ಟಂಕಾ

 


ಸಂಘ


ಸಂಘಜೀವಿಯ

ಮಾನವ ಸಮಾಜದ

ಸುಗಮಕಾರ

ಕೂಡಿ ಬಾಳುವ ಇಚ್ಚೆ

ಹೊರುವ ಸಮಭಾರ


ಸಾಹಿತ್ಯ


ಮನದ ಭಾವ

ಅರಳಿದ ಸುಮವು

ಪರಿಮಳವು

ಚೆದುರಿ ಚೆಲ್ಲುವಂತೆ

ಸಾಹಿತ್ಯ ಕುಸುಮವು


ಸೇವೆ


ನಿಸ್ವಾರ್ಥ ಸೇವೆ

ನಮ್ಮ ಗುರಿಯಾಗಲಿ

ಬದುಕಿನಲಿ

ಇದು ನೀತಿಯಾಗಲಿ

ಅರಿತು ನಡೆಯಲು


ಶ್ರಮ


ಶ್ರಮವಿಲ್ಲದೆ

ಪಡೆವ ಜಯ ವ್ಯರ್ಥ

ಫಲನಿರೀಕ್ಷೆ

ಇಲ್ಲದ ಶ್ರಮಗಳ

ಗೆಲುವು ನಿತ್ಯ ಸತ್ಯ




ಸಿದ್ದುಮೂರ್ತಿ










Comments

Popular posts from this blog

ಆಧ್ಯಾತ್ಮಿಕ ವಿಚಾರ