ಮಳೆಗಾಲ
ಇಳೆಯ ಮಜ್ಜನ ಮೊದಲ ಬಾರಿ
ಮುಂಗಾರು ಸಜ್ಜಾಗುವ ಮುನ್ನಾ
ತಂಪಿನ ಸಿಂಚನದಿ
ರಮಿಸಿದ ಮುಗಿಲು
ಧರೆಗೆ ಒಲವಧಾರೆಯಂತೆ.
ತಂಪಿನ ಸಿಂಚನದಿ
ರಮಿಸಿದ ಮುಗಿಲು
ಧರೆಗೆ ಒಲವಧಾರೆಯಂತೆ.
ಅರಳಿ ನಿಂತ ಹೂವ
ಹಸಿರು ಮಿಂಚ ಎಲೆ ಬಳಕೋ ಲತೆಗಳು
ಅಲಲ್ಲಿ ತುಂಬಿ ತುಳುಕಿ ಹಳ್ಳಕೊಳ್ಳ
ಕೆನ್ನೀರ ದಾಟಿ ಕೆಸರ ಮೆತ್ತಿದ
ಕಾಲ,ನಡಿಗೆಯಲ್ಲಿ ಛತ್ರಿ ನೆರವಾಗಿ ತೋಯದಂತೆ.
ಹಸಿರು ಮಿಂಚ ಎಲೆ ಬಳಕೋ ಲತೆಗಳು
ಅಲಲ್ಲಿ ತುಂಬಿ ತುಳುಕಿ ಹಳ್ಳಕೊಳ್ಳ
ಕೆನ್ನೀರ ದಾಟಿ ಕೆಸರ ಮೆತ್ತಿದ
ಕಾಲ,ನಡಿಗೆಯಲ್ಲಿ ಛತ್ರಿ ನೆರವಾಗಿ ತೋಯದಂತೆ.
ಅಜ್ಜನ ಹಳೆಯ ಮಾಳಿಗೆ ಮನೆ
ಹನಿ ಜಿನುಗದಂತೆ ಹದವಾಗಿ ಜೋಡಿಸಿ
ಹರಿವ ನೀರಿಗೆ ಪನ್ನುಳಿಗೆ ಜೋಡಿಸಿದೆ
ಮಳೆಗಾಲ ಪ್ರಾರಂಭ ತುಸುಚಿಮುಕಿಸುವ
ಹಿತವಾದ ಚಳಿಗೆ ಬೆಚ್ಚಗಿನ,ಖಾರ
ಹಪ್ಪಳ, ಸಂಡಿಗೆ, ಚಕ್ಕುಲಿ
ತಿಂಗಳ ಹಿಂದೆ ಸಿದ್ದಗೊಂಡಿದೆ.
ಹನಿ ಜಿನುಗದಂತೆ ಹದವಾಗಿ ಜೋಡಿಸಿ
ಹರಿವ ನೀರಿಗೆ ಪನ್ನುಳಿಗೆ ಜೋಡಿಸಿದೆ
ಮಳೆಗಾಲ ಪ್ರಾರಂಭ ತುಸುಚಿಮುಕಿಸುವ
ಹಿತವಾದ ಚಳಿಗೆ ಬೆಚ್ಚಗಿನ,ಖಾರ
ಹಪ್ಪಳ, ಸಂಡಿಗೆ, ಚಕ್ಕುಲಿ
ತಿಂಗಳ ಹಿಂದೆ ಸಿದ್ದಗೊಂಡಿದೆ.
ಹನಿ ಹನಿಗಳ ಚಿಟ ಪಟ ಕಲರವ
ಧಾರೆಯ ಪರಿಧಿಯಂಚು
ಮುಗಿಲು ಸೀಳುವ ಮಿಂಚು
ರಭಸದಿ ಅಪ್ಪಳಿಸಿ ಹರಿದ ನೀರು ನಿಲ್ಲದೆ ಓಡುತ್ತದೆ
ಹನಿ ಹನಿ ಕೂಡಿ ಹಳ್ಳತುಂಬಿ, ಚೆಲ್ಲುತ್ತದೆ.
ಧಾರೆಯ ಪರಿಧಿಯಂಚು
ಮುಗಿಲು ಸೀಳುವ ಮಿಂಚು
ರಭಸದಿ ಅಪ್ಪಳಿಸಿ ಹರಿದ ನೀರು ನಿಲ್ಲದೆ ಓಡುತ್ತದೆ
ಹನಿ ಹನಿ ಕೂಡಿ ಹಳ್ಳತುಂಬಿ, ಚೆಲ್ಲುತ್ತದೆ.
ಪಚ್ಚೆ ಪೈರು ನಾಟಿ ಗೆ ಸಾಲಿಟ್ಟ ಹಸಿರು
ಕಾಲಿಂಗಂಟಿದ ಕೆಸರು ಮುದ್ದೆ
ಮೊಸರುಂಡ ಜನಕ್ಕೆ ನೆನಪಾಗಲಿಲ್ಲ
ಶ್ರಮದ ಸೇವೆ ಸುಲಿಗೆ ಯಾಗಿ
ಸೊಗಸಕಾಣುವವಗೆ ಮೈಲಿಗೆಯಂತೆ
ಮಳೆಗೆ ತೋಯ್ದ ಬದುಕು
ಕಣ್ಣ ನೀರ ನುಂಗಿ ಧರೆಗೆ ಇಳಿದಂತೆ.
ಕಾಲಿಂಗಂಟಿದ ಕೆಸರು ಮುದ್ದೆ
ಮೊಸರುಂಡ ಜನಕ್ಕೆ ನೆನಪಾಗಲಿಲ್ಲ
ಶ್ರಮದ ಸೇವೆ ಸುಲಿಗೆ ಯಾಗಿ
ಸೊಗಸಕಾಣುವವಗೆ ಮೈಲಿಗೆಯಂತೆ
ಮಳೆಗೆ ತೋಯ್ದ ಬದುಕು
ಕಣ್ಣ ನೀರ ನುಂಗಿ ಧರೆಗೆ ಇಳಿದಂತೆ.
ವರುಷವೂ ವರುಣನ ಕಾಯ್ವರು
ಹಸನಾದ ಬದುಕ
ಹದಗೊಳಿಸಿದ ನೆಲದಲ್ಲಿ, ಬಿತ್ತಿ ಬೆಳೆಯಲು
ಕನಸ ಚಿಗರೊಡೆಸುವ ಬಯಕೆಯ
ಸೊಗಸಾದ ಮಳೆಗಾಲಕ್ಕೆ ಕಾಯುತ್ತಿರುವರು
ಹಸನಾದ ಬದುಕ
ಹದಗೊಳಿಸಿದ ನೆಲದಲ್ಲಿ, ಬಿತ್ತಿ ಬೆಳೆಯಲು
ಕನಸ ಚಿಗರೊಡೆಸುವ ಬಯಕೆಯ
ಸೊಗಸಾದ ಮಳೆಗಾಲಕ್ಕೆ ಕಾಯುತ್ತಿರುವರು
-ಸಿದ್ದು ಮೂರ್ತಿ
Comments
Post a Comment