ಹಾಸ್ಯ ಕತೆ


ಹಾಸ್ಯ ಕತೆ


ಯಾವ ಲೈನು...?!


ತಿಂಗಳುಗಳು ಕಳೆದರೂ ಶಾಲೆ ಆರಂಭ ವಾಗದಿದ್ದರೂ ತರಗತಿಗಳಂತೂ ಆರಂಭ ವಾದವು.ಅದೂ ಆನ್ಲೈನ್ ತರಗತಿಗಳು.. ಬರೋಬ್ಬರಿ ಮೂರ್ನಾಲ್ಕು ತಿಂಗಳಿಂದ ಮನೆಯೊಳಗೆ ಆಟೋಟಗಳಲ್ಲಿ ಮಗ್ನನಾಗಿದ್ದ ಗುಂಡು ಓದನ್ನೇ ಮರೆತಂತೆ,ಕೆಲವೊಂದು ಕಲಿತಿದ್ದು ನೆನೆಪಿಗೆ ಬಾರದೇ ಹೋಗಿದೆ...

ಅಲ್ಲಿಗೂ ಎಚ್ಚೆತ್ತ ಸರ್ಕಾರ ಆನ್ಲೈನ್ ಶಿಕ್ಷಣ ನೀಡಲು ಶುರುಮಾಡ್ತು...!! ಟಿ.ವಿ.ಮೊಬೈಲ್ನಲ್ಲಿ ಗೇಮ್, ಚೋಟಾಭೀಮ್ ನೋಡುತ್ತಿದ್ದ ಗುಂಡನಿಗೆ ಟಿ.ವಿ.ಮೊಬೈಲ್ನಲ್ಲಿ ಪಾಠ ಅಂದ ತಕ್ಷಣ ಎಲ್ಲೋ ಒಂದ್ಕಡೆ ಗುಂಡನಿಗೆ ಭಯ ನಿರಾಶೆ.. ತರಗತಿಯಲ್ಲಿ ಪ್ರತಿಸಾರಿ ಪ್ರಶ್ನೆ ಕೇಳಿ ತಬ್ಬಿಬ್ಬು ಆಗಿ ಏಟು ತಿನ್ನುತ್ತಿದ್ದ ಗಣಿತ ಕ್ಲಾಸ್ನ ಮಿಸ್ ನೆನಪಾಯ್ತು ಗುಂಡನಿಗೆ..


ಇತ್ತ ಆಟದ ಕಡೆ ಗಮನ ಇಲ್ಲ ಓದಿನ ಕಡೆನೂ ಗಮನ ಇರದೇ ಗುಂಡನ ಮನೆ ಚಡಪಡಿಸ್ತು...

ಅಷ್ಟರಲ್ಲಿ ಅವನಿಗೆ ಅವರಜ್ಜಿ ನೆನಪಾಗಿ ಅಜ್ಜಿ ಕಡೆ ಸಹಾಯ ತಗೆದುಕೊಂಡ್ರಾಯ್ತು ಅಂತ ಸಮಾಧಾನ ಪಟ್ಕೊಂಡ..


ಇತ್ತ ಅಜ್ಜಿಗೆ ಆನ್ಲೈನ್ ಪಾಠದ ಘಮಲು ಇಲ್ಲ ಗಂಧನೂ ಇಲ್ಲ..ಮಿಸ್ ಮನೆಗೆ ಬಂದು ಪಾಠ ಹೇಳ್ತಾರೆ ಅಂತ ತಿಳ್ಕೋಂಡಿದ್ದಾರೆ ಅಜ್ಜಿ...

ಒಂದಿನ ಅಜ್ಜಿ ಬಂದು..ಏನೋ ಗುಂಡ ಈವತ್ತು ನಿಮ್ಮ ಮಿಸ್ ನಿನಗೆ ಪಾಠ ಮಾಡೋಕೆ ಮನೆಗೆ ಬರ್ತಾರಂತೆ ಹೌದಾ..?!!!

 ಮನಸ್ಸಿನಲ್ಲಿ ಏನೋ ಯೋಚಿಸುತ್ತ ಗುಂಡ ಹೇಳ್ದಾ..."ಹೌದು ಅಜ್ಜಿ ನಮ್ಮ ಮನೆಗೆ ಮಿಸ್ ಬರ್ತಾರೆ ಅವರಿಗೆ ಏನಾದ್ರೂ ತಿಂಡಿ ಮಾಡಜ್ಜಿ.. ಅಂತ ಅಜ್ಜಿನ ಕುಸುಲಾಯಿಸಿ ಅಜ್ಜಿ ನಾ ಯಾಮಾರಿಸುತ್ತಾನೆ...


ಅದಕ್ಕೆ ಅಜ್ಜಿ" ಆಯ್ತು ಬಿಡಪ್ಪ ತಿಂಡಿ ಪೋತ ಅಂತ ಹೇಳಿ ಒಳಗೆ ಹೋದರು...

ಒಳಗೇ ಮುಸಿ ನಗುತ್ತಾ..ಅಜ್ಜಿ ಪೆದ್ದು ...ಅಂದುಕೊಂಡ..


ಸರಿ ಅಜ್ಜಿ ನೂ ಅವನ ಮಾತ ನಂಬಿ ಚಕ್ಕಲಿ ಉಂಡೆ ಮಾಡಿ ಗುಂಡನ ಮಿಸ್ಗೆ ಬಾಗಲ ಲ್ಲಿ ಕಾಯ್ತಾ ಕುಳಿತರು ಅಜ್ಜಿ..

ಇತ್ತ ಗುಂಡ ಅಜ್ಜಿ ಮಾಡಿರೋ ಚಕ್ಕಲಿ ಉಂಡೆ ಪೋಣಿಸ್ತಾ ಇದ್ದ..

ಅಷ್ಟರಲ್ಲಿ ಗುಂಡನ ಅಪ್ಪ ಭಟ್ರು ಬಂದು ಏನಮ್ಮಾ ಬಾಗಿಲಲ್ಲಿ ಕುಳಿತಿದ್ದೀಯಾ..?  ಯಾರಾದರೂ ಬರ್ತಾರಾ..ಎಂದು ಕೇಳಿದ್ದಕ್ಕೆ..ಅಜ್ಜಿ ಹೌದಪ್ಪ ನಮ್ಮಗುಂಡನ ಮಿಸ್ ಮನೆಗೆ ಬಂದು ಪಾಠ ಹೇಳ್ತಾರಂತೆ.. ಎಂದರು... ಅದಕ್ಕೆ ಭಟ್ರು ಅಯ್ಯೋ ಅಮ್ಮಾ ಯಾರು ಹೇಳಿದ್ರು., ಮಿಸ್ ಬಂದು ಪಾಠ ಹೇಳ್ತಾರೆ ಅಂತ.., ಅವರು ಪಾಠ ಮಾಡೋದು ಆನ್ಲೈನ್ ನಲ್ಲಿ  ಮನೆಗೆ ಬರಲ್ಲ...

ಅದಕ್ಕೆ ಅಜ್ಜಿ ...ಯಾವ ಲೈನು...?! ಅದು ಎಲ್ಲಿದೀಯೋ..?

ಅಂತ ಕೇಳಬೇಕಾ ಅಜ್ಜಿ.....



ಸಿದ್ದುಮೂರ್ತಿ.


Comments

Popular posts from this blog

ಆಧ್ಯಾತ್ಮಿಕ ವಿಚಾರ