ಗುರು ಸಾಕ್ಷಾತ್ ಪರಬ್ರಹ್ಮ

 ಗುರು ಸಾಕ್ಷಾತ್ ಪರಬ್ರಹ್ಮ

----------------------------


 ಸಣ್ಣ ಹಳ್ಳಿಯ ಕನ್ನಡ ಶಾಲೆ ಯಲ್ಲಿ ಕಲಿತು ಜಿಲ್ಲಾಧಿಕಾರಿಯಾಗಿ ಹಳ್ಳಿಗೆ ಹೆಮ್ಮೆಯಾಗಿದ್ದ ಪ್ರವೀಣನನ್ನು ಊರಿನ ಎಲ್ಲಾ ಮುಖ್ಯಸ್ಥರು ಸೇರಿ ಸನ್ಮಾನಿಸಲು,ವೇದಿಕೆಯ ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ಏನೋ ಅರಿತಂತವನಾಗಿ ಪ್ರವೀಣ ಖುರ್ಚಿ ಯಿಂದೆದ್ದು ವೇದಿಕೆಯ ಮುಂಬಾಗದಲ್ಲಿ ಊರುಗೋಲಿಡಿದು ಕುಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು  ತೋಳಿಡಿದು ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ನಂತರ ತನ್ನೆಲ್ಲ ಸನ್ಮಾನ ಪರಿಕರಗಳನ್ನು ಅವರ ಚರಣಗಳಿಗರ್ಪಿಸಿ,ಹೇಳುತ್ತಾ "ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನಿರ್ದೇಶಕರಂತೆ ಜೀವನದ ಗುರಿಯನ್ನು ತಲುಪಲು ಸಹಾಯ ಮಾಡಿದ ಗುರುಗಳು ನಮ್ಮ ಶ್ಯಾಮಣ್ಣ ಮಾಸ್ತರು... ಹಾಗಾಗಿ ನನ್ನೆಲ್ಲ ಸನ್ಮಾನ ಗಳು ಗುರುಗಳ ಚರಣಗಳಿಗರ್ಪಣೆ"..!.ಎಂದಾಗ ಮಾಸ್ತರರ ಕಣ್ಣಾಲಿ ತುಂಬಿದ್ದವು .,ಸಭೆಯ ಕರತಾಡನ ಮುಗಿಲು ಮುಟ್ಟಿತ್ತು..



ಸಿದ್ದು ಮೂರ್ತಿ, 


Comments

Popular posts from this blog

ಆಧ್ಯಾತ್ಮಿಕ ವಿಚಾರ