ಸಭ್ಯತೆ
ಸಭ್ಯತೆ (ನ್ಯಾನೋ ಕಥೆ)
ರಾಜಪ್ಪ ಮತ್ತು ರಾಮಪ್ಪ ತಮ್ಮಿಬ್ಬರು ಮಕ್ಕಳೊಂದಿಗೆ ಒಂದು ಕಚ್ಚಾ ರಸ್ತೆ ಯಲ್ಲಿ ವಾಯುವಿಹಾರಕ್ಕೆಂದು ತೆರಳಿರುತ್ತಾರೆ.
ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿದ್ದ ರಾಮಪ್ಪ ತನ್ನ ಮಗನನ್ನು
ಹೊಗಳುತ್ತಾ ಶಾಲೆಯಲ್ಲಿ ಓದು ಆಟಗಳೆಲ್ಲದರಲ್ಲಿ ನನ್ನ ಮಗ ಮುಂದು ಶಾಲೆ ನನ್ನ ಮಗನಿಗೆ ಎಲ್ಲಾ ಕಲಿಸುತ್ತದೆ ಎನ್ನುತ್ತಾನೆ..ಅಷ್ಟರಲ್ಲಿ ಮುದುಕನೊಬ್ಬ ನೀರು ನಿಂತ ರಸ್ತೆ ದಾಟಲಾಗದೆ ಜಾರಿ ಬೀಳುತ್ತಾನೆ.ಸಾಮಾನ್ಯ ಕನ್ನಡ ಶಾಲೆಯಲ್ಲಿ ಓದುತ್ತಿದ್ದರಾಜಪ್ಪನ ಮಗ ಓಡಿಬಂದು ಮುದುಕನನ್ನು ಹಿಡಿದುಕೊಂಡು ನಿಧಾನವಾಗಿ ಮೇಲೇಳಲು ಸಹಾಯ ಮಾಡುತ್ತಾ ಕೈ,ಮತ್ತು ಬಟ್ಟೆಗಂಟಿದ ಮಣ್ಣನ್ನು ತನ್ನ ಕೈಯಿಂದ ಸ್ವಚ್ಚ ಗೊಳಿಸುತ್ತಾ ನಿಧಾನವಾಗಿ ಮುದುಕನನ್ನು ಸ್ವಲ್ಪ ದೂರದ ವರೆಗೆ ಕೈ ಹಿಡಿದು ನಡೆಸುತ್ತಾನೆ..ಇದನ್ನು ರಾಮಪ್ಪಮತ್ತು ಅವನ ಮಗ ಮೂಕವಿಸ್ಮಿತರಾಗಿ ನೋಡುತ್ತಾ ನಿಂತರು..!!!.
ಓದಿನಲ್ಲಿ ಎಷ್ಟೇ ಮುಂದಿದ್ದರು ಸಭ್ಯತೆ ಕಲಿಸದ ಶಿಕ್ಷಣ ನಿಜಕ್ಕೂ ವ್ಯರ್ಥ., ಪರಿಪೂರ್ಣ ವಲ್ಲ
ಸಿದ್ದು ಮೂರ್ತಿ..
Comments
Post a Comment