ಕಾನನರೋಧನ


🌱ಕಾನನರೋಧನ🌱

ಹಚ್ಚ ಹಸಿರು ಪಚ್ಚೆ ಪೈರು ಗಿಡ ಬಳ್ಳಿ ನಗುತಾವೆಂದು
ವಸುಂಧರೆಯ ಬಳಸಿ ತಾ ಹಸಿರು ಹೊದಿಸಿ ನಲಿತಾವೆಂದು
ಧರಣಿ ನವವಧುವಂತೆ ನಾಚಿದ ಮಿಂಚು ನಲಿವುದೆಂದು
ನೆಲಮುಗಿಲ ಸಂಗಮದ ಶಾಶ್ವತ ಸೊಬಗ ಕಾಣುವುದೆಂತು

ಧರಣಿಯ ಜೀವಬಳ್ಳಿಯ ಉಸಿರ ಕಸಿವ ಸ್ವಾರ್ಥ ದಲ್ಲಿ
ಬಲಿಯಾದ ಕುಡಿಗಳ, ಎಲೆ ಬಳ್ಳಿ ರೆಂಬೆ ಕೊಂಬೆಗಳ...,
ಕೊನೆಗೆ ಮೂಲ ಬೇರುಗಳ ಹಿರಿದು ತಗೆದ ಹಿಗ್ಗಿನಲಿ
ಕುಣಿದಿದ್ದ ಸ್ವಾರ್ಥ ,ಧರಣಿಒಡಲ ನೋವ ಇಮ್ಮಡಿಸಿತು

ಅರಳಿ ನಗುವ ಹೂವ ಮೊಗ್ಗಲ್ಲಿ ಚಿವುಟಿ ಎಸೆದು
ಬಿಗಿದಪ್ಪಿದ ಲತೆಬಳ್ಳಿಯ ನಡುವ ಕತ್ತರಿಸಿ ತೆಗೆದು
ಬಿರುಗಾಳಿಗೆ ತೂಗಿ ತಡೆವ ಮರಗಳ ಒಡಲು ಕೊಯ್ದ
ವನ ವ ಕಾಡಿದ ರೋಧನಕೆ,ಮನೆಯಂಗಳ ಮಿನುಗಿತು

ಧರೆಗುರುಳಿದ ಮರಗಳು ಜೀವ ಕಳೆದಕೊಂಡು
ಬಯಲುದ್ದ ರಂಗಾಗಿ ಮಲಗಿದ ರಹದಾರಿಗಳು
ಮಲಿನ ಗಾಳಿ ಒಸರಿ ಇಂಚೂಬಿಡದ ಕಾಂಕ್ರೀಟು ವನಗಳು
ಕೋಪದಿ ರಾಚಿದ ಮಳೆಗೆ ಕೊಚ್ಚಿ ಹೋಗುವ ಮಣ್ಣರಾಶಿ

ನರನ ನಡೆಗೆ  ಕೋಪದಿ ಗುಡಗಿಹಳು ಧರಣಿ
ಸ್ವಾರ್ಥ ದ ತಳಹದಿ ಕಳಚುವ ತನಕ,ಜೀವರಾಶಿಗೆ
ಕಂಟಕ ತಳೆದು, ಕುಕೃತ್ಯ ಗಳ ತೆರೆದು ಕೊಲ್ಲುವತನಕ
ಅರಿವು ಮೂಡುವ ತನಕ,
ಮನುಜನ ಸ್ವಾರ್ಥ ಅಳಿವತನಕ..!!!!

🌱ಸಿದ್ದುಮೂರ್ತಿ🌱


Comments

Popular posts from this blog

ಆಧ್ಯಾತ್ಮಿಕ ವಿಚಾರ