ಕಾಲದ ಜಾಲ
ಶೀರ್ಷಿಕೆ-ಕಾಲದ ಜಾಲ ಕಾಲದ ಅಂಕೆಯೊಳಗೆ ನಿತ್ಯ ಸಾಗಿದೆ ಬದುಕು ಊಹೆಗೂ ನಿಲುಕದ ಬದಲಾವಣೆಯ ಹೊತ್ತು ಗತಿಸಿದ ಕ್ಷಣಗಳು ಹುದುಗಿ,ಕಾಲಗರ್ಭದೊಳು ನಿತ್ಯವೂ ಹೊಸತನವು ಇರುಳ ಕಳೆದ ಹಗಲು ಇರುಳ ಸೆರಗಿನಲಿ ಕರಗಿದ ಕನಸುಗಳ ದಾರಿ ಏರಿಳಿತದಲಿ ನೋವು ನಲಿವು ಸಾಗಿದ ಹಾದಿ ಕಾಲದ ತೆಕ್ಕೆಯೊಳಗೆ ಸಿಲುಕಿ ನಲುಗಿದ ಅಂಕಣ ಕಾಲದ ಜಾಲ ನುಣುಚಿಕೊಳ್ಳದ ಬದುಕ ತಾಣ ಅರಿಯದ ತಿರುವುಗಳ ಪಯಣದಿ ಮನುಜ ಸೇರುವ ತೀರ ಬದುಕ ಗುರಿಯ ಸಾಧಕ ಪಾಪ ಪುಣ್ಯ ಬಾಳಬುತ್ತಿ ಹೊತ್ತ ಮಾನಕ ನಿರೀಕ್ಷೆಯ ಒಡಲಿನ ಕನಸುಗಳ ಬದುಕ ಸತ್ಯದ ದಾರಿಯಲಿ ಸಾಗುವುದು ನಿತ್ಯಒಳಿತು ನೀತಿಯ ನೆಲೆಯಲಿ ಕಂಡ ಬದುಕ ಹಸನು ಕಾಲದೊಂದಿಗೆ ಸದಾ ಬದುಕ ನಿಗೂಢ ಪಯಣದಿ ನಿತ್ಯ ಶ್ರಮದ ಫಲದ ಬೆಲೆ ಕಾಣುವ ಹಂಬಲದಿ ಸಿದ್ದು ಮೂರ್ತಿ, ತುಮಕೂರು