ರೈತಾಪಿ ಜೀವನ
ರೈತಾಪಿ ಜೀವನ
~~~~~~~
~~~~~~~
ಹಸಿರು ಹೊದ್ದ ಸೀಮೆ,
ಉಸಿರಲಿ ಬೆರೆತ ಗರಿಮೆ
ಸೊಬಗ ಸೊಗಡು ಅಂಟಿ
ಮೆರೆದ ಬದುಕು ಸಿರಿಯಲಿ
ಉಸಿರಲಿ ಬೆರೆತ ಗರಿಮೆ
ಸೊಬಗ ಸೊಗಡು ಅಂಟಿ
ಮೆರೆದ ಬದುಕು ಸಿರಿಯಲಿ
ಮನೆಯಂಗಳ ಚಿತ್ರಣ
ಮನವೊ ನಗುವ ಅಂಕಣ
ದಿನವೂ ಹೊಸ ಕಳೆಯು
ತಳೆದು ದೂಡುವ ಬದುಕು
ನಿತ್ಯ ಹೃದಯಂಗಮ
ಮನವೊ ನಗುವ ಅಂಕಣ
ದಿನವೂ ಹೊಸ ಕಳೆಯು
ತಳೆದು ದೂಡುವ ಬದುಕು
ನಿತ್ಯ ಹೃದಯಂಗಮ
ಮೂಡಣ ನೇಸರ
ಏರಿದ ನಗುತಲಿ
ನಿದಿರೆಯ ಕಳೆದು
ಮೈಯ ಗೊಡವಿ
ನಿತ್ಯ ಗೆಲಸ ಹೆಗಲಿಗೇರಿ
ಏರಿದ ನಗುತಲಿ
ನಿದಿರೆಯ ಕಳೆದು
ಮೈಯ ಗೊಡವಿ
ನಿತ್ಯ ಗೆಲಸ ಹೆಗಲಿಗೇರಿ
ನಿಷ್ಕಲ್ಮಶ ಭಾವ,
ತೂಗಿ ತೊನೆವ ತೆನೆಯಂತೆ
ಹಸನಾದ ನೆಲದಲ್ಲಿ
ಕನಸ ಬೀಜ ಬಿತ್ತಿದೆ..
ಕಣ್ಣ ರೆಪ್ಪೆಯೊಳಗೆ ಬಚ್ಚಿಟ್ಟಿ
ಕನಸ ಕೂಸಂತೆ ಪೋಷಿಸಿಟ್ಟಿ
ಬೆಳೆಯ ಫಸಲು ನಿರೀಕ್ಷಿಸಿ...
ತೂಗಿ ತೊನೆವ ತೆನೆಯಂತೆ
ಹಸನಾದ ನೆಲದಲ್ಲಿ
ಕನಸ ಬೀಜ ಬಿತ್ತಿದೆ..
ಕಣ್ಣ ರೆಪ್ಪೆಯೊಳಗೆ ಬಚ್ಚಿಟ್ಟಿ
ಕನಸ ಕೂಸಂತೆ ಪೋಷಿಸಿಟ್ಟಿ
ಬೆಳೆಯ ಫಸಲು ನಿರೀಕ್ಷಿಸಿ...
ಚಿಗುರು ಒಡೆಯುವ
ಬಯಕೆಯು ತನ್ನೊಳಗೆ
ಅವಿತು ವರುಣನ
ಕಾಯ್ವ ಮನಗಳಿಗೆ
ಹೊಲ ಗದ್ದೆಗಳೇ
ಬೆಲ್ಲ ಮೆದ್ದ ಬದುಕಂತೆ
ಬಯಕೆಯು ತನ್ನೊಳಗೆ
ಅವಿತು ವರುಣನ
ಕಾಯ್ವ ಮನಗಳಿಗೆ
ಹೊಲ ಗದ್ದೆಗಳೇ
ಬೆಲ್ಲ ಮೆದ್ದ ಬದುಕಂತೆ
ದಣಿದ ದೇಹ ಬಸಿದರಕ್ತ ಬೆವರು ಹನಿ
ಕಾಲಿಗೆ ಅಂಟಿದ ಕೆಸರು ಮುದ್ದೆ
ಬಾಯಿ ಮೊಸರು ಸವರಿದಂತೆ
ಸುಖದ ಜಾಡ ಹಿಡಿದು
ಸವೆದ ಜೀವವು
ರಾಶಿ ಮಾಡಿ
ಹಿಗ್ಗುವ ಸುಗ್ಗಿ ಯಂತೆ..
ಕಾಲಿಗೆ ಅಂಟಿದ ಕೆಸರು ಮುದ್ದೆ
ಬಾಯಿ ಮೊಸರು ಸವರಿದಂತೆ
ಸುಖದ ಜಾಡ ಹಿಡಿದು
ಸವೆದ ಜೀವವು
ರಾಶಿ ಮಾಡಿ
ಹಿಗ್ಗುವ ಸುಗ್ಗಿ ಯಂತೆ..
ಗೋಧೂಳಿ ಹೊತ್ತು
ರಾಸುಗಳ ಹಿಂಡಿಂಡು
ಸಾಗಿದ ಸಾಲುಗಳು,
ಸಾಲಿಕ್ಕಿದ ಬಾನಾಡಿ ದಂಡು
ಮುಗಿಲು ಮುಡಿದ ಹೂಗಳಂತೆ...
ದಿನದ ಬದುಕು ಮರಳಿತ್ತು ಗೂಡಿಗೆ....
ರಾಸುಗಳ ಹಿಂಡಿಂಡು
ಸಾಗಿದ ಸಾಲುಗಳು,
ಸಾಲಿಕ್ಕಿದ ಬಾನಾಡಿ ದಂಡು
ಮುಗಿಲು ಮುಡಿದ ಹೂಗಳಂತೆ...
ದಿನದ ಬದುಕು ಮರಳಿತ್ತು ಗೂಡಿಗೆ....
••ಸಿದ್ದುಮೂರ್ತಿ
Comments
Post a Comment