ಹಸಿವು


ಹಸಿವು
~~~~~~
ಕಷ್ಟಗಳಿವು ಯಾರ ಹೊಣೆ,
ಬದುಕ ಜೊತೆ ಅಣಿಯಾದ ಹೊರೆ
ಹಗಲಿರುಳು ನೋವು ನಲಿವುಗಳ ಜೊತೆಗೆ
ಹಸಿವೊತ್ತ ಒಡಲ ಜೀವ ನಲುಗಿದೆ.

ದಿನವಿಡಿ ದುಡಿದು ದಣಿವ ಬದುಕ
ಹಸಿದ ಚೀಲಕೆ ತುತ್ತುತುಂಬುವ ತನಕ
ತೆವಳುವ ದಿನಗಳು ತ್ರಾಸ ಹೊತ್ತುಗಳು
ಹಸಿವೇ ಬದುಕ ಗುರಿಯಾದ ಆಸೆಗಳು.

ಬದಿಯ ಬಿಡಾರವೆ ,ಬದುಕ ವಠಾರ
ಹರಡಿ ಕಲಸಿದ ಮರಳು ಸಿಮೆಂಟು
ಜೆಲ್ಲಿಯೊಳಗೆ ಬೆರೆತ ಕನಸುಗಳ ಕಪಾಟು
ಗಾರೆಗೆ ಬೆರೆತ ಬದುಕು ಹಸಿವನೀಗಿದ ಪಾಟು.

ತಿರುಗಿದರು ಹಸಿವ ಕಳೆಯಲು,ಅಂಗಲಾಚಿ
ಕಂಕುಳ ಕುಡಿ ಹೊತ್ತು,ಹಸಿದಜೀವ ಕೈ ಚಾಚಿ
ಹರಕು ಚಿಂದಿ.,  ಚಿದ್ರಗೊಂಡ ಮನದಿಚ್ಚೆಗಳು
ಹಸಿವು ನೀಗಿ ದೊಡನೆಯೆ ಅರಳೊ ಇಚ್ಚೆಗಳು.

ಶ್ರಮಿಕರು ಅರಸಿದ, ಶ್ರಮದ ಬದುಕು
ಜೊತೆಗಂಟಿದ ವ್ಯಥೆಯ  ಅಣುಕು
ನೋವು ನಲಿವ ಮಿಶ್ರಣದ ಸೊಗಡು
ಆಸೆ ಕನಸುಗಳ ಉಂಡು ತೇಗಿದೆ .,ಹಸಿವಿನ ಬದುಕು.

ಸಿದ್ದು ಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ