ಲೇಖನ ಮಾಲಿಕೆ ೧ ಶೀರ್ಷಿಕೆ:ಧರ್ಮ ಮಾರ್ಗ ಬಹಳ ಹಿಂದಿನಿಂದಲೂ ನಾವು ನಮ್ಮ ಜೀವನದಲ್ಲಿ ಅನೇಕ ಆಚರಣೆಗಳು, ಪದ್ದತಿಗಳು, ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದೇವೆ.ಇವೆಲ್ಲ ನಮ್ಮ ಜೀವನವನ್ನು ಒಂದು ಚೌಕಟ್ಟಿನಲ್ಲಿ ಇಟ್ಟಿರುತ್ತದೆ.. ಆದರೂ ಇವು ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹೀಗೆ ಜೀವನದಲ್ಲಿ ಅಳವಡಿಸಿಕೊಂಡಿರುವ ಕಾನೂನು ಕಟ್ಟಳೆಗಳೇ 'ಧರ್ಮ ಶಾಸ್ತ್ರಗಳು'..ಇವು ಮೌಲ್ಯಯುತವಾದ ಜೀವನತತ್ವಗಳನ್ನು ಸಾರುತ್ತವೆ.ಒಂದುರೀತಿಯಲ್ಲಿ ಧರ್ಮ' ಜೀವನಸಂವಿಧಾನ ,'ವಾಗಿದೆ.. ಇದು ಪ್ರತಿಯೊಂದು ಹಂತದಲ್ಲೂ ಜೀವನನಡೆಸುವ ಮಾರ್ಗ,ಆದರ್ಶ ಮಾನವೀಯ ಮೌಲ್ಯ, ಸನ್ನಡತೆ, ಸಂಸ್ಕಾರ ಗಳನ್ನು ಅರ್ಥೈಸುವ ಸಾರ.. ಶಿಷ್ಟಾಚಾರ,ಸಭ್ಯತೆ, ಸನ್ನಡತೆಯ ಆಚರಣೆಗಳೇ ಸಂಸ್ಕಾರಗಳು.. ಉತ್ತಮ ನಾಗರೀಕತೆ ಶಿಸ್ತು ಬದ್ಧತೆ,ಗುರುತರ ಜವಾಬ್ದಾರಿ, ರೀತಿ ನೀತಿಗಳು ,ಮಾನವೀಯತೆಗಳು ಸಂಸ್ಕಾರದ ಅರ್ಥದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಸಮಾಜ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದಲ್ಲಿ ನ ವಾಸ್ತವಾಂಶ ಗಳನ್ನು ಅವಲೋಕಿಸಿದಾಗ, ಪ್ರಸ್ತುತ ಜನಜೀವನದಲ್ಲಿ ಧರ್ಮ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ...ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಮಾತಿನಲ್ಲಿ, ನಾವು ಧರ್...