ಮನದ ಮದರಂಗಿ
****************
ಮನದ ಆಸೆ ಹೊಸತನದ ಹುರುಪಾಗಿ
ನಲಿಯುತಿದೆ ಹರುಷದ ಹೊನಲಿನಲಿ
ಹೊಸಭಾವ ತಳೆದು ಕುಣಿಯುತಲಿದೆ
ಮನ ಅರಳಿದ ಹೂವಂತೆ ನಗುತಲಿದೆ
ನಲಿಯುತಿದೆ ಹರುಷದ ಹೊನಲಿನಲಿ
ಹೊಸಭಾವ ತಳೆದು ಕುಣಿಯುತಲಿದೆ
ಮನ ಅರಳಿದ ಹೂವಂತೆ ನಗುತಲಿದೆ
ಹಸೆಮಣೆಯ ಹೊಂಗನಸು ನನಸಾಗಿ
ಹೊಸಬದುಕ ಹೊಸ್ತಿಲಲಿ ಎದುರಾಗಿ
ಮೆಚ್ಚಿದ ಸಂಗಾತಿ ಕೈ ಹಿಡಿವ ಸಮಯದಲಿ
ಮನದ ಚಿತ್ತಾರ ಮದರಂಗಿಯ ಬಿಂಬದಿ ಅಚ್ಚಾಗಿದೆ
ಹೊಸಬದುಕ ಹೊಸ್ತಿಲಲಿ ಎದುರಾಗಿ
ಮೆಚ್ಚಿದ ಸಂಗಾತಿ ಕೈ ಹಿಡಿವ ಸಮಯದಲಿ
ಮನದ ಚಿತ್ತಾರ ಮದರಂಗಿಯ ಬಿಂಬದಿ ಅಚ್ಚಾಗಿದೆ
ಮಾತಗಳ ಮೇಲೆ ಮೌನದೆರೆಯು
ಹೇಳಲಿಚ್ಚಿಸುವ ಅದಮ್ಯ ಆಸೆಯು
ಕೊಂಚ ನಾಚಿಕೆ ತಳೆದ ಬಿಗುಮಾನವು
ಕಣ್ಣಂಚಲಿ ಕಾಣುವ ತವಕಗಳೊಟ್ಟಿಗೆ ಮಿನುಗುತ್ತಿವೆ
ಹೇಳಲಿಚ್ಚಿಸುವ ಅದಮ್ಯ ಆಸೆಯು
ಕೊಂಚ ನಾಚಿಕೆ ತಳೆದ ಬಿಗುಮಾನವು
ಕಣ್ಣಂಚಲಿ ಕಾಣುವ ತವಕಗಳೊಟ್ಟಿಗೆ ಮಿನುಗುತ್ತಿವೆ
ಮುದದ ಮನ ಶೃಂಗಾರಗೊಂಡಿದೆ
ಸಿಂಧೂರದಣೆಯ ಬಾಸಿಂಗ ನಗುತಲಿದೆ
ಮಹದಾಸೆಗಳ ಹೆಕ್ಕಿ ಸಿಕ್ಕಿದ ಮನವು
ಮೊಗದಲ್ಲಿ ಬಿಂಬಿಸಿ ಹೊಳೆಯುತಲಿದೆ
ಸಿಂಧೂರದಣೆಯ ಬಾಸಿಂಗ ನಗುತಲಿದೆ
ಮಹದಾಸೆಗಳ ಹೆಕ್ಕಿ ಸಿಕ್ಕಿದ ಮನವು
ಮೊಗದಲ್ಲಿ ಬಿಂಬಿಸಿ ಹೊಳೆಯುತಲಿದೆ
ಸಂಗಾತಿಯ ಮೆಚ್ಚಿದ ಒಲವು ರಂಗಾಗಿ
ಮದರಂಗಿಯ ಎಳೆಗಳು ಸೊಗಸಾಗಿ
ಮೂಡಿದ ಚಿತ್ತಾರ ಅಂದದ ಮದರಂಗಿಯಂತೆ
ಬಯಸಿದ ಬದುಕು ಹಸನಾಗಿ ಅಚ್ಚಳಿಯದಂತೆ...
ಮದರಂಗಿಯ ಎಳೆಗಳು ಸೊಗಸಾಗಿ
ಮೂಡಿದ ಚಿತ್ತಾರ ಅಂದದ ಮದರಂಗಿಯಂತೆ
ಬಯಸಿದ ಬದುಕು ಹಸನಾಗಿ ಅಚ್ಚಳಿಯದಂತೆ...
----ಸಿದ್ದುಮೂರ್ತಿ
Comments
Post a Comment