Posts

Showing posts from January 16, 2022

ಕವಿತೆ

 ಆ ನೆನಪುಗಳೇ ಹಾಗೆ --------------------------- ಆ ನೆನಪುಗಳೇ ಹಾಗೆ ತಂಗಾಳಿ ಬೀಸಿ ತಂಪೂಡಿ ರಮಿಸಿ ಬಿಡುತ್ತವೆ. ಒಮ್ಮೆ ಹಿಂಡಿ ಬಸಿದು  ಬೆವರಿಳಿಸಿದಂತೆ ಒಡಲ ಕುಲುಮೆಯಾಗಿ ಕುದಿಸಿ ಬಿಡುತ್ತವೆ. ಆ ನೆನಪುಗಳೇ ಹಾಗೆ ಒಂಟಿಯಾಗಿರಲು  ಜೊತೆಯಾಗಿ  ರೆಕ್ಕೆಗಳ ಹಚ್ಚಿ ಬಾನೆತ್ತರಕ್ಕೆ ಹಾರಿಸಿ ಮುದನೀಡುತ್ತವೆ. ಒಮ್ಮೆ  ನೋವ ಕಡಲಲ್ಲಿ ಏಳುವ ಅಲೆಗಳಂತೆ,  ಮನದ ದಡಕ್ಕೆ ಅಪ್ಪಳಿಸುತ್ತದೆ ದು:ಖವ ಉಮ್ಮಳಿಸಿ.. ಆ ನೆನಪುಗಳೇ ಹಾಗೆ ಭರವಸೆಯ ಮಿತ್ರನಂತೆ.. ಸಾಂತ್ವನದ ಮಾತುಗಳಾಗಿ ಒಮ್ಮೆ ಹುಸಿಯಾದ ನಂಬಿಕೆ ಹಸನಾಗಿ ದಹಿಸಿ  ಗಹ ಗಹಿಸುತ್ತವೆ.. ಆ ನೆನಪುಗಳೇ ಹಾಗೆ ಉಳಿದು ಕೊಳೆತು  ನಾರುವಂತೆ..!!! ತೆಗೆದುಬರಿದು ಮಾಡವುದೊಳಿತು.. ಮಧುರ ನೆನಪಿನ  ಖಣಜವೊಂದಿರಲಿ  ಸಿಹಿ ಹೊರಣದಂತೆ  ಆಗಾಗ ಸವಿಯಲು ..!! ಸಿದ್ದು ಮೂರ್ತಿ, ತುಮಕೂರು