ಕನ್ನಡ ನಮ್ಮ ಭಾಷೆ

 ಕನ್ನಡ ನಮ್ಮ ಭಾಷೆ



ಕನ್ನಡ ಭಾಷೆ ಜೇನಸಿಹಿಯಂತೆ 

ನುಡಿಯು ಸುಧೆಯ ಸವಿದಂತೆ

ಎದೆಭಾಷೆಗೆ ದನಿಗೂಡಿದ ನುಡಿಯು

ತಂಪು ತೀಡಿದ ತಂಗಾಳಿಯು


ಅಕ್ಕರೆಯ ಅಮ್ಮನ ಮಮತೆ

ಸವಿದ   ಸಿಹಿ ಸಕ್ಕರೆಯಂತೆ

ಒಲವ ಮಾತ ಮುತ್ತುಗಳು 

ಮನಕೆ ಹೊಳೆದಂತೆ  ಬೆಳಕು


ಅರಳಿ ನಗುವ ಕುಸುಮದಂತೆ

ಸೊಗಸಾಗಿ  ಆಡುವ ಮಾತು

ಅಳುವ ಕಂದನ ರಮಿಸುವಂತೆ

ತಾಯಿ ಪ್ರೀತಿ ಜೋಗುಳವು


ಹರಸುವ ಹಾರೈಕೆ ಭರವಸೆ

ಸಡಗರ ಸಂಪ್ರೀತಿ ಸೆಳೆವಂತೆ

ಬೆಸೆದ ಬಂಧಗಳ  ಒಲವು

ನಗುವ ಮನದಂಗಳ ಚೆಲುವು


ಕವಿ  ಕಲ್ಪನೆಯು ಮಿಂದೇಳುವ ಕಡಲು

ಪದ ಹಾಡಲು ತಲೆದೂಗುವ ಗಾನವು

ಸ್ವರಗಳ ಇಂಪೊಳಗೆ ಮಾಧುರ್ಯ

 ಹರಡುವ ಕಂಪು ಕನ್ನಡದ ಸೌಂದರ್ಯ


ಇತಿಹಾಸದ ಪುಟಗಳಲ್ಲಿ ಗರಿಮೆಯು

ಸಾರಿದ ಶಾಸನದಿ ಭಾಷೆಯ ಹಿರಿಮೆಯು

ಕನ್ನಡ ಭಾಷೆ ಒಲವಿನ ಸ್ಪೂರ್ತಿ

ನಿತ್ಯ ಜಗಕೆ ಹರುಡತ ಕೀರ್ತಿ




ಸಿದ್ದು ಮೂರ್ತಿ, ತುಮಕೂರು











Comments

Popular posts from this blog

ಆಧ್ಯಾತ್ಮಿಕ ವಿಚಾರ