ನೃತ್ಯ ಹಾಗೂ ಆರೋಗ್ಯ



ನೃತ್ಯ ಹಾಗೂ ಆರೋಗ್ಯ

*****************




ನಾಟ್ಯವು ಭಾರತೀಯ ಸಂಸ್ಕೃತಿಯಲ್ಲಿ ಪಾರಂಪರಿಕವಾಗಿ ಬಂದಿರುವ ಸಾಂಪ್ರದಾಯಿಕ ಕಲೆ.ನೃತ್ಯವು ಒಂದು ಮನರಂಜನಾ ಕಲೆಯಾದರೂ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ, ಧರ್ಮ,ಆಚರಣೆ, ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅಭಿವ್ಯಕ್ತ ಕಲೆ....


ವಿವಿಧ ಭಾವ ಭಂಗಿಗಳಲ್ಲಿ ನವರಸಗಳನ್ನು ವ್ಯಕ್ತಗೊಳಿಸುತ್ತಾ , ಸನ್ನಿವೇಶವನ್ನು ವೈಭವವಾಗಿ ಸಮಗ್ರವಾಗಿ, ಆಕರ್ಷಕವಾಗಿ ಬಿತ್ತರಗೊಳಿಸುವ ಕಲೆ ನೃತ್ಯಕ್ಕಿದೆ... ಕಣ್ಣು, ಕಾಲುಗಳು,ಕೈಗಳು,ದೇಹ ಇವುಗಳ ಯಥೋಚಿತ ಚಲನೆ ಮೂಡಿಸುವ ಆಕರ್ಷಕ ಭಂಗಿಗಳು ನೋಡುಗರ ಮನದಲ್ಲಿ ಕುತೂಹಲ ಆಕರ್ಷಣೆಯನ್ನು ಕಾಯ್ದಿಟ್ಟುಕೊಂಡು ಭಾವನೆಗಳನ್ನು ಅರಳಿಸುವ ಅಧ್ಬುತ ಕಲೆ ಈ ನಾಟ್ಯ...,

ಹಾಗೆಯೇ ಈ ನಾಟ್ಯದಿಂದ ಸಮಯೋಚಿತವಾಗಿ ಚಲಿಸುವ ಅಂಗಗಳಿಂದ ನಿಯಮಿತ ರಕ್ತಸಂಚಾರ ಗಳು ಅಂಗಾಂಗ ಗಳ ಕಾರ್ಯ ಸಮರ್ಪಕವಾಗಿ ಆಗುವುದರ ಜೊತೆಗೆ ಏಕಾಗ್ರತೆಯೂ ಸಿದ್ಧಿಸುತ್ತದೆ..ಕ್ರಮೇಣ ಮಾನಸಿಕ ಆರೋಗ್ಯ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ...

ಆದುದರಿಂದ ನೃತ್ಯ ಪರೋಕ್ಷವಾಗಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ...

ಯೋಗಾಭ್ಯಾಸದಿಂದ ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೋ ಹಾಗೆಯೇ ನೃತ್ಯ ಹಾಗೂ ನೃತ್ಯಾಭ್ಯಾಸ ಗಳು ಕೂಡ ಪರೋಕ್ಷವಾಗಿ ಯೋಗಾಭ್ಯಾಸದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ... ಎಂಬುದನ್ನು ನಿಸ್ಸಂಶಯವಾಗಿ ಈ ಸಂದರ್ಭದಲ್ಲಿ ಹೇಳಬಹುದು...


ನಾಟ್ಯದ ವಿವಿಧ ಭಂಗಿಗಳು,ಮುದ್ರೆಗಳು,ಚಲನೆ,ಗಳು ವ್ಯಾಯಾಮಗಳಂತೆಯೆ ದೇಹಕ್ಕೆ ಸದೃಡತೆ, ಚೈತನ್ಯವನ್ನು ನೀಡುತ್ತದೆ.. ಆಧುನಿಕ ಒತ್ತಡಜೀವನಶೈಲಿಯಲ್ಲಿ ಅದೆಷ್ಟೋ ಮಹಿಳೆಯರು ಮಾನಸಿಕ ಖಿನ್ನತೆಯಿಂದ ಬಳಲುತ್ತಾ ಆತ್ಮವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ...ಇಂತಹ ಸಂದರ್ಭದಲ್ಲಿ ಈ ನಾಟ್ಯವು  ಮನಸ್ಸಿನಲ್ಲಿ ಉಲ್ಲಾಸ ಉತ್ಸಾಹ ಚಿಲುಮೆ ಯಾಗಿ ಆತ್ಮವಿಶ್ವಾಸವನ್ನು ತುಂಬುವುದರಲ್ಲಿ ಎರಡು ಮಾತಿಲ್ಲ ಅಲ್ಲದೇ ಸಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ..



ಸಿದ್ದು ಮೂರ್ತಿ, ತುಮಕೂರು.

Comments

Popular posts from this blog

ಆಧ್ಯಾತ್ಮಿಕ ವಿಚಾರ