ಆಧ್ಯಾತ್ಮಿಕ ವಿಚಾರ
•••••••••••••••••••••••
ಆಧ್ಯಾತ್ಮಿಕ ವಿಚಾರ ಒಂದು ಚಿಂತನೆ
°°°°°°°°°°°°°°°°°°°°°°°°°°°°°
ಆಧ್ಯಾತ್ಮಿಕತೆ ಮನುಷ್ಯನ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಬದಲಾಯಿಸಬಲ್ಲ ಒಂದು ಉತ್ತಮ ವಾದ "ಜ್ಞಾನ ಧಾರೆ"ಇದು ಧರ್ಮದ ಯಥೋಚಿತವಾದ ಜ್ಞಾನಗಳನ್ನು ಒಬ್ಬ ಸಾಮಾನ್ಯ ವ್ಯಕ್ತಿಗೆ ನೀಡಿ ಅವನ ಸುಪ್ತಜ್ಞಾನವನ್ನು ಎಚ್ಚರಿಸುವ ಮೂಲಕ, ಮೌಲ್ಯಗಳು, ಸಕಾರಾತ್ಮಕ ಆಲೋಚನೆಗಳು, ಏಕಾಗ್ರತೆ, ಧ್ಯಾನ, ನಂಬಿಕೆ, ತಾಳ್ಮೆ,ಈ ಎಲ್ಲಾ ಗುಣಗಳು ಅವನಲ್ಲಿ ಮೈಗೂಡುವಂತೆ ಮಾಡುತ್ತದೆ.., ಪ್ರಸ್ತುತ ಸಮಾಜದಲ್ಲಿ ಕಾಣೆಯಾಗುತ್ತಿರುವ ಮೌಲ್ಯಗಳು ವ್ಯವಸ್ಥೆ, ನೀತಿ, ವಿಶ್ವಾಸ, ನಡೆನುಡಿ ಎಲ್ಲವೂ ಆಧ್ಯಾತ್ಮ ಜ್ಞಾನದ ಅರಿವಿಲ್ಲದ ಕಾರಣ ವ್ಯಕ್ತಿಯ ವ್ಯಕ್ತಿತ್ವದಿಂದ ಮರೆಯಾಗುತ್ತಿವೆ., ಸಂಸ್ಕೃತಿ, ಸಂಸ್ಕಾರಗಳು ಮರೀಚಿಕೆಯಾಗಿದೆ.. ಆದ್ದರಿಂದ ಪ್ರಸ್ತುತ ಆರೋಗ್ಯ ಕರ ಸಮಾಜ ನಿರ್ಮಾಣ ವು ಆಧ್ಯಾತ್ಮಿಕ ಹಿನ್ನೆಲೆಯ ವ್ಯಕ್ತಿ ಮತ್ತು ಸಮುದಾಯದಿಂದ ಸಾಧ್ಯ ಎಂಬ ಆಶಯ ವನ್ನ ತೋರುತ್ತೇನೆ..
ಆಧ್ಯಾತ್ಮಿಕ ವಿಚಾರಗಳು ವ್ಯಕ್ತಿಯ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ.. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ವ್ಯಕ್ತಿತ್ವ ಹೊಂದಲು ಸಹಕಾರಿಯಾಗಿದೆ.. ಆಧ್ಯಾತ್ಮ ತತ್ವಗಳು ಧರ್ಮದ ಹಿನ್ನೆಲೆ ಹೊಂದಿರುವ ಕಾರಣ ಆ ತತ್ವಗಳನ್ನು ತನ್ನ ಜೀವನದಲ್ಲಿ ಅನ್ವಯಿಸಿಕೊಳ್ಳವ ವ್ಯಕ್ತಿ ಸತ್ಪ್ರಜೆ , ಸತ್ಪುರುಷರ ಸಾಲಿನಲ್ಲಿ ರಾರಾಜಿಸುತ್ತಾನೆ...
ಆಧ್ಯಾತ್ಮದ ವಿಚಾರಗಳು ಸೈದ್ದಾಂತಿಕ ವಾಗಿ, ಧರ್ಮ, ಸಾತ್ವಿಕತೆ, ಏಕಾಗ್ರತೆ, ಭಕ್ತಿ, ನಂಬಿಕೆ, ಇವೆಲ್ಲದರ ಸಾರವನ್ನು ಹೊಂದಿರುತ್ತವೆ..
ನಮ್ಮ ಯೋಚನೆ ಗಳು ಆಧ್ಯಾತ್ಮಿಕದ ಪ್ರಭಾವಕ್ಕೆ ಒಳಗಾಗಿದ್ದರೆ.,
ನಮ್ಮ ಮನಸ್ಸಾಕ್ಷಿ ಯಂತೆ, ಸ್ವಂತಾಲೋಚನೆಗಳಾಗಿ ಧರ್ಮ, ಸತ್ಯ ಪ್ರಾಮಾಣಿಕತೆಯ ಹೂರಣ ಗಳೇ ಆಗಿರುತ್ತವೆ. ಆದ್ದರಿಂದ ಇಂತಹಆ ಲೋಚನೆಗಳು ನಮ್ಮ ಕರ್ತವ್ಯ, ಕಾಯಕಗಳಲ್ಲಿ, ಧನಾತ್ಮಕತೆ ಯನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತವೆ
ಸ್ವಾಮಿ ವಿವೇಕಾನಂದರು , ಮಹನೀಯರು ಆದ್ಯಾತ್ಮಿಕ ವಿಚಾರಗಳ
ನೆಲೆಯಲ್ಲಿ ತಮ್ಮನ್ನು ತಾವೇ ಅರಿತು ಕೊಂಡು ಪ್ರಸ್ತುತ ಜಗತ್ತಿನ ಕೊರತೆಯನ್ನು ವಿಶ್ಲೇಷಿಸುತ್ತಾರೆ.. ಧರ್ಮ, ಸತ್ಯ, ಸರಳತೆ, ಸಜ್ಜನಿಕೆ, ಧೈರ್ಯ ವಂತಿಕೆ ಇವೆಲ್ಲವೂ ಆಧ್ಯಾತ್ಮಿಕ ನೆಲೆಗಟ್ಟಿನ ಆಲೋಚನೆಗಳಾಗಿವೆ.., ಹಾಗಾಗಿ ಅವರು ಸತ್ಪುರುಷ ರಾಗುತ್ತಾರೆ.
ಧರ್ಮಗಳ ಅರ್ಥ ವನ್ನು ಜಗತ್ತಿಗೆ ಸಾರಿ ಹೇಳುತ್ತಾರೆ.. ಜಗತ್ ವಿಖ್ಯಾತಿಯಾಗುತ್ತಾರೆ.. ಆದ್ದರಿಂದ ಅವರ ವಾಣಿಗಳು ಇಂದಿಗೂ ಪ್ರಸ್ತುತ..
ಅವರಂತೆ ನಮ್ಮ ಆಲೋಚನೆಗಳು ಸಾತ್ವಿಕವಾಗಿ ಮನಸ್ಸಾಕ್ಷಿಗೆ
ಹತ್ತಿರವಾಗಿರಲಿ. ನಮ್ಮ ಕೆಲಸಗಳು ಫಲ ವಾಗುತ್ತವೆ ಜೊತೆಗೆ ನಾವು
ಇತರರಿಗೂ ಮಾರ್ಗದರ್ಶನ ನೀಡುವಂತ ಜವಾಬ್ದಾರಿ ಯುತ ವ್ಯಕ್ತಿಗಳೂ ಕೂಡ ಆಗಿ ಬದಲಾಗಬಹುದು...
ಹನ್ನೆರಡನೆಯ ಶತಮಾನದಲ್ಲಿ ವಚನಕಾರಾದ ಜಗಜ್ಯೋತಿ ಬಸವಣ್ಣ ನವರು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತನ್ನ ಅನೇಕ ವಚನ ಗಳು ಮೂಲಕ ಸಮುದಾಯಕ್ಕೆ ತಲುಪಿಸಿದ್ದಾರೆ... ಆಧ್ಯಾತ್ಮ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸದಭಿರುಚಿಯನ್ನು ತುಂಬುತ್ತದೆ...ಮಧ,ಮೋಹ,ಮತ್ಸರ,ಕಾಮ,ಲೋಭ ಮೋಹ ಇಂತಹ ಅರಿಷಡ್ವರ್ಗಗಳ ಆಲೋಚನೆಗಳಿಂದ ಮನಸ್ಸು ದೂರ ಉಳಿದು ಸಕಾರಾತ್ಮಕ ಯೋಚನೆಗಳತ್ತ ಸದಾ ಕ್ರಿಯಾಶೀಲವಾಗಿರುತ್ತದೆ.ನಾನು ನನ್ನದು ಎನ್ನುವ ಬದಲಿಗೆ ನಾವು ನಮ್ಮವರು ಎನ್ನುವ ವಿಶಾಲ ಮನೋಭಾವ ಬೆಳೆಯುವಲ್ಲಿ ಯಾವುದೇ ಸಂಶಯವಿಲ್ಲ.. ಅದಕ್ಕಾಗಿ ಬಸವಣ್ಣನವರು..
"ಇವನಾರವ ಇವನಾರವ ಇವನಾರವನೆಂದೆನಿಸಿದರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ"
ಎನ್ನುವ ಈ ವಚನದಲ್ಲಿ ನಾವೆಲ್ಲ ಒಂದೆಂಬ ಸದ್ಭಾವ ಮೂಡಿಸುವ ಸದಾಶಯ ಇದರಲ್ಲಿದೆ...ಈ ಸದ್ಭಾವ ಗಳ ಅಂಕುರವಾಗಲು ಆಧ್ಯಾತ್ಮಿಕ ಆಲೋಚನೆಗಳಿಂದ ಮನಸ್ಸು ಪ್ರಫುಲ್ಲವಾಗಿರಬೇಕು.ಆಗ ಮನಸ್ಸು ವಿಶಾಲತೆ ತಾಳುತ್ತದೆ..ಈ ವೈಶಾಲ್ಯತೆ ಯು ಇಡೀ ವಿಶ್ವವನ್ನೆ ಸದ್ಭಾವನೆಯಿಂದ ಅಪ್ಪಿಕೊಳ್ಳುವ ಭ್ರಾತೃತ್ವದ ಮನೋಭಾವವನ್ನು ಹುಟ್ಟಿಹಾಕಿ ಐಕ್ಯತೆಯ ಸಧೃಡ ಬಲವನ್ನು ವಿಶ್ವವೇ ಹೊಂದುತ್ತದೆ..
-ಸಿದ್ದುಮೂರ್ತಿ, ತುಮಕೂರು..
Comments
Post a Comment