ಅದೃಶ್ಯ ಅಸುರ
ಜಗದಗಲ ವ್ಯಾಪಕ ಮನುಕುಲ ಬಾಧಿತ ದಳ್ಳುರಿ, ಹರಡಿಹ ಕಿಚ್ಚು ಸುಡುತಿಹ ಜೀವನೆಲೆಯ ಸಂಹಾರಿ. ಮನಮನಗಳು ಅನುರಣಿಸುವ ಭಯದ ಪರಿ, ಬಿಡದೇ ಕಾಡುವ ಅಗಣಿತ ದ್ವಂದ್ವ ದ ವೈಖರಿ. ಲಕ್ಷ ಲಕ್ಷ ಅಲಕ್ಷ್ಯ ಜೀವತೆತ್ತ ದೇ ಹಗಳ ರಾಶಿ ರಾಶಿ, ತೀರದ ದಾಹಕ್ಕೆ ಮಾತ್ರ ವ್ಯಸನಿಗಳ ಚಟದಂತ ಖುಷಿ, ಅನುದಿನ ಅನುಗಾಲ ಮೈಗಂಟಿತು ಬಿಡದ ನಶೆ, ಅಮಾಯಕರು ತೊರೆದ ಜೀವ ಕಲೆಸಲಾಗದ ವ್ಯಥೆ. ದುಡಿವ ಕೈಗಳು ಪ್ರದರ್ಶನದ ಬೆದರು ಗೊಂಬೆಗಳಂತೆ, ಅಸಂಖ್ಯ ಹಸಿವುಗಳ ನಿಲ್ಲದ ನರಳಾಟ ಮನಕಲಕುವಂತೆ, ಕಲಕಿದ ಮನಗಳೋ ಪ್ರತಿಯಾಗಿ ತೆರೆದ ನಿಸ್ವಾಮೌಲ್ಯದಂತೆ, ಭಾವುಕ ಮಿಡಿತ ಅರಿಯದ ಪಾಪಪ್ರಜ್ಞೆ ಗೆ ಸಾಕ್ಷಿಯಾದಂತೆ. ಹಾಸು ಹೊದ್ದು ಮಲಗಿದ ಬೇಸರ ಅಸಹನೀಯ ವಾಗಿ, ಕಾಣದ ಕಣದ ಕಾಟಕ್ಕೆ ಹುರಿದು ಮುಕ್ಕಿದ ನೆಮ್ಮದಿಕನಸಾಗಿ, ಹಗಲು ಕಳೆದ ರಾತ್ರಿ ಗಳೋ ನಿದಿರೆಯ ಕಸಿದ ಹೊತ್ತಾಗಿ, ಆಗಾಗ ಸ್ಫುರಿಸುವ ದಿವ್ಯ ಮೌನದ ಬದುಕುನೀರಸವಾಯ್ತು. ಕುಸಿದ ಕಾಂಚಾಣದ ಗತ್ತು, ಹುಸಿಯಾದ ತಿರುಳ ಕಿಮ್ಮತ್ತು, ಅಸುರ ವರ್ತನೆ ಚದುರಿ ಚೆಲ್ಲಾಡಿ,ಪ್ರಾಣಹಿಂಡುವಚೀತ್ಕಾರ, ಕೊರೋನಾ ಹರಡಿದ ಕಾರ್ಮೋಡ ಕವಿದ ಕತ್ತಲ ಸೂತಕ, ಸರೀದೀತೆಂದು ಅದೃಶ್ಯ ಅಸುರನ ಆರ್ಭಟದ ಆತಂಕ.. -ಸಿದ್ದುಮೂರ್ತಿ