ಲೇಖನ
ಹೆಣ್ಣು ಸಮಾಜದ ಕಣ್ಣು ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ನಿದಿರೆಯಿಂದೆದ್ದು ಅಂದಿನ ದಿನಚರಿಗಳ ಕಡೆಗೆ ಮಗ್ನಗೊಳ್ಳುವ ಮನಸ್ಸು ಸದಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರೆಡೆಗೆ ಇವಳ ಆಲೋಚನೆಗಳು ಸದಾ ಕ್ರಿಯಾಶೀಲವಾಗಿರುತ್ತವೆ.ಮನೆಯ ಎಲ್ಲರ ಆಗು ಹೋಗುಗಳ ಬಗ್ಗೆ ಇಷ್ಟ ಕಷ್ಟಗಳ ಬಗ್ಗೆ ತಿಳಿದು ನಿಭಾಯಿಸುವ ಹೊಣೆಗಾರಿಕೆಯನ್ನು ಚಾಚೂ ತಪ್ಪದೇ ನಿರ್ವಹಿಸುವ ಮಹಾ ಶಕ್ತಿಯ ಒಡಲು "ಸ್ತ್ರೀ "ಎಂದು ಬಣ್ಣಿಸುವುದರಲ್ಲಿ ಯಾವುದೇ ಅತಿಶಯೋಕ್ತಿ ಅಲ್ಲ. ಗಂಡ ಮನೆ ಮಕ್ಕಳು ಅವಳು ಕಟ್ಟಿಕೊಂಡಿರುವ ಜಗತ್ತು, ಆದರೊಳಗಿನ ಅವಳ ಸೇವಾ ಕೈಂಕರ್ಯ ಸಮಯದ ಅರಿವಿಲ್ಲದಂತೆ ನಡೆಯುತ್ತಲೇ ಇರುತ್ತದೆ.ಮನೆಯೊಳಗಿನ ಎಲ್ಲ ಸದಸ್ಯರ ವಿಶಿಷ್ಟ ಜವಾಬ್ದಾರಿ ಹೊತ್ತು ಭರವಸೆಯಾಗಿ ಸಂಸಾರ ನೌಕೆಯನ್ನು ಎಡರು ತೊಡರಾಗದಂತೆ ತೇಲಿಸುವ ಗುರುತರ ಹೊಣೆ ಈ ಮಹಿಳೆಗೆ.. "ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ" ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕತೃಥ್ವ, ನೇತೃಥ್ವ, ತಾಯತ್ವವಾಗಿರುತ್ತಾಳೆ. ಇವೆಲ್ಲವೂ ...