ವಾಸ್ತವಾಂಶ ಗಳನ್ನು ಅವಲೋಕಿಸಿದಾಗ, ಪ್ರಸ್ತುತ ಜನಜೀವನದಲ್ಲಿ ಧರ್ಮ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ...ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಮಾತಿನಲ್ಲಿ, ನಾವು ಧರ್...

ಸತ್ಯಾರ್ಥ ಪ್ರಕಾಶ

ಸತ್ಯಾರ್ಥ ಪ್ರಕಾಶ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗಿರುತ್ತಿರುತ್ತವೆ. ಇದು ಎಲ್ಲರ ಜೀವನದಲ್ಲಿ ಮಾಮೂಲು, ಕಷ್ಟಗಳು ಬಡವ ಬಲ್ಲಿದ,  ಮೇಲು, ಕೀಳು  ಎಂಬಿತ್ಯಾದಿ ವರ್ಗದ  ಜನರನ್ನು ನೋಡುವುದಿಲ್ಲ.ಆದ್ದರಿಂದ  ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಬೇಕು.. ಸಾಮಾನ್ಯವಾಗಿ ವ್ಯಕ್ತಿ  ತನ್ನ ಜೀವನದಲ್ಲಿ ಯಾವುದೇ ಸಮಸ್ಯೆಗೆ ಎದೆಗುಂದದೆ ಸುಲಭ ವಾಗಿ ಎಲ್ಲ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅರ್ಥಮಾಡಿಕೊಡು ನಿಭಾಯಿಸಿಕೊಂಡು ಹೋಗುವ ಮನಸ್ಥಿತಿ ಯನ್ನು ನಾವು ಹೊಂದಬೇಕು.. ಆ ಸಮರ್ಥತೆಯನ್ನು ನಾವು ಪಡೆಯಲು ಮೊದಲು ನಮ್ಮ ಮೊದಲ ವ್ಯಕ್ತಿತ್ವ ಗಳನ್ನುರೂಪಿಸಿಗೊಳ್ಳಬೇಕು. ಮೊದಲಿಗೆ  ತಾಳ್ಮೆ., ಇದು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ... ತಾಳ್ಮೆ ಯು ಪರಿಸ್ಥಿತಿಯನ್ನು ಅವಲೋಕಿಸಲು ಸಮಯಾವಕಾಶ ನೀಡುತ್ತದೆ. ಅನಂತರ ಸಮಸ್ಯೆಗಳಿಗೆ ಪರಿಹಾರ ಗಳನ್ನು ಹುಡುಕಲು ಮುಂದಾಗಬೇಕು.. ಅಲ್ಲ ದೆ  ತಾಳ್ಮೆಯು  ಕೋಪವನ್ನು ನಿಯಂತ್ರಿಸುತ್ತದೆ.. ಕೋಪದಿಂದಗಬಹುದಾದ ಅನಾವುತಗಳನ್ನು ತಪ್ಪಿಸುತ್ತದೆ... ತಾಳ್ಮೆಯಿಂದ  ನಾವು  ನಮ್ಮ ವ್ಯಕ್ತಿತ್ವ ದಲ್ಲಿ ಇನ್ನೊಂದು  ಸಮರ್ಥತೆ ಯನ್ನು  ಪಡೆದುಕೊಳ್ಳಬಹುದು  ಅದುವೇ ಅವಲೋಕನ, ವಿಶ್ಲೇಷಣೆ.. ಪರಿಸ್ಥಿತಿ ಎಂತಹುದೇ ಇರಲಿ ಅದರ  ಸ್ವರೂಪ,  ಮೂಲ, ಪರಿಹಾರಗಳನ್ನು ಕಂಡುಕೊಳ್...

ಮಳೆಗಾಲ

ಇಳೆಯ ಮಜ್ಜನ ಮೊದಲ ಬಾರಿ ಮುಂಗಾರು ಸಜ್ಜಾಗುವ ಮುನ್ನಾ ತಂಪಿನ ಸಿಂಚನದಿ ರಮಿಸಿದ ಮುಗಿಲು ಧರೆಗೆ ಒಲವಧಾರೆಯಂತೆ. ಅರಳಿ ನಿಂತ ಹೂವ ಹಸಿರು ಮಿಂಚ ಎಲೆ ಬಳಕೋ ಲತೆಗಳು ಅಲಲ್ಲಿ ತುಂಬಿ ತುಳುಕಿ ಹಳ್ಳಕೊಳ್ಳ ಕೆನ್ನೀರ ದಾಟಿ ಕೆಸರ ಮೆತ್ತಿದ ಕಾಲ,ನಡಿಗೆಯಲ್ಲಿ ಛತ್ರಿ ನೆರವಾಗಿ ತೋಯದಂತೆ. ಅಜ್ಜನ ಹಳೆಯ ಮಾಳಿಗೆ ಮನೆ ಹನಿ ಜಿನುಗದಂತೆ ಹದವಾಗಿ ಜೋಡಿಸಿ ಹರಿವ ನೀರಿಗೆ ಪನ್ನುಳಿಗೆ ಜೋಡಿಸಿದೆ ಮಳೆಗಾಲ ಪ್ರಾರಂಭ ತುಸುಚಿಮುಕಿಸುವ ಹಿತವಾದ ಚಳಿಗೆ ಬೆಚ್ಚಗಿನ,ಖಾರ ಹಪ್ಪಳ, ಸಂಡಿಗೆ, ಚಕ್ಕುಲಿ ತಿಂಗಳ ಹಿಂದೆ ಸಿದ್ದಗೊಂಡಿದೆ. ಹನಿ ಹನಿಗಳ ಚಿಟ ಪಟ ಕಲರವ ಧಾರೆಯ ಪರಿಧಿಯಂಚು ಮುಗಿಲು ಸೀಳುವ ಮಿಂಚು ರಭಸದಿ ಅಪ್ಪಳಿಸಿ ಹರಿದ ನೀರು ನಿಲ್ಲದೆ ಓಡುತ್ತದೆ ಹನಿ ಹನಿ ಕೂಡಿ ಹಳ್ಳತುಂಬಿ, ಚೆಲ್ಲುತ್ತದೆ. ಪಚ್ಚೆ ಪೈರು ನಾಟಿ ಗೆ ಸಾಲಿಟ್ಟ ಹಸಿರು ಕಾಲಿಂಗಂಟಿದ ಕೆಸರು ಮುದ್ದೆ ಮೊಸರುಂಡ ಜನಕ್ಕೆ ನೆನಪಾಗಲಿಲ್ಲ ಶ್ರಮದ ಸೇವೆ ಸುಲಿಗೆ ಯಾಗಿ ಸೊಗಸಕಾಣುವವಗೆ ಮೈಲಿಗೆಯಂತೆ ಮಳೆಗೆ ತೋಯ್ದ ಬದುಕು ಕಣ್ಣ ನೀರ ನುಂಗಿ  ಧರೆಗೆ ಇಳಿದಂತೆ. ವರುಷವೂ ವರುಣನ ಕಾಯ್ವರು ಹಸನಾದ ಬದುಕ ಹದಗೊಳಿಸಿದ ನೆಲದಲ್ಲಿ, ಬಿತ್ತಿ ಬೆಳೆಯಲು ಕನಸ ಚಿಗರೊಡೆಸುವ ಬಯಕೆಯ ಸೊಗಸಾದ ಮಳೆಗಾಲಕ್ಕೆ ಕಾಯುತ್ತಿರುವರು - ಸಿದ್ದು ಮೂರ್ತಿ

ಮನದ ಮದರಂಗಿ

**************** ಮನದ ಆಸೆ ಹೊಸತನದ ಹುರುಪಾಗಿ ನಲಿಯುತಿದೆ ಹರುಷದ ಹೊನಲಿನಲಿ ಹೊಸಭಾವ ತಳೆದು ಕುಣಿಯುತಲಿದೆ ಮನ ಅರಳಿದ ಹೂವಂತೆ ನಗುತಲಿದೆ ಹಸೆಮಣೆಯ ಹೊಂಗನಸು ನನಸಾಗಿ ಹೊಸಬದುಕ ಹೊಸ್ತಿಲಲಿ ಎದುರಾಗಿ ಮೆಚ್ಚಿದ ಸಂಗಾತಿ ಕೈ ಹಿಡಿವ ಸಮಯದಲಿ ಮನದ ಚಿತ್ತಾರ ಮದರಂಗಿಯ ಬಿಂಬದಿ ಅಚ್ಚಾಗಿದೆ ಮಾತಗಳ ಮೇಲೆ ಮೌನದೆರೆಯು ಹೇಳಲಿಚ್ಚಿಸುವ ಅದಮ್ಯ ಆಸೆಯು ಕೊಂಚ ನಾಚಿಕೆ ತಳೆದ ಬಿಗುಮಾನವು ಕಣ್ಣಂಚಲಿ ಕಾಣುವ ತವಕಗಳೊಟ್ಟಿಗೆ ಮಿನುಗುತ್ತಿವೆ ಮುದದ ಮನ ಶೃಂಗಾರಗೊಂಡಿದೆ ಸಿಂಧೂರದಣೆಯ ಬಾಸಿಂಗ ನಗುತಲಿದೆ ಮಹದಾಸೆಗಳ ಹೆಕ್ಕಿ ಸಿಕ್ಕಿದ ಮನವು ಮೊಗದಲ್ಲಿ ಬಿಂಬಿಸಿ ಹೊಳೆಯುತಲಿದೆ ಸಂಗಾತಿಯ ಮೆಚ್ಚಿದ ಒಲವು ರಂಗಾಗಿ ಮದರಂಗಿಯ ಎಳೆಗಳು ಸೊಗಸಾಗಿ ಮೂಡಿದ ಚಿತ್ತಾರ ಅಂದದ ಮದರಂಗಿಯಂತೆ ಬಯಸಿದ ಬದುಕು ಹಸನಾಗಿ ಅಚ್ಚಳಿಯದಂತೆ... ----ಸಿದ್ದುಮೂರ್ತಿ

ಋಣಾನುಬಂಧ

ಅಮ್ಮನ ತೋಳತೆಕ್ಕೆಯಲಿ ಚಂದದ ಜೋಗುಳವದು ಜೀವಕಣವೂ ಅನುರಣಿಸುವುದಿಲ್ಲಿ ಅಮ್ಮನ ಒಲುಮೆಯ ಚಿಲುಮೆಯಲ್ಲಿ ಮಿಂದ ಬದುಕು ಪಾವನವೇ ಸರಿ ಮಮತೆಯೊಡಲ ಆರೈಕೆ ತಣಿಸಿ ರಮಿಸುವ ಪರಿ ತಂಪು ತುಂತುರು ಹನಿ ಸಹನೆಯ ಹೊನಲು ಕಂದನ ಅಪ್ಪಿ ಆಲಂಗಿಸಿ ಅಳುತಿರೆ ಮನಕರಗಿ ನೊಂದ ಭಾವುಕತೆ ಧರೆಗಿಳಿದ ದೈವ ಜೀವಪೊರೆವ ದೇವತೆ ಬೆರಳ ಹಿಡಿದು ನಡೆವಾಗ ತಪ್ಪಿದ ಹೆಜ್ಜೆ ತಿದ್ದಿ ತೀಡಿ ತೋರಿ ನಡೆಸಿದ ಹೆಜ್ಜೆ ಮನದಲಿ ಅಚ್ಚಾಗಿ ಬದುಕಲ್ಲಿ ಗುರುತಾಗಿ ಕರುಳ ಕುಡಿಯ ಏಳಿಗೆಗೆ ಬೆಳಕಾಗಿ ತೊದಲು ನುಡಿಗಳ ತಿದ್ದಿ ಮೊದಲ ನುಡಿಗಳು ಅರಳಿನಗುವಂತೆ ಅಮ್ಮನ ಶಾಲೆ ಗರಡಿ ಮನೆಯಂತೆ ರಮಿಸಿ ತುತ್ತು ಅನ್ನ ತಿನ್ನುವಾಗ ಅಂಗಳದಿ ಚಂದ್ರಮನೂ ನಲಿವಂತೆ ನಿನ್ನದೇ ರಕ್ತ ಮಾಂಸ ಹಂಚಿ ಕರುಳಬಳ್ಳಿಗಂಟಿ ಬೆಳೆದು ನವಮಾಸಗಳ ನೋವುಂಡು ನೋವ ಸೆಲೆಯಲ್ಲಿ ನಲಿವುಂಡು ಮೈದಳೆದ ಜೀವವ ಪೊರೆದು, ಬಸಿದ ರಕ್ತಎದೆಹಾಲ ಕುಡಿದು ಬೆಳೆದ ಕರುಳ ಕುಡಿ ನಿನ್ನ  ಋಣಿಯಾಗಿ -ಸಿದ್ದುಮೂರ್ತಿ

ಇಳಿಸಂಜೆಯ ಬದುಕು

ನಡುಬಾಗಿದೆ ನಡೆವ ಇಚ್ಚೆ ಅರಳಿದೆ ಸವೆದ ಶರೀರ ಮಳಿಗೆಯೊತ್ತು ನಡೆದಿದೆ ಅಂಜದೆದೆಯ ವಿಶ್ವಾಸ ತೆರೆದ ಮನವು ಸಾಗಿದೆ ಬದುಕ ಭಾರ ಹೊತ್ತ ಪಯಣವು ಬದುಕಿನುದ್ದ ಬವಣೆಯ ಉಸಿರು ಹಸಿವೊತ್ತ ಒಡಲ ತಣಿಸುವ ಬೆವರು ಕಣ್ಣಲ್ಲೇ ಕರಗಿದ ಕನಸಿನ ಹೊಳಪು ಆಸೆ ಗಾಣದ ದೃಷ್ಟಿ ಯ ತೆರವು ನೆರಿಗೆ ಇಟ್ಟ ಸವೆದ ಬದುಕ ಸಾಲು ಸಾಲು ಅದಮ್ಯವಿದು ಅರಳಿದಂತ ಬಾಳು ನೆಚ್ಚಿಕೊಳ್ಳದ ಜೀವದ ಇಚ್ಚೆಯ ದುಡಿಮೆ ಮೆಚ್ಚುವ ಅರೆಗಾಸು ಹೊತ್ತು ಗಂಜಿಗೆ ತುತ್ತು ಅನ್ನ ಹೊತ್ತಿಗದು ಬದುಕ ಬಯಕೆ ನಿಲುವಂಗಿಯ ನಲ್ಮೆ ವಿಶ್ವಾಸದ ಹೊನ್ನಗೆ ಕಾಡುವ ಜೀವದ  ಎದೆಯೊಡ್ಡಿದ ಛಲಕೆ ಆಸರೆ ವಂಚಿತ ಬದುಕಿಲ್ಲಿ ನಿತ್ಯ ಅರಳುತ್ತಿದೆ ದಿಟ್ಟತನ ತೋರುವ ಮನ ಎದುರಲ್ಲಿ ಕಾಣದೆ ಉಳಿದ ನೋವು ಮೌನದಲ್ಲಿ ಒಳಗೊಳಗೆ ಯಾತನೆಗಳ ನುಂಗುತ ಇಳಿಸಂಜೆಯ   ಬದುಕ ದೂಡುತ ~ಸಿದ್ದುಮೂರ್ತಿ

ಸ್ವರಾಲಾಪನ

°°°°°°°°°°°°° ಅಂಬರ ಚುಂಬಿತ ತನ್ಮಯ ರಸ ಭಾವಾ  ಸುಸಂಗತ ಆಂತರ್ಯದ ಭಾವ ಭಾವಗಳ ಸಮ್ಮೋಹಕ ಸಮ್ಮಳಿತ ಇನಿದನಿ ಇಂಚರ ಮಂಜುಳಾಗಾನ ಮಧುರ ಮಿಡಿತ ಈಶನೊಲಿದ ಅಮೃತಘಳಿಗೆಗೆ ಹೊಸ ಬದುಕಿನ ತುಡಿತ ಉದಯವಾಯಿತು ಸುಂದರ ಜೀವನ ಶುಭಾರಂಭ ಊರ್ಮಿಳೆಯ ಶಾಂತಚಿತ್ತೆಯಜೊತೆ ಪಯಣದಾರಂಭ ಋತು ಋತುಗಳ ಜೊತೆಗೆ ಬೆಸೆಯುತ್ತಾ ಜೀವನಾರಂಭ ಎದೆಬಡಿತದ ತಾಳತನ್ಮಯ ಭಾವತುಡಿತಗಳ ತಹಬಂದನ ಏಳಿಗೆಯ ಸ್ವರಾರೋಹಣ ಇಂಪಾಗಿ ಇಮ್ಮಡಿಸಿದ  ಗಾನ ಐಸಿರಿಯ ಸೀಮೆಯೊಳು ಉತ್ಸುಕ ಭಾವಗಳ ಮಿಲನ ಒಲವುಗಳ ಸೆಳೆತದ ಸೆಲೆಯಲ್ಲಿ ಸೆರೆಯಾದ ಭಾವಗಳು ಓಲೆಯ ಸಾರಗಳೂ ಪ್ರೀತಿಅಂಕಣದಮೋಹ ತುಡಿತಗಳು ಔದಾರ್ಯದ ಅಂತ:ಕರಣ ದೀವಿಗೆಯ ದಿವಿಜದಂತೆ ಅಂಗೈಯಲ್ಲಿ ಹಿಡಿದ ನನ್ನರಸಿ ನನ್ನನ್ನು ಸ್ವಾಗತಿಸಿದಂತೆ ಅ: ಆಹ್ಲಾದಕರ ಅಮೋಘ ನಮ್ಮೀ ಜೀವನಪಯಣ            -ಸಿದ್ದುಮೂರ್ತಿ

ಅದೃಶ್ಯ ಅಸುರ

ಜಗದಗಲ ವ್ಯಾಪಕ ಮನುಕುಲ  ಬಾಧಿತ ದಳ್ಳುರಿ, ಹರಡಿಹ ಕಿಚ್ಚು ಸುಡುತಿಹ ಜೀವನೆಲೆಯ ಸಂಹಾರಿ. ಮನಮನಗಳು ಅನುರಣಿಸುವ ಭಯದ ಪರಿ, ಬಿಡದೇ ಕಾಡುವ ಅಗಣಿತ ದ್ವಂದ್ವ ದ ವೈಖರಿ. ಲಕ್ಷ ಲಕ್ಷ ಅಲಕ್ಷ್ಯ ಜೀವತೆತ್ತ ದೇ ಹಗಳ ರಾಶಿ ರಾಶಿ, ತೀರದ ದಾಹಕ್ಕೆ ಮಾತ್ರ ವ್ಯಸನಿಗಳ ಚಟದಂತ ಖುಷಿ, ಅನುದಿನ ಅನುಗಾಲ ಮೈಗಂಟಿತು ಬಿಡದ ನಶೆ, ಅಮಾಯಕರು ತೊರೆದ ಜೀವ ಕಲೆಸಲಾಗದ ವ್ಯಥೆ. ದುಡಿವ ಕೈಗಳು ಪ್ರದರ್ಶನದ ಬೆದರು ಗೊಂಬೆಗಳಂತೆ, ಅಸಂಖ್ಯ ಹಸಿವುಗಳ ನಿಲ್ಲದ ನರಳಾಟ ಮನಕಲಕುವಂತೆ, ಕಲಕಿದ ಮನಗಳೋ ಪ್ರತಿಯಾಗಿ ತೆರೆದ ನಿಸ್ವಾಮೌಲ್ಯದಂತೆ, ಭಾವುಕ ಮಿಡಿತ ಅರಿಯದ ಪಾಪಪ್ರಜ್ಞೆ ಗೆ ಸಾಕ್ಷಿಯಾದಂತೆ. ಹಾಸು ಹೊದ್ದು ಮಲಗಿದ ಬೇಸರ ಅಸಹನೀಯ ವಾಗಿ, ಕಾಣದ ಕಣದ ಕಾಟಕ್ಕೆ ಹುರಿದು ಮುಕ್ಕಿದ ನೆಮ್ಮದಿಕನಸಾಗಿ, ಹಗಲು ಕಳೆದ ರಾತ್ರಿ ಗಳೋ ನಿದಿರೆಯ ಕಸಿದ ಹೊತ್ತಾಗಿ, ಆಗಾಗ ಸ್ಫುರಿಸುವ ದಿವ್ಯ ಮೌನದ ಬದುಕುನೀರಸವಾಯ್ತು. ಕುಸಿದ ಕಾಂಚಾಣದ ಗತ್ತು, ಹುಸಿಯಾದ ತಿರುಳ ಕಿಮ್ಮತ್ತು, ಅಸುರ ವರ್ತನೆ ಚದುರಿ ಚೆಲ್ಲಾಡಿ,ಪ್ರಾಣಹಿಂಡುವಚೀತ್ಕಾರ, ಕೊರೋನಾ ಹರಡಿದ ಕಾರ್ಮೋಡ ಕವಿದ ಕತ್ತಲ ಸೂತಕ, ಸರೀದೀತೆಂದು ಅದೃಶ್ಯ ಅಸುರನ ಆರ್ಭಟದ ಆತಂಕ..        -ಸಿದ್ದುಮೂರ್ತಿ

ಹೊಂಗಿರಣ (ಕನ್ನಡ ಕವನಗಳು)

Image

myyoutube channel

http://bksmurthy.blogspot.com/2020/07/blog-post_5.html

contact us

siddumurthy51@gmail.comhttp://bksmurthy.blogspot.com/2020/07/blog-post_5.html