ಸ್ವರಾಲಾಪನ
°°°°°°°°°°°°°
ಅಂಬರ ಚುಂಬಿತ ತನ್ಮಯ ರಸ ಭಾವಾ ಸುಸಂಗತ
ಆಂತರ್ಯದ ಭಾವ ಭಾವಗಳ ಸಮ್ಮೋಹಕ ಸಮ್ಮಳಿತ
ಇನಿದನಿ ಇಂಚರ ಮಂಜುಳಾಗಾನ ಮಧುರ ಮಿಡಿತ
ಈಶನೊಲಿದ ಅಮೃತಘಳಿಗೆಗೆ ಹೊಸ ಬದುಕಿನ ತುಡಿತ
ಉದಯವಾಯಿತು ಸುಂದರ ಜೀವನ ಶುಭಾರಂಭ
ಊರ್ಮಿಳೆಯ ಶಾಂತಚಿತ್ತೆಯಜೊತೆ ಪಯಣದಾರಂಭ
ಋತು ಋತುಗಳ ಜೊತೆಗೆ ಬೆಸೆಯುತ್ತಾ ಜೀವನಾರಂಭ
ಎದೆಬಡಿತದ ತಾಳತನ್ಮಯ ಭಾವತುಡಿತಗಳ ತಹಬಂದನ
ಏಳಿಗೆಯ ಸ್ವರಾರೋಹಣ ಇಂಪಾಗಿ ಇಮ್ಮಡಿಸಿದ ಗಾನ
ಐಸಿರಿಯ ಸೀಮೆಯೊಳು ಉತ್ಸುಕ ಭಾವಗಳ ಮಿಲನ
ಒಲವುಗಳ ಸೆಳೆತದ ಸೆಲೆಯಲ್ಲಿ ಸೆರೆಯಾದ ಭಾವಗಳು
ಓಲೆಯ ಸಾರಗಳೂ ಪ್ರೀತಿಅಂಕಣದಮೋಹ ತುಡಿತಗಳು
ಔದಾರ್ಯದ ಅಂತ:ಕರಣ ದೀವಿಗೆಯ ದಿವಿಜದಂತೆ
ಅಂಗೈಯಲ್ಲಿ ಹಿಡಿದ ನನ್ನರಸಿ ನನ್ನನ್ನು ಸ್ವಾಗತಿಸಿದಂತೆ
ಅ: ಆಹ್ಲಾದಕರ ಅಮೋಘ ನಮ್ಮೀ ಜೀವನಪಯಣ
-ಸಿದ್ದುಮೂರ್ತಿ
Comments
Post a Comment