ಇಳಿಸಂಜೆಯ ಬದುಕು
ನಡುಬಾಗಿದೆ ನಡೆವ ಇಚ್ಚೆ ಅರಳಿದೆ
ಸವೆದ ಶರೀರ ಮಳಿಗೆಯೊತ್ತು ನಡೆದಿದೆ
ಅಂಜದೆದೆಯ ವಿಶ್ವಾಸ ತೆರೆದ ಮನವು
ಸಾಗಿದೆ ಬದುಕ ಭಾರ ಹೊತ್ತ ಪಯಣವು
ಸವೆದ ಶರೀರ ಮಳಿಗೆಯೊತ್ತು ನಡೆದಿದೆ
ಅಂಜದೆದೆಯ ವಿಶ್ವಾಸ ತೆರೆದ ಮನವು
ಸಾಗಿದೆ ಬದುಕ ಭಾರ ಹೊತ್ತ ಪಯಣವು
ಬದುಕಿನುದ್ದ ಬವಣೆಯ ಉಸಿರು
ಹಸಿವೊತ್ತ ಒಡಲ ತಣಿಸುವ ಬೆವರು
ಕಣ್ಣಲ್ಲೇ ಕರಗಿದ ಕನಸಿನ ಹೊಳಪು
ಆಸೆ ಗಾಣದ ದೃಷ್ಟಿ ಯ ತೆರವು
ಹಸಿವೊತ್ತ ಒಡಲ ತಣಿಸುವ ಬೆವರು
ಕಣ್ಣಲ್ಲೇ ಕರಗಿದ ಕನಸಿನ ಹೊಳಪು
ಆಸೆ ಗಾಣದ ದೃಷ್ಟಿ ಯ ತೆರವು
ನೆರಿಗೆ ಇಟ್ಟ ಸವೆದ ಬದುಕ ಸಾಲು ಸಾಲು
ಅದಮ್ಯವಿದು ಅರಳಿದಂತ ಬಾಳು
ನೆಚ್ಚಿಕೊಳ್ಳದ ಜೀವದ ಇಚ್ಚೆಯ ದುಡಿಮೆ
ಮೆಚ್ಚುವ ಅರೆಗಾಸು ಹೊತ್ತು ಗಂಜಿಗೆ
ಅದಮ್ಯವಿದು ಅರಳಿದಂತ ಬಾಳು
ನೆಚ್ಚಿಕೊಳ್ಳದ ಜೀವದ ಇಚ್ಚೆಯ ದುಡಿಮೆ
ಮೆಚ್ಚುವ ಅರೆಗಾಸು ಹೊತ್ತು ಗಂಜಿಗೆ
ತುತ್ತು ಅನ್ನ ಹೊತ್ತಿಗದು ಬದುಕ ಬಯಕೆ
ನಿಲುವಂಗಿಯ ನಲ್ಮೆ ವಿಶ್ವಾಸದ ಹೊನ್ನಗೆ
ಕಾಡುವ ಜೀವದ ಎದೆಯೊಡ್ಡಿದ ಛಲಕೆ
ಆಸರೆ ವಂಚಿತ ಬದುಕಿಲ್ಲಿ ನಿತ್ಯ ಅರಳುತ್ತಿದೆ
ನಿಲುವಂಗಿಯ ನಲ್ಮೆ ವಿಶ್ವಾಸದ ಹೊನ್ನಗೆ
ಕಾಡುವ ಜೀವದ ಎದೆಯೊಡ್ಡಿದ ಛಲಕೆ
ಆಸರೆ ವಂಚಿತ ಬದುಕಿಲ್ಲಿ ನಿತ್ಯ ಅರಳುತ್ತಿದೆ
ದಿಟ್ಟತನ ತೋರುವ ಮನ ಎದುರಲ್ಲಿ
ಕಾಣದೆ ಉಳಿದ ನೋವು ಮೌನದಲ್ಲಿ
ಒಳಗೊಳಗೆ ಯಾತನೆಗಳ ನುಂಗುತ
ಇಳಿಸಂಜೆಯ ಬದುಕ ದೂಡುತ
ಒಳಗೊಳಗೆ ಯಾತನೆಗಳ ನುಂಗುತ
ಇಳಿಸಂಜೆಯ ಬದುಕ ದೂಡುತ
~ಸಿದ್ದುಮೂರ್ತಿ
Comments
Post a Comment