ನಿಗೂಢ ಛಾಯೆ
ನಿಗೂಢ ಛಾಯೆ
~~~~~~~~~~~
~~~~~~~~~~~
ಕಾರ್ಮುಗಿಲು ಕವಿದ ಕತ್ತಲು
ಬೆಳಕ ನುಂಗಿ ವ್ಯಾಪಿಸುತ್ತಿದೆ
ಚದುರುತ್ತಿವೆ ವೇಗದಲ್ಲಿ
ಕರಿನೆರಳ ಛಾಯೆಗಳು
ಕತ್ತಲೊಳಗೆ ಉಳಿದ ಜೀವಿಗಳ
ಬೆಳಕ ನುಂಗಿ ವ್ಯಾಪಿಸುತ್ತಿದೆ
ಚದುರುತ್ತಿವೆ ವೇಗದಲ್ಲಿ
ಕರಿನೆರಳ ಛಾಯೆಗಳು
ಕತ್ತಲೊಳಗೆ ಉಳಿದ ಜೀವಿಗಳ
ಜೀವ ಹಿಂಡುವ ಹುನ್ನಾರದಲಿ...
ದಿನದ ಬೆಳಕೋ ಮಾಮೂಲು
ಮೌನಗತ್ತಲ ತಲುಪದ ಕಂದೀಲು
ಊರ ತೊರೆದು ಬದುಕ ಅರಸಿ
ದುಡಿವ ಛಲಗಳ ಹಿಂಡುಗಳು
ಬೀದಿ ಬದಿಯ ಬಿಡಾರಗಳು
ನಿತ್ಯ ವ್ಯಥೆಯ ಕಥೆಗಳು...
ಮೌನಗತ್ತಲ ತಲುಪದ ಕಂದೀಲು
ಊರ ತೊರೆದು ಬದುಕ ಅರಸಿ
ದುಡಿವ ಛಲಗಳ ಹಿಂಡುಗಳು
ಬೀದಿ ಬದಿಯ ಬಿಡಾರಗಳು
ನಿತ್ಯ ವ್ಯಥೆಯ ಕಥೆಗಳು...
ಅಲಲ್ಲಿ ಅಣಿಯಾದ ಜಾಲ
ಹೊಂಚುಹಾಕಿ ಕುಳಿತಂತೆ ಕಾಲ
ಕೊನೆಗಾಗಿ ಜೀವಿಗಳ ಉಳಿಗಾಲ
ವ್ಯಥೆಯ ಹೊದ್ದ ಬದುಕು
ನೆಮ್ಮದಿ ಹುರಿದು ಮುಕ್ಕಿದ ಭಯದಣಕು
ಹೊಂಚುಹಾಕಿ ಕುಳಿತಂತೆ ಕಾಲ
ಕೊನೆಗಾಗಿ ಜೀವಿಗಳ ಉಳಿಗಾಲ
ವ್ಯಥೆಯ ಹೊದ್ದ ಬದುಕು
ನೆಮ್ಮದಿ ಹುರಿದು ಮುಕ್ಕಿದ ಭಯದಣಕು
ಮನವು ಮೌನದೆರೆಯ ಮುಸುಕು....
ಬದುಕಿದು ಬೂದಿಯಂತೆ
ನಿಗಿ ನಿಗಿಸುವ ಕೆಂಡಗಳ ಮರೆಮಾಚಿ
ದಹಿಸುವ ಕಿಚ್ಚ ಒಡಲೊಳಗಿಟ್ಟು
ಕಾಲದೊಳಗೆ ನಿಗೂಢ ದಂತೆ
ವಾಸ್ತವದಲಿ ಅರಿವಾಗದಂತೆ
ಬಂದೆರುಗುವ ವಿಧಿ ತಿಳಿಯದಂತೆ....
~ಸಿದ್ದುಮೂರ್ತಿ.
ನಿಗಿ ನಿಗಿಸುವ ಕೆಂಡಗಳ ಮರೆಮಾಚಿ
ದಹಿಸುವ ಕಿಚ್ಚ ಒಡಲೊಳಗಿಟ್ಟು
ಕಾಲದೊಳಗೆ ನಿಗೂಢ ದಂತೆ
ವಾಸ್ತವದಲಿ ಅರಿವಾಗದಂತೆ
ಬಂದೆರುಗುವ ವಿಧಿ ತಿಳಿಯದಂತೆ....
~ಸಿದ್ದುಮೂರ್ತಿ.
Comments
Post a Comment