ನಮ್ಮ ನಾಡು ಕರುನಾಡು

 ನಮ್ಮ ನಾಡು ಕರುನಾಡು

*****************


ಕನ್ನಡ ನಾಡು ಹೆಮ್ಮೆಯ ಬೀಡು,ಸಿರಿಗಂಧದ ತವರೂರು

ಸಿರಿ ಸೊಬಗ ಸಡಗರ ಮೈದಳೆದು ಮೆರೆಯುವ ನಾಡು

ಅಂದದ ಸಿರಿ  ತುಂಬಿ ತುಳುಕುವ ಸುಂದರ ಸೀಮೆ

ಅಚ್ಚ ಹಸಿರಿನ ಚಿತ್ತಾರ ಚೆಲ್ಲಿದ, ನಿಸರ್ಗ ಭೂರಮೆ


ಶಿಲ್ಪಕಲೆಗಳ ಸೊಗಡು, ಸಂಸ್ಕೃತಿ ಸಾರುವ ನೆಲೆವೀಡು

ಗತವೈಭವ ಗರಿಮೆಯ ಘನತೆ ತೋರುವ ಸಿರಿನಾಡು

ಸಾಹಿತ್ಯ ಸುಧೆಯು ಹೊನ್ನುಳೆ ಹರಿಸುವ ಹೊನ್ನಾಡು

ಕವಿಗಳ,ಕಲಿಗಳ,ದಾಸಶರಣರ ನೆಲೆ ನಾಡು


ಗಿರಿಗಳೊತ್ತ  ಸೀಮೆಯಸಾಲು ಒಡಲಲಿ ಖನಿಜದಬೀಡು

ರಸರಿಷಿಗಳ ಸಿರಿ ನಾಡು ಕಾವ್ಯ ಕುಸುರಿಯ ಕರುನಾಡು

ಅಕ್ಕರೆಯ ಅಂದದ ನುಡಿ ಹರಡಿದೆ ಕಸ್ತೂರಿ ಕಂಪು

ಒಲವಿನ ಮಾತಿನ ಸಕ್ಕರೆಯು,ಬಿರಿದ ಹೂಗಳ ಕಂಪು


ವೀರ ಶೂರರು ಆಳಿದ ವೈಭವ, ಶೌರ್ಯದ ಕರುನಾಡು

ಕೋಟೆ ಕೊತ್ತಲ ನಾಡ ಖ್ಯಾತಿಯ ಸಾರುವಂತಿದೆನೋಡು

ನದಿ ವನಸಿರಿ ಸೊಬಗಿನ ಸಂಸ್ಕೃತಿ ಸೊಗಡಿನ  ತಾಣ

ನಲ್ಮೆಯ ತೋರುವ  ಕನ್ನಡಿಗ ,ನಾಡಿನ ಐಸಿರಿ ಕಾಣಾ



ಸಿದ್ದು ಮೂರ್ತಿ, ತುಮಕೂರು




Comments

Popular posts from this blog

ಆಧ್ಯಾತ್ಮಿಕ ವಿಚಾರ