ಶಾಯರಿಗಳು


****************

ವಿಷಯ: ಶಾಯರಿ

""""""""""""""

-------------------------------

ಶಾಯರಿ ೧: ಧರ್ಮದ ಬೆಳಕು

--------------------------------


ಜಗದ ಧರ್ಮಗಳು ಸಾರುವ ನೀತಿಯೂ ಒಂದೇ

ಸಕಲ ಧರ್ಮಗಳ  ಬದುಕಿನ ದಾರಿಯೂ ಒಂದೇ

ಅರಿತವರೇ ನಡೆಯುವರು ಜಾತಿಯ ದಾರಿ ಹಿಡಿದು

ಧರ್ಮ ತೋರುವ ದೇವನೊಲಿಸುವ ದಾರಿ ತೊರೆದು


-------------------

ಶಾಯರಿ ೨: ಶ್ರಮ

-------------------


ಕನಸುಗಳು ನನಸಾಗಿಸುವಂತ ಶ್ರಮವಿರಲಿ

ಶ್ರಮದ ಬದುಕಲ್ಲಿ ನಮ್ಮ ಒಲವಿರಲಿ

ಒಲವಿನ ಬದುಕಲ್ಲಿ ನಮ್ಮ ವಿಶ್ವಾಸವಿರಲಿ

ವಿಶ್ವಾಸದ ಬದುಕಲ್ಲಿ ನಿರೀಕ್ಷಿಸಿದ ಫಲ ನಮ್ಮದಾಗಲಿ.


-ಸಿದ್ದು ಮೂರ್ತಿ, ತುಮಕೂರು.

Comments

Popular posts from this blog

ಆಧ್ಯಾತ್ಮಿಕ ವಿಚಾರ