ಕರೋನಾ ಸಮಯದ ಸ್ವಾತಂತ್ರ್ಯೋತ್ಸವ
ಕರೋನಾ ಸಮಯದ ಸ್ವಾತಂತ್ರ್ಯೋತ್ಸವ
ಶೀರ್ಷಿಕೆ: ಏನೇ ಬರಲಿ ಒಗ್ಗಟ್ಟಿರಲಿ...!!
""""""""""""""""""""""""""""
ನಮ್ಮ ಭಾರತ ವೈವಿದ್ಯತೆಯಿಂದ ಕೂಡಿದರೂ ಏಕತೆಯಿಂದ ಮೆರೆವ ಅಭಿವೃದ್ಧಿ ಶೀಲ ರಾಷ್ಟ್ರ..,ಹಲವು ಧರ್ಮಗಳ ನೆಲೆಯಾದ ಸುಸಂಸ್ಕೃತ ರಾಷ್ಟ್ರ., ವೈಶಿಷ್ಟ್ಯ ಪೂರ್ಣ ಭೌಗೋಳಿಕ ಲಕ್ಷಣಗಳು, ಪ್ರಾಕೃತಿಕ ಸಂಪನ್ಮೂಲಗಳ ಹೊಂದಿದ ರಾಷ್ಟ್ರ. ಭಿನ್ನ ವಿಭಿನ್ನ ವಾದ ಪದ್ದತಿ,ಆಚರಣೆ, ಭಾಷೆ, ಸಂಪ್ರದಾಯ, ಉಡುಪು ಗಳಿದ್ದರೂ ನಾವೆಲ್ಲರೂ ಭಾರತೀಯರೆಂಬ ಸಹೃದಯ ಏಕತಾ ಮನೋಭಾವವನ್ನು ಬೇರೆ ಯಾವ ರಾಷ್ಟ್ರದೊಂದಿಗೆ ಹೋಲಿಕೆ ಮಾಡುವುದು ಅಸಾಧ್ಯ....
ಇಂತಹ ದೇಶ ಈ ಮೊದಲು ಬ್ರಿಟೀಷರ ಕಬಂಧ ಬಾಹುಗಳಿಂದ ನಲುಗಿ.,ದೇಶದ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಇಂದಿಗೆ 73 ವರ್ಷ ಗಳು ಸಂದಿವೆ .,
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶದ ವೀರಪುರುಷರ ತ್ಯಾಗ ಬಲಿದಾನ ಗಳ ಸಂಕೇತದಂತೆ ಪ್ರತಿವರ್ಷ ಆಗಸ್ಟ್ 15ರಂದು ಆಚರಿಸುವ ಮಹಾಹಬ್ಬ ತನ್ನದೇ ಆದ ವೈಶಿಷ್ಟ್ಯ ತೆಹೊಂದಿದೆ.. ದೇಶಾಭಿಮಾನ ದೇಶಪ್ರೇಮ ದೇಶದೆಲ್ಲೆಡೆ ಸಾಮೂಹಿಕವಾಗಿ ಅಭಿವ್ಯಕ್ತವಾಗುವ ಆ ಸುಸಂದರ್ಭ ಅಭೂತಪೂರ್ವ ವಾದುದು...
ಆದರೆ ಆಗಸ್ಟ್ 2020 ಈ ವರ್ಷ ಪ್ರತಿ ವರ್ಷದಂತೆ ಇರುವ ಸಡಗರ ಸಂಭ್ರಮಗಳು ವ್ಯಕ್ತವಾಗವಲ್ಲಿ ಅಡ್ಡಗೋಡೆಯಂತೆ ಭಯದ ಛಾಯೆಯನ್ನು ಒಡ್ಡಿದ ಸಾಂಕ್ರಾಮಿಕ ರೋಗ "ಕೊರೋನಾ"
ಕಛೇರಿಗಳು,ಶಾಲಾವರಣಗಳು, ಸಂಘ-ಸಂಸ್ಥೆಗಳು ತಳಿರು ತೋರಣಗಳಿಂದ, ಬಣ್ಣದ ರಂಗೋಲಿ ಗಳಿಂದ ,ಅಲಂಕೃತಗೊಂಡು ಝಗಮಗಿಸುವ ಕಾಲ,ಪರಸ್ಪರ ಶುಭಾಶಯಗಳು, ಧ್ವಜಾರೋಹಣ, ರಾಷ್ಟ್ರಗೀತೆಯ ಝೇಂಕಾರ, ,ಸಿಹಿಹಂಚುವಿಕೆಯಿಂದ ಸಂಭ್ರಮ ಉಲ್ಲಾಸ ಗಳು,ಚಿಣ್ಣರ ಕೈಯಲ್ಲಿ ಮೆರೆವ ತಿರಂಗಾ ಧ್ವಜಗಳ ಸಾಲುಗಳು,ಒಟ್ಟಾಗಿ ಕೂಗುವ ಘೋಷಣೆಗಳು ಶಾಂತಿ,ತ್ಯಾಗ ಒಗ್ಗಟ್ಟು ಒಕ್ಕೊರಲ ದೇಶದ ಅಭಿಮಾನದ ಅಭಿವ್ಯಕ್ತತೆಗಳು ಅಂದು ಮಹಾಹಬ್ಬಕ್ಕೆ ಕಳೆಗಟ್ಟುತ್ತಿದ್ದವು..
ಇಂದು ಕರೋನಾ ಕರಿನೆರಳ ಛಾಯೆ ಆ ಸಂಭ್ರಮಕ್ಕೆ ತೆರೆಎಳೆದಂತಾಗಿದೆ...ಆದರೂ ಎದೆಗುಂದದ ಭಾರತೀಯರ ಸದ್ಭಾವಗಳು ಸ್ವಾತಂತ್ರೋತ್ಸವ ಆಚರಣೆಗೆ ಉತ್ಸುಕತೆಯನ್ನು ಹೊಂದಿವೆ ..ಕರೋನಾ ಮಹಾಮಾರಿ ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತ ಅಸಂಖ್ಯ ಜನರನ್ನು ಬಲಿತೆಗೆದುಕೊಂಡು ತನ್ನ ಕ್ರೂರತೆಯನ್ನು ಮೆರೆಯುತ್ತಿದೆ..
ಇಂತಹ ಸಂದರ್ಭದಲ್ಲಿ ದೇಶದ ರಾಷ್ಟ್ರೀಯ ಹಬ್ಬವನ್ನು ಆಚರಿಸುವುದು ಒಂದು ಸವಾಲಾದರೂ..ಆಚರಿಸುವುದು ಕೂಡ ಅಷ್ಟೇ ಪ್ರಾಮುಖ್ಯ,...
ಆಚರಿಸಲೇಬೇಕೆಂಬ ಸಹೃದಯ ಮನೋಭಾವಗಳಿಗೆ ಇದು ಅಂತಹ ದೊಡ್ಡ ಸವಾಲಾಗದು...ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರುಡುವ ಸಾಂಕ್ರಾಮಿಕ ರೋಗವಾಗಿರುವುದರಿಂದ ಗುಂಪುಗಳು,ಒಗ್ಗೂಡುವಿಕೆ ಸಾಮೂಹಿಕ ಸಭೆಗಳನ್ನು ನಿರ್ಬಂದಿಸಿರುವುದು ಕೂಡ ಆಚರಣೆಗೆ ತಡೆಯಾದರೂ ,, ಆಚರಣೆಯನ್ನು ಹಲವಾರು ವಿಧದಲ್ಲಿ ದೇಶಾಭಿಮಾನ ವ್ಯಕ್ತವಾಗುವ ರಾಷ್ಟಕ್ಕೆ ಗೌರವ ಸಲ್ಲಿಸುವಂತ ,ಹುತಾತ್ಮ ಯೋಧರಿಗೆ ನಮನಸಲ್ಲಿಸುವ ನಿಟ್ಟಿನಲ್ಲಿ,ದೇಶದ ಮಹತ್ವವನ್ನು ಸಾರುವ ಆಚರಣೆ ಆಗಬೇಕಿದೆ...
, ಈ ಆಚರಣೆ ಒಂದು ದಿನಕ್ಕೆ ಸೀಮಿತ ವಾಗದೇ ಸದಾ ದೇಶಾಭಿಮಾನದ ಆಚರಣೆ ಮತ್ತು ಸಂಸ್ಕೃತಿ ಯನ್ನು ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ ನಮ್ಮ ಯೋಜನೆಗಳು ಸದಾಕ್ರಿಯಾಶೀಲ ಕಾರ್ಯಪ್ರವೃತ್ತ ವಾಗಿರಬೇಕಾಗುವುದು...ಈ ಒಂದು ಸಂದರ್ಭದಲ್ಲಿ ನಾವು ಅನುಸರಿಸುವ ಮಾರ್ಗಗಳು ಸರ್ಕಾರದ ಮಾರ್ಗಸೂಚಿಯಂತೆ,ಇರಲೇಬೇಕಾದುದು ಅನಿವಾರ್ಯ.. ಸಾಮಾಜಿಕ ಅಂತರ, ಮಾಸ್ಕಬಳಕೆ,ಸ್ಯಾನಿಟೈಸರ್ ಬಳಕೆಗಳ ಬಗ್ಗೆ ಅರಿವು ಮೂಡಿಸುತ್ತಾ ಕರೋನಾವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ನಮ್ಮ ಒಗ್ಗಟ್ಟು ಮುಂದಾಗಬೇಕು ...,ಕರೋನಾಮುಕ್ತ ಭಾರತ ರಾಷ್ಟ್ರ ಎಂಬ ಮತ್ತೊಂದು ಸ್ವಾತಂತ್ರ್ಯ ಭಾರತೀಯರಿಗೆ ಜರೂರು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ..ಸದಾ ತಿರಂಗಾ ಧ್ವಜದ ಹಾರಾಟ ನಿತ್ಯ ನೂತನವಾಗಿ ಕಂಗೊಳಿಸುವುದು ನಿತ್ಯ ಸತ್ಯ...!!!!
ಸಿದ್ದು ಮೂರ್ತಿ,ಶಿಕ್ಷಕರು,
ತುಮಕೂರು.
Comments
Post a Comment