Posts

Showing posts from 2021

ಕವಿತೆ

Image
  ಪರಾಧೀನ... ತಂಪೂಡಿ ರಮಿಸುವ ಬದಲು ಸುಡುವ ರಾತ್ರಿಗಳಲ್ಲಿ ಬೆಂದ ದಿನಗಳೇ ಹೆಚ್ಚು.. ಒಸರುವ ಪಸೆಯ ಹನಿಯೂ ತಣಿಸಲಿಲ್ಲ.. ತಬ್ಬಿದ ಕತ್ತಲೊಳಗೆ ಉಬ್ಬಿದ ಗಂಟಲ ತಂತುಗಳಿಂದ ಕಳಚಿದ ಮಾತು ಮೌನದ ಆಳದೊಳಗೆ. ಇಣುಕುವ ನೆಮ್ಮದಿಯ ಕೆಣಕಿ ಕಾಡುವ ಬೇಸರ  ಬಿಳಲುಗಳಂತೆ.., ಇಳಿದು ಬೇರೂರುವ ಹುನ್ನಾರ.. ನೆರಳೇ ಉರಿವ ದಳ್ಳುರಿ ಕಾಳಜಿಯ ಕಾಯಿದೆಗಳು ಬಿಗಿದು ದೂಡಿದ ಹೂವ ಗಾದಿ ತೆರೆದು ತೋರಿದ ದಾರಿ ಸುರಿದ ಕತ್ತಲ ರಾಶಿ... ಉರಿವ ದೀಪ ಸುಡುವ ದೇಹ ಬೆಂದು ನೊಂದವರ ಪಾಡು. ನಿಸ್ತೇಜ ಕಂಗಳಲಿ  ಕರಗಿದ ಕನಸುಗಳ ಜಾಡು.. ಹೊತ್ತು ಗೊತ್ತಿಲ್ಲದೆ  ಎದುರಾಗಿಬಿಡುವ ಅಳಿವು ಉಳಿವಿನಾಟ ಸೋಲೊ  ಗೆಲುವೊ ಇಳಿದ ಮೇಲೆ ನಡೆವ ಕಥೆ ನಿಗೂಢ. ನಂಬಿಕೆಯ ರೆಕ್ಕೆ ಬಿಚ್ಚಿ ಹಾರುವ ಸಂಭ್ರಮ.. ಗೂಡು ಸೇರುವ ಮುನ್ನ.. ಬಲಹೀನ..  ನಡುವಲಿನ ಬದುಕು ಪರಾಧೀನ.. ಬದುಕು ಪರಾಧೀನ.. ಸಿದ್ದು ಮೂರ್ತಿ, 

ಕವಿತೆ

Image
  ಒಲವೇ ಜೀವನ. ----------------------- ಮೋಹ ಮಮತೆಗಳ ಮಾಯೆಗೆ ವ್ಯರ್ಥ ಕರ್ಮಗಳ ಸುಳಿಯೊಳಗೆ ನಲುಗುವ ದಿನಗಳು ರಾಗ ದ್ವೇಷಗಳ ನಡುವೆ ಕ್ರೌರ್ಯ ಕರುಣೆಗಳೂ ಜೊತೆಗೆ ಪ್ರೀತಿ ಸಹನೆಯೊಂದಿಗೆ ನೋವು ನಲಿವಿನೊಂದಿಗೆ.. ನಮ್ಮದೇ ಬದುಕು.. ಅಂದುಕೊಂಡಂತೆ ಅಲ್ಲ ನಿರೀಕ್ಷೆಗಳ ದಾಟಿದ ನಿಗೂಢ ಬಯಲೊಳಗೆ ಎತ್ತಲೋ ಸಾಗಿದೆ.. ಗೊತ್ತು ಗುರಿ ಇಲ್ಲ ತಗ್ಗದ ಆಸೆಗಳಿಗೆ ಒಗ್ಗಿದ ಮನವು ಚಂಚಲ ನೋಟದ ಕಂಗಳಿವು ತಣಿಯದು,ಮಣಿಯದು ಬೇಕೆನ್ನುವ ಗೀಳು ಇಳಿಯದು.. ದಕ್ಕದಿದ್ದರೆ ಉಳಿದ ದು:ಖ ಎದೆಗಿಳಿದ ನೋವಿನ ಭಾರ.. ಮಿತಿಯೊಳಗಿರದ ಆಸೆಗೆ ತೆರಬೇಕಾದ ಬೆಲೆ  ಸತ್ಯ ಅಂತರಂಗದ ಚಕ್ಷು ತೆರೆಯಲಿ ಅರಿವಿನ ಪರಿಧಿಯೊಳಗೆ ತೆರವಾಗಲಿ ತರವಲ್ಲದವು ತೆರದ ಮನದಿಂದ ನಡೆ ಬಯಕೆಗಳಿಗೆ ಬೆನ್ನು ಮಾಡಿ... ಭ್ರಮೆಯ ಲೋಕದ ಹೊರಗೆ  ವರ್ತಮಾನದೆಡೆಗೆ... ನೋವು ನಲಿವಿಗೆ ಹಿಗ್ಗಿ ಕುಗ್ಗಿ  ಹದಗೊಂಡ ಮನೋಪಾಕ ಬದುಕಿನ‌ ಸಿಹಿ ಹೂರಣದಂತೆ ಭಾವ ಅನುಭವಗಳ ಬೆಸೆದ ಒಲವೇ ಜೀವನ ಸತ್ಯವು. ಸಿದ್ದು ಮೂರ್ತಿ.

ಕವಿತೆ

Image
  ಉಳಿಸುವುದು ಗೊತ್ತು.! ಅಳಿಸುವುದು ಗೊತ್ತು.! ---------------------------------------------------------------- ಉಸಿರ ನೀವ ಹಸಿರ ಒಡಲಿಗೆ ಮೆಲು ತಂಗಾಳಿ ಬೀಸಿ ರಮಿಸಿ ಮುದವ ತುಂಬುವುದು ಗೊತ್ತು.. ಮುನಿದರೆ ಬಿರುಗಾಳಿಯಂತೆ ಬೀರಿ ಬೀಸಿ ಬಸಿದುಹಾಕುವ ರೌದ್ರದಷ್ಟು..!! ಜುಳು ಜುಳು ಹರಿದು,ನೆಲವ ಹದ ಮಾಡಿ ಕಾಳು ತೆನೆಗಟ್ಟಿ ತೂಗಿ ತೊನೆವಂತೆ ಕರುಣೆ ತೋರಿ ಸಲಹುವದು ಗೊತ್ತು.. ತಾಳ್ಮೆ ಒಡೆದರೆ  ರಭಸದಿ ಉಕ್ಕಿ ಕೊಚ್ಚಿ ಹೋಗುವ ರಾಶಿ ರಾಶಿ ನೆಲಸಮ ಗೊಳಿಸುವಷ್ಟು..!! ನಿತ್ಯ ಏರುವ ಭಾರಗಳ ತಡೆದು ಹೊತ್ತ ಒಡಲಿಗೆ  ಸಹನೆಯೂ ಗೊತ್ತು.. ಸಹಿಸದೆ ಗುಡುಗಿ ನಡುಗಿದರೆ ಸೀಳಿ ಗರ್ಭ ದೊಳಗೆ ಎಲ್ಲವ  ಹುದುಗಿಸಿಕೊಳ್ಳುವ ಕೋಪದಷ್ಟು!! . ಉರಿದು ಬೆಳಗುವ ಜ್ಯೋತಿ  ಕತ್ತಲ ಅಳಿಸಿ ಬೆಳಕ ಹರಡುವುದು ಗೊತ್ತು ಕೆರಳಿ ಕಾರಿದರೆ ಉರಿದು ಬೂದಿಯಾಗಿಸುವಷ್ಟು..!! ನೆಲ ಜಲ ಗಾಳಿ  ಜೀವ ಸಂಕುಲಗಳ ಹುಟ್ಟಿಗೆ ನಾಂದಿ. ನಡುವೆ  ಬೆಸೆದ ಬದುಕು  ಬಿಡಿಸಲಾಗದ ಒಗಟು ಅರಿತು ಆರಾಧಿಸಿದರೆ ಸಲುಹಿ ಪೊರೆವ ತಾಯಿ ಮಮತೆ ಎರೆವ ಕರುಣಾಮಯಿ..!! ಮರೆತು ಬೀಗಿದರೆ.. ಮುನಿದು ಕಾಡಿಸುವ ಕಷ್ಟಗಳು ಮುಂದೆ ವಿನಾಶೆದೆಡೆಗೆ ಸಾಗುವಷ್ಟು...!!! ಸಿದ್ದು ಮೂರ್ತಿ

ಕವಿತೆ

Image
  ಉರಿದು ಬೆಳಕಾದವರು...! ಎದೆಯ ಮಡಕೆಯೊಳಗೆ ಬೆಚ್ಚನೆಯ ಒಲವಿಗೆ ಕರಗಿ ಪಾಕವದು ಸಿಹಿ ಅಚ್ಚು., ಜೀವವ ಬಸಿದು ಹಡೆದ ಕುಡಿಗಳಿಗೆ ನಿತ್ಯ ರಮಿಸಿ ಉಣಿಸಲು.. ಕತ್ತಲಿನ ಭಯಕೆ ಸುತ್ತಲೂ  ಬೆಳಕಾದ ಅಭಯ ಮಡಿಲು ಮೃದು ಲತೆಯ ಮೆಲು ಹಾಸಿಗೆ ನಿದಿರೆಗೆಂದೇ.. ಹೆಗಲಿಗೊತ್ತು ನಡೆವ  ಕಲ್ಲು ಮುಳ್ಳುಗಳ ಹಾದಿ. ಬಿರಿದು ಒಡೆವ ಪಾದಗಳ ಹನಿ ನೆತ್ತರದ ಕಲೆಗಳಲ್ಲಿ., ಅಚ್ಚಾದ ನಮ್ಮಭವಿಷ್ಯದ ಕುರುಹುಗಳು. ನಡೆಯಲಾರದವು ನೋವುಗಳ  ಹೆಜ್ಜೆಗಳಲ್ಲೆ ಸದ್ದಿಲ್ಲದೆ ಸೇರುವ ಸಜ್ಜು.., ದಣಿದ ದೇಹ, ಬಸಿದ ನೆತ್ತರ ಪಸೆ ಹನಿ ಹನಿಯಾಗಿ ತಂಪೂಡಿ ತಣಿಸಲು., ಎದೆಯೊಲುಮೆಯಲ್ಲಿ ಅರಮನೆಯಂತ ಕಾವಲು ಆಳಾಗಿ ದುಡಿದವರು, ಬೊಗಸೆಯಲ್ಲಿ ಹಿಡಿದ ಕಾಳಜಿ ಕಣ್ಣ ಕನಸುಗಳಲಿ.. ಕರುಳು ಅರಿಯುವ  ನೋವ ಕುರುಹುಗಳು. ನಲುಗಿ ಕರಗಿ ಬಿಡುತ್ತವೆ,ನೋವುಂಡರೂ ಸಹನೆಯೊಳಗೆ ನಗೆಯ ತೇಲಿಸಿ ಮರೆಮಾಚಿಸುತ್ತವೆ.. ಒಲವ ಝರಿಯ ಧುಮ್ಮಿಕ್ಕಿಸಿ ಮನವ ತಣಿಸುತ್ತವೆ. ಹಸಿವ ತಣಿಸುವ ಕೈಗಳು ಹಸಿವನ್ನುಂಡ ಉದರಗಳು.. ಮರುಗುವ ಕರುಳ ಹೊಸೆದ ಬತ್ತಿ ಮಮತೆಯ ತೈಲದೊಳು ತಾವುರಿದು, ನಮ್ಮ ಬದುಕಿಗೆ ಬೆಳಕಾದವರು... ಕತ್ತಲಿನ ಹಾದಿಯೊಳು ನಡೆದು., ನೋವಿನಿರುಳುಗಳಲ್ಲೂ ಅಂಜದೇ ಬೆಳಕಿನ ಮಿಂಚು ಹರಿಸುವ ಛಲದ ತಾಲೀಮುಗಳು ನಮ್ಮ ಬದುಕ ಮುನ್ನಡಿಗಳು., ನೋವಿನಲೆಯೆದುರು ಕುಗ್ಗದೇ ಈಜಿ ಸೇರುವ ದಡದಂತೆ ಸಾರ್ಥಕ ಬದುಕು ಇವರದು..! ✍️ಸಿದ್ದು ಮೂರ್ತಿ.  

ಕವಿತೆ

Image
  ಹೀಗೂ ತ್ಯಾಗಜೀವಿಯಾಗಿ.. ----------------------------- ನಟಿಸುವ ನಗುವು ಈಗೀಗ ಸೋತುಬಿಟ್ಟಿದೆ... ಅವರ ಇಚ್ಚೆಗಳಿಗೆ ‌ಅಚ್ಚಾಗಿ ಮುದ್ರೆಯೊಂದಿಗೆ ಬಹಿರಂಗ ಮಾರಾಟದ ಸರಕಾಗಿ.!! ನಿತ್ಯ ಇರುಳೋದಯ ಸ್ಫುರಿವ ಕತ್ತಲ ಮೌನದಂಕಣ ಮಾರುವ ರಾತ್ರಿಗಳ ವೇದಿಕೆ ನಲುಗುವ ಕರುಳ ವೇದನೆ...! ಹಳಸಿದೆದೆಯ ಕನಸುಗಳು ಮುಡಿದ ಆಸೆಗಳ  ಎಳೆದು ಇರಿದು ಕೊಲ್ಲುವ ಮುಳ್ಳಿನ ಹಾಸಿಗೆಗಳ ಮೇಲೆ ಹಾಸಿದ ಸೆರಗಿನ ಸುಕ್ಕು, ಸಿಕ್ಕು ನಲುಗುತ್ತಿದೆ...! ಸಭ್ಯತೆಯ ಎಲ್ಲೆ ದಾಟಿಸಿದೆ. ಅಸಭ್ಯ ಸೊಕ್ಕಿನ ಸೀಳು ಕಣಿವೆಗಳಲ್ಲಿ ಕೆಟ್ಟ ಹಸಿವಿನ ಚಟಗಳಿಗೆ ಇದೇ ದೇಹದ ಇಂಚಿಂಚು ಗುಟುಕಿಸಿ,ಭವ್ಯ ಸಮಾಜದೊಳು ಹೀಗೂ ತ್ಯಾಗಜೀವಿಯಾಗಿ ಉಳಿದು ಬಿಟ್ಟಿದ್ದು, ವಾಡಿಕೆಯಂತೆ ಬೆಳೆಸುವ ಪಟ್ಟು ಸಂಸ್ಕೃತಿಗೆ ಹೊರತಾದಂತೆ....! ಹೆತ್ತು ಹೊತ್ತು ಮಮತೆ ಎರೆವ ಒಡಲು ಒಸರುವ ಕ್ಷಣಿಕ ಬಯಕೆಗೂ ಎಗ್ಗಿಲ್ಲದೆ ಕಬಳಿಸುವ ಹಕ್ಕು ಕರಾರುನಾಮೆಯ ಹೊಕ್ಕು... ಚಪಲಗಳ ತೆಕ್ಕೆಗೆ ಸಿಕ್ಕಿ ಇಳಿದ ಕಾಮದ ಬಿಳುಲುಗಳ ಬಲವಾದ ಬಳಸಿಗೆ,ಹಿಂಡಿದ ಬದುಕು ನಿಸ್ಸಾರವಾಗಿದೆ, ತುಸು ನಿರಾಳವೂ ಕನಸಾಗಿದೆ.... ಜಗವ ಪೊರೆಯುವವಳಿಗೆ ನೋವ ಸರಣಿಗಳ ಎಣಿಕೆಗಳು ಒಂದೊಂದೇ ನಾರಿಯ ಪೂಜಿಸೋ ಧರೆಯಲ್ಲಿ ಅರಿವಿನೊಳಗೇ ಹರವಿಕೊಂಡ ಕಾಮಕೂಪಗಳು ಸಮಾಜದ ಕೊಡುಗೆಗಳೇ..!!! ಸಿದ್ದು ಮೂರ್ತಿ, ತುಮಕೂರು.

ಕವಿತೆ

Image
 ಸ್ವಾತಂತ್ರ್ಯದ  ನೆರಳಿನಲ್ಲಿ.. ---------------------------------- ಲೆಕ್ಕವಿಲ್ಲದಷ್ಟು ಜೀವಗಳು ಚೆಲ್ಲಿದ ರಕ್ತ ತರ್ಪಣ ತಬ್ಬಲಿಗಳ ಅಶ್ರುತರ್ಪಣ ತ್ಯಾಗ ಬಲಿದಾನಗಳು ಮಣ್ಣ ಕಣ ಕಣದಿ ಬೆರುತುಹೋಗಿವೆ.. ಅಂಜದೆದೆಯ ಗುಂಡಿಗೆಗಳು ಗುಂಡಿನ ಸುರಿಮಳೆಗೆ ಎದೆಯೊಡ್ಡಿ ಸಮರ್ಪಿಸುವ ಜೀವದಿ ಕಣ ಕಣದ ದೇಶಾಭಿಮಾನ ನೆತ್ತರ ಕಲೆಯ ನೆಲದಲ್ಲಿ ಅಚ್ಚಾಗಿವೆ. ಹುತಾತ್ಮರ ಪವಿತ್ರ ಆತ್ಮ ಚರಿತ್ರೆಗಳು ನಮ್ಮೀ ಸ್ವಾತಂತ್ರ್ಯದ ಮುಕ್ತ ನೆರಳು.. ನಮ್ಮದೀಗ ಯಾರ ಹಂಗಿಲ್ಲದ ಬದುಕು ಎಗ್ಗಿಲ್ಲದೆ ಸಾಗಿದೆ,ಎಲ್ಲೆಯ ದಾಟಿ ಚೆಲ್ಲುವ ನೆತ್ತರು ಈಗ  ಕ್ರೌರ್ಯ ಕಾದಾಟದ ಅಚ್ಚು. ಮಮಕಾರದ ಹುಚ್ಚು ಅಸೂಯೆ ವೈಷಮ್ಯದ ಹುಟ್ಟು ಗಲ್ಲಿ ಗಲ್ಲಿಗೂ,ಊರು ಕೇರಿಗೂ ಗದ್ದುಗೆಯ ಪೀಠಕ್ಕೂ  ಶಾಸನದ ಕರಾರುಗಳಿಗೂ ಅಂಟಿಕೊಂಡಿದೆ. ಕಳಚಿಬಿದ್ದವು ಸಹಬಾಳ್ವೆಯ ಕೊಂಡಿ ನಡುವೆ ಜಾತಿ ಅಂತರ ಇರಿಸಿ. ಕೋಮುವಾದಗಳ ಮುಂದಿರಿಸಿ, ನೀತಿ ಅಳಿದ ನೆಲವೀಗ ಸ್ವಾತಂತ್ರ್ಯದ ನೆರಳಿನಲ್ಲಿ ದಂಗೆಗಳು ಉಂಟು,ಹೋರಾಟಗಳೂ ಉಂಟು ಅವರವರ ಹಂಗಿಗೆ,ಅವರದೇ ಒಳಿತಿಗೆ ಎಲ್ಲದಕ್ಕೂ ಸ್ವಾತಂತ್ರ್ಯ,ಪ್ರಶ್ನಿಸುವ ಹಕ್ಕು ಪಡೆಯುವ ಹುಮಸ್ಸಿನಲಿ, ತುಳಿದ ದಾರಿ ಹುತಾತ್ಮರ ಹಾದಿಯಲ್ಲಿ ಇರಲಿಲ್ಲ..! ಕ್ರೌರ್ಯದ ಕರಿನೆರಳ ಛಾಯೆಗಳು ಹಗಲೇ ಸೊಕ್ಕಿನಲಿ ಉಂಡ ಸುಖದ ಸೂರೆಗೆ ಮುದುಡಿ ಉದುರಿದ ಕುಸುಮಗಳ ಬದುಕು ಬೆತ್ತಲಾಗಿತ್ತು.ಭವ್ಯ ಭಾರತದ ಗಾಂಧಿ ಕಂಡ ಕನಸು ಭಗ್ನ ಗೊಂಡಿತ್ತು. ನೀತಿ ಬೋಧೆಯ ತತ್ವ, ಹೊತ್ತ...

ಬದುಕಾಗಿ ಉಳಿದಿಲ್ಲ

Image
  ಬದುಕಾಗಿ ಉಳಿದಿಲ್ಲ..!! ಬದುಕಾಗಿ ಉಳಿದಿಲ್ಲ..!! --------------------- ನಲುಗುವ ಹಸಿವುಗಳ ವೇದನೆಗೆ ದನಿಗೂಡದ ವೇದಿಕೆಯ  ಸಂವೇದನೆ..!!! ಬರಿ ಮಾತುಗಳು ಕಣ್ಣೀರೊರೆಸೋ ತಂತ್ರಗಳು..!!! ಅತಂತ್ರ ಬದುಕು ನಂದಿ ಹೋಗುವ ಹೊತ್ತಿಗೆ ಕಾಳಜಿಯ ಮನಸ್ಸು ಮಿಂಚಿ ಹೋದ ಕಾಲಕ್ಕೆ.!! ಎದೆಯ ಕನಸಿನ ಕೂಸು ಹುಟ್ಟುವ ಮುನ್ನವೇ ಸತ್ತಿದೆ ಕಂಗಳಲಿ ಹಾತೊರೆವ ಕನಸು ಕಂಗಾಲಾಗಿದೆ..!! ಹೆಗಲಿಗೊತ್ತು ನಡೆದ ಬದುಕಿನ ಹಾದಿಯು ಮುಸುಕು ಹೊಸಕಿ ಹಾಕುವ ಹುನ್ನಾರ ಸುತ್ತಲಿರುವಾಗ ಮುನ್ನೆಡುವ ದಿನಗಳೇ ಕಗ್ಗಂಟು.!!! ದೇಹಕ್ಕೆ ಉಸಿರೇ ಭಾರವಾದಷ್ಟು ಬದುಕು.! ಬಸಿದ ಶ್ರಮದ ಬೆಲೆ ಕೇಳದ ಅನಾಥ, ದಿಕ್ಕು ದೆಶೆ ಇಲ್ಲ ಕೊನೆಗೂ  ದಕ್ಕಿದ್ದು ಮಾತ್ರ ಶೂನ್ಯ ಮರೀಚಿಕೆಯ ಮಾನ್ಯ.!! ಉಸಿರ ಬಿಗಿದ ಕೊರಳು, ಇನ್ನೆಲ್ಲಿ ಜೀವ ಅರಳುವುದು ಚಿಗುರದ ಕೊರಡುಗಳಂತೆ ಅಳಿದು ಹೋಗುವ ಆತಂಕ ಅರಿತು ಹಾರೈಕೆ ಮಾಡುವರಾರು..?? ಅರಿವಿಗೆ ಬಾರದ ವಾಸ್ತವ ಅಂಗಾತ ಮಲಗಿದ ವ್ಯವಸ್ಥೆಗೆ ವ್ಯವಸ್ಥಿತ ರೂಪ ಕೊಟ್ಟುಬಿಟ್ಟರು ಆಸೆಗಳ ಹೊತ್ತ ಹೆಗಲು ಗುಳೇ ಹೊರಟವು.., ಕನಸೆಂಬ ಬದಲಾವಣೆ ಕಳೆದು ಹೋದವು...!! ಕಂಡರೂ ಕಾಣದ ಮನೋಸ್ಥಿತಿ ಉಲ್ಬಣ ಕೇಳರಿಯದ ದಾರುಣ...! ಉಳ್ಳವರ ಬೀಡು ಇದು,ಇರಗೊಡದು ಬಿಟ್ಟು ಹೋಗಲು ಬಿಡದು ಉಳಿದರೂ ಬದುಕು ಬದುಕಾಗಿ  ಉಳಿದಿಲ್ಲ... ✍️ ಸಿದ್ದು ಮೂರ್ತಿ

ಲೇಖನ

Image
 

ಪ್ರಶಸ್ತಿ

Image
  ಗುರುಕುಲ ಶಿರೋಮಣಿ ಪ್ರಶಸ್ತಿ

ಕವಿತೆ

  ಉಳಿಗಾಲ ಮನುಜನಿಗಿಲ್ಲ.. ******"********** ಧರೆಯ ಬಳುವಳಿಗಳ  ಉಂಡು ಬೀಗಿದೆ.. ಬಾಗಿ ನಡೆಯದ ಬದುಕು  ತೀರದ ಋಣಗಳ ಹೊತ್ತು ಮಣಿಯದ ಮೊಂಡುತನಕೆ ಬುದ್ದಿಯ ಕೊಟ್ಟು.. ಸುಖದ ಸೊಕ್ಕಿನ ಸೆಲೆಯಲಿ ಮಹಲಿನ ಸೂರಿನಡಿ ಅಮಲಿನ ನಿದಿರೆಗೆ ಹಸಿರ ತಂಪು ಗಾಳಿ ಹಿತವಾಗಿ, ಹಸಿರ ಒಡಲು ಒಣಗಿದರೂ ಕಿಡಕಿಯಾಗಿ ಮುಕ್ತ  ಬೆಳಕು, ಗಾಳಿಯ ನೀಡಿತ್ತು.. ಒಡಲ ಬಗೆದು ಕರುಳ ಮಾಲೆ ಧರಿಸಿ ಕಡಲ ತಡಿಯ ಮುತ್ತ ಹೆಕ್ಕಿ. ಬತ್ತದ ಆಸೆಯಲೆಗಳಿಗೆ ಅಕ್ಷಯ, ಅನಂತ ಒಲುಮೆಯು ಬಿತ್ತಿ ಬೆಳೆದು,ಹಸಿವ ತಣಿಸೆ ಧಣಿವ ತಣಿಸುವ ಹನಿಗಳ, ಒಡಲು ಕಡಲಿನ ಮಮತೆ ತಿಳಿಯಲೊಲ್ಲೇ. ಧರಣಿಯ ಶುದ್ಧತೆಗೆ  ಮನದ ಮಲಿನಗಳ ಕದಡಿಬೆರೆತರು ಅರಿವುಗೇಡಿತನ ಹುಚ್ಚು ತನದ ಹೊಳೆಯಲಿ ತೇಲಿದೆ.. ಒಡಲ ಹಿಂಡಿ,ಬರಿದು ಮಾಡಲು. ಹುದುಗಿದ ತಾಪ ಕುದಿದು ಸ್ಪೋಟ ಗೊಂಡು ಬಿರಿದು ನಿಂತಿದೆ.. ಹದ್ದು ಮೀರಿದ ಉದ್ದಟತನ ಬದ್ದತೆಯ ಹೊರತಾಗಿ  ಗದ್ದುಗೆಗೆ ಹೋರಾಟ ನಿಂತಿಲ್ಲ.. ಹೊತ್ತಿ ಉರಿದವು ಒಳಗೊಳಗಿನ ಕಿಚ್ಚು ಸುಟ್ಟು ನಲುಗುತ ಕೆಟ್ಟಕಳೆಯ ಮಧ್ಯೆ ಸತ್ವ ಸಾರ ಕಳೆದರೂ ಅರಿವು ದಾರಿದೀಪವಾಗಿಲ್ಲ ಧರೆಯ ಅವಕೃಪೆ ಎದುರಾಗಿ ಕಬಳಿಸಲು ಎಚ್ಚರಿಕೆಯ ಗಡುವು ಮರಳಿ ಮರಳುತ್ತಿದೆ.. ತಿದ್ದಿಕೊಳ್ಳದ ಹೊರತು ಉಳಿಗಾಲ ಮನುಜನಿಗಿಲ್ಲ.. --ಸಿದ್ದುಮೂರ್ತಿ

ಕವಿತೆ

  ಅಮ್ಮನ ಮಡಿಲು ಬದುಕು ಕಟ್ಟಿಕೊಳ್ಳಲು ಅಪ್ಪನಿಗೆ ಹೆಗಲಾಗಿ, ಒದಗುವ  ಬವಣೆಗೆ ಎದೆಯೊಡ್ಡಿ ಛಲವಾಗಿ. ತೊಡಕಿನ ನೋವಿನೆಳೆಗೆ ಅಂಜದೆ ಬದುಕ ಅಪ್ಪಿದಾಕೆ ಒಡಲ ದನಿಯೊಳಗೆ ಒಲುಮೆರಾಗ ಹೊಮ್ಮಿಸಿದಾಕೆ..! ಬಿಕ್ಕುವ ಯಾತನೆಗಳ ಬದಿಗೊತ್ತಿ, ಆಡಿಸಿ,ನಕ್ಕುನಲಿಸಿ ಉಕ್ಕುವ ಭಾವನೆಯ ಕಟ್ಟಿ,ಮಮತೆಯ ಎರೆದು ಪೋಷಿಸಿ ಎದೆಯ ಕನಸುಗಳ ಕರಗಿಸಿ, ಎರಕ ಹೊಯ್ದ ಹೊಳಪು ನಮ್ಮ ಬದುಕಿನ ಮೆರುಗು,ಜಿನುಗಿದ ನನಸ ಕಣ್ಣ ಹನಿಯು ಬದುಕ ಉಳುಕುಗಳ,ಸುಳಿವ ನೋವುಗಳ ನಡುವೆ ನಲುಗಿದ ಜೀವ,ದುಗುಡಗಳ ಹೊದ್ದರೂ ಸದ್ದಿಲ್ಲದೆ, ನಗೆಯ ಮಿಂಚು ಮೊಗದಿ ಬೀರಿ, ನಡೆದವಳು ಈಕೆ. ಬೊಗಸೆಯಲಿ ಮೊಗೆದು ಪ್ರೀತಿ ವಾತ್ಸಲ್ಯಗಳ ನೀಡಿದಾಕೆ! ---ಸಿದ್ದುಮೂರ್ತಿ,

ಪ್ರಶಸ್ತಿ

Image
 

ಚುಟುಕು

ಹೊಂಬೆಳಕು ಸುಳಿವ ಹೊನ್ನ ಬೆಳಕಿನ ಜಾಡು ಹಿಡಿದು ಕಳೆಯು ಹೊಮ್ಮಿದ ಮನದ ನೆಲೆಯಿದು ಬದುಕ ಬೆಳಗುವ ಹೊನ್ನ ಬೆಳಕಿನ ಕಾಂತಿ ಬಿಸಿಲ ಹೊನ್ನಂತೆ ಕಂಗೊಳಿಸಿದ ದಿವ್ಯ ಕಾಂತಿ -ಸಿದ್ದುಮೂರ್ತಿ

ಚುಟುಕು

  ಅಗಲಿಕೆ ಅಗಲಿಕೆಯು  ಮನದ ವ್ಯಾಧಿಯ ಹುಟ್ಟು ನೆನಪುಗಳು ಕಾಡುವ ಕಗ್ಗತ್ತಲ  ನಡುವಿಟ್ಟು., ಬಂಧಗಳ ನಡುವೆ ಕಾಣದ ಛಾಯೆಯಂತರ ಒಲವ ನೆಲೆಗೆ ಇರುಳು ಕವಿದ ನೋವಿನ ಹಂದರ.. ಸಿದ್ದುಮೂರ್ತಿ,

ಚುಟುಕು

 ಪ್ರೇಮ ಪರ್ವ ಪ್ರೀತಿ ಒಡಲು ಮಧುರ ಭಾವಗಳ ಇಂಪು ಬೆಸೆದ ಒಲವುಗಳು ಬಿರಿದ ಮಲ್ಲಿಗೆಯ ಕಂಪು ಪ್ರಣಯ ತಳೆದ ಒಲವಿನನುರಾಗ ಸ್ಪರ್ಶ ಬಾಳ ಮುನ್ನುಡಿಗೆ ಶುಭಾರಂಭ,ಈ ಪ್ರೇಮಪರ್ವ -ಸಿದ್ದು ಮೂರ್ತಿ

ಕಲಾ ಕೀರ್ತಿ ಪ್ರಶಸ್ತಿ

Image
 

ವಚನ

 ಆಧುನಿಕ ವಚನ ************ ಶೀರ್ಷಿಕೆ-ಔದಾರ್ಯ ************** ನೊಂದವರ ಬಾಳಲ್ಲಿ ತಾನೊಂದು ಬೆಳಕಾಗಿ ಬವಣೆಯ ಬದಕಿನಲಿ ಸೋತವರಿಗೆ ಹೆಗಲಾಗಿ ಹಸಿವು ನೀಗಿಸಿ, ಬದುಕಿಗೆ ಭರವಸೆಯಾಗಲು, ಮೌಲ್ಯದ ನೆಲೆಯಲ್ಲಿ ಕಂಡ‌ ಔದಾರ್ಯವಯ್ಯ.! ಪರರ ಒಳಿತು ಬಯಸಿ,ಮನಜನಾಗೆಂದ ಮಾಲತೇಶ..! ಸಿದ್ದು ಮೂರ್ತಿ

ಇರುಳ ಪರದೆ( ಕವಿತೆ)

Image
 ಇರುಳ ಪರದೆ *********** ಇರುಳ ಪರದೆಯ ಮಬ್ಬು ಬೆಳಕಿನಲಿ, ಕರಗದ ನೋವ ಸರಣಿಗಳು ಕಂಗಳಲಿ. ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು. ತಂಪು ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು, ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು. ಭರವಸೆಯ ಬೆಳಕಿನುದಯ ಬಯಸಲು ನಿತ್ಯ, ಭಯದ  ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ. ಮೌನದ ಸೆರಗಿನೊಳಗೆ ಸರಿದ ಮಾತುಗಳು, ನೋವಿನ ಹಂದರಕೆ  ಜೋತಿದ ಕನಸುಗಳು. ಉಸಿರುರುಸಿರು ಪರಿತಪಿಸಿದೆ ಜೀವದ ಜೀವನ ನೆನೆದು ಉಸಿರೊತ್ತ ತಂಗಾಳಿ ತಂಪು ಹೂಡುವ ದಿನಗಳೆಂದು.? ಸಾಲು ಸೋಲುಗಳು, ಗೆಲ್ಲವ ಕನಸುಗಳ ಘೋರಿಯು ಮಿಣುಕು ದೀಪದ ಭರವಸೆಯ ಜಾಡೂ,ಮಾಯವು.. ಮನದ ನೆಮ್ಮದಿಯ ಸುಡುವ ಕಿಡಿಗಳು ಆರಿ, ತಣಿದು ಇರುಳನು ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.!? --ಸಿದ್ದುಮೂರ್ತಿ.ತುಮಕೂರು.

ಜೀವನೋತ್ಸಾಹ

ಜೀವನೋತ್ಸಾಹ ********************** ಛಲದ ಒಲವಿನಲಿ,ನಗುವ ಮನವಿದೆ ಬತ್ತದ ಒರತೆಯಂತೆ, ಉತ್ಸಾಹ ಜಿನುಗಿದೆ ನಿಷ್ಠೆಯೊಳಗಿನ ಕಾಯಕ ತನುವ ತಣಿಸಿದೆ. ಯಾರ ಹಂಗೇಕೆ.?ನಂಬಿಕೆಯ ನೆಲೆಯೊಳಗೆ ಇಂಬಾದ ಪಯಣ ಬದುಕಿನ ಗುರಿಯೆಡೆಗೆ ಚೊಕ್ಕ ಜೀವನದ,ಚಿಕ್ಕ ಹಂಬಲ ನೆಮ್ಮದಿಯೆಡೆಗೆ. ಹಮ್ಮು ಬಿಮ್ಮಗಳಿಲ್ಲದ  ತುಂಬು ಮನದೊಳು ಪ್ರೀತಿಯೊಲುಮೆಯರಳಿ  ಸದಾ ನಗುತಿರಲು ಅಂಜುವ ಎದೆಯ ಸುಳಿವೆಲ್ಲಿ, ಧೈರ್ಯವಿರಲು. ಇರುವುದೆರೆಡೆಗೆ  ಸದಾ ತೃಪ್ತಿಯ ಹೊಂದಿರಲು ಶುದ್ದ ಕರ್ಮಗಳಲ್ಲಿ ಸಿದ್ದಿಯೊಂದು ಕಾದಿರಲು ನಿಸ್ವಾರ್ಥ ಸೇವೆಯೋ,ಬದುಕ ಕೈಹಿಡಿದು ನಡೆಸಿದೆ.. ಸುಡುವ ಮತ್ಸರಗಳೇಕೆ,ತಂಪೂಡುವ ಸಹಜೀವನ ತಂಬೆಲರ ಸೊಗಸಿನಂತೆ ಬದುಕ,ಬಂಧಗಳ ಬೆಸೆದು ಬೆಳಗುವ ಹೊಂಗಿರಣ ಜೀವನದ ಬೆಳಕಾಗಿಸಲು.. ಮೋಹದ  ಮಾಯೆಯ ಗೆಲ್ಲುವ   ಮನವಿರಲು ಆಸೆಯ ಬಲೆಗೆ ಬಲಿಯಾಗದೆ, ಬಲಗೊಂಡಿದೆ ಸದೃಢ ಮನವೊಂದು  ನೆಮ್ಮದಿಯ ಮಹಲಿನಲಿ .. --ಸಿದ್ದು ಮೂರ್ತಿ, 

ಕವಿತೆ

******************** ಚಿತ್ರ ಕವನ ಸ್ಪರ್ಧೆ ************* ಶೀರ್ಷಿಕೆ-ಹಸಿರು ನಮ್ಮ ಉಸಿರು ************************* ಹಸಿರುಸಿರಲಿ ಜೀವಕೆ ಉಸಿರುದುಂಬಿದ ಮಡಿಲು ಹಸಿವ ತಣಿಸುತ ಬೆಳೆಸುವ ಕಾಳಜಿಯ ಒಡಲು ಧಮನಿಯೊಲಮೆ ಬಸಿದ ಎದೆಯ ಸುಧೆಯು ನಿತ್ಯ ಸಲಹುವ ಧರೆಯ ಹಸಿರು ವನಸಿರಿಯು., ಚಿಗುರು ನಳನಳಿಸಿ ನಗಲು, ಹೊಮ್ಮುವ ಚೇತನ ಹಸಿರುಟ್ಟ ಧರೆಯ ಸೊಬಗು ಚೆಲ್ಲಿದ ಆನಂದದೌತಣ ಒಡಲ ಮಮತೆಯ ಮಡಿಲೊಳಗೆ ಸುಖದ ತಾಣ ಹಸಿರೊಡಲಲಿ ಬೆಸೆದ ನಮ್ಮಬದುಕು,ಸುಂದರ ಕಾಣಾ. ಹಸಿರ ಒಡಲಿನುಸಿರ ಹಿಂಡುವ ನೀಚ ಮನಗಳ ದಂಡು ತಾನುಂಡು, ನೆರಳ ನೀಡುವ ಹಸಿರ ಬಸಿರನು ಕೊಂದು ಮೆರೆವ ಮನುಜನ ಸ್ವಾರ್ಥ, ವಿಕೃತ ಮನಗಳ ಅನರ್ಥ ಬದುಕು ನೀಡಿದ ವನಸಿರಿಯ ಬದುಕಿಂದು ಬರಡು., ಎಲೆ ಎಲೆಯ ಕಂಪನದಿ, ಸುಳಿವಗಾಳಿಯ ತಂಪಿನಲಿ ಧರಣಿ ಹಸಿರ ಉಸಿರು ಉಳಿಯಲಿ,ಕಾಳಜಿ ಬೆಳೆಯಲಿ ಹಸಿರು ಜೀವಗಳ ಉಸಿರು ಉಳಿಸುವ ಗುರಿಯೊಂದು ನಮ್ಮ ಬದುಕ ನೆಲೆಯಾಗಿ ಸಾಗಲಿ ದಿಟ್ಟ ಹೆಜ್ಜೆಗಳ ಇಟ್ಟು.. -ಸಿದ್ದುಮೂರ್ತಿ

ಪ್ರಶಸ್ತಿ

Image
 ವಾಯ್ಸ್ ಆಫ್ ಪಬ್ಲಿಕ್ ಇಸಂ ಕವನ ಸ್ಪರ್ಧೆಯ ಪ್ರಶಸ್ತಿ ಪತ್ರ

ಪ್ರಶಸ್ತಿ

Image
 

ಕವಿತೆ

  ಇರುಳ ಪರದೆಯ ಮಬ್ಬು ಬೆಳಕಿನಲಿ ಕರಗದ ನೋವ ಸರಣಿಗಳು ಕಂಗಳಲಿ ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು. ತಂಪ ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು, ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು. ಭರವಸೆಯ ಬೆಳಕಿನುದಯ ಬಯಸಲು ನಿತ್ಯ, ಕಾಡುವ ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ. ಮೌನದ ಸೆರಗಿನೊಳಗೆ ಸರಿದ ಮಾತುಗಳು, ನೋವಿನ ಹಂದರಕೆ  ಜೋತಿದ ಕನಸುಗಳು. ಆಸೆಯ ಅಲೆಗಳ ತೀರವ ಸಾಗಿ ಸೇರುವುದೆಂತು? ಇರುಳ ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.! --ಸಿದ್ದುಮೂರ್ತಿ.

ಕವಿತೆ

 ಶೀರ್ಷಿಕೆ-ಹಸಿರು ನಮ್ಮ ಉಸಿರು ************************* ಹಸಿರುಸಿರಲಿ ಜೀವಕೆ ಉಸಿರುದುಂಬಿದ ಮಡಿಲು ಹಸಿವ ತಣಿಸುತ ಬೆಳೆಸುವ ಕಾಳಜಿಯ ಒಡಲು ಧಮನಿಯೊಲಮೆ ಬಸಿದ ಎದೆಯ ಸುಧೆಯು ನಿತ್ಯ ಸಲಹುವ ಧರೆಯ ಹಸಿರು ವನಸಿರಿಯು., ಚಿಗುರು ನಳನಳಿಸಿ ನಗಲು, ಹೊಮ್ಮುವ ಚೇತನ ಹಸಿರುಟ್ಟ ಧರೆಯ ಸೊಬಗು ಚೆಲ್ಲಿದ ಆನಂದದೌತಣ ಒಡಲ ಮಮತೆಯ ಮಡಿಲೊಳಗೆ ಸುಖದ ತಾಣ ಹಸಿರೊಡಲಲಿ ಬೆಸೆದ ನಮ್ಮಬದುಕು,ಸುಂದರ ಕಾಣಾ. ಹಸಿರ ಒಡಲಿನುಸಿರ ಹಿಂಡುವ ನೀಚ ಮನಗಳ ದಂಡು ತಾನುಂಡು, ನೆರಳ ನೀಡುವ ಹಸಿರ ಬಸಿರನು ಕೊಂದು ಮೆರೆವ ಮನುಜನ ಸ್ವಾರ್ಥ, ವಿಕೃತ ಮನಗಳ ಅನರ್ಥ ಬದುಕು ನೀಡಿದ ವನಸಿರಿಯ ಬದುಕಿಂದು ಬರಡು., ಎಲೆ ಎಲೆಯ ಕಂಪನದಿ, ಸುಳಿವಗಾಳಿಯ ತಂಪಿನಲಿ ಧರಣಿ ಹಸಿರ ಉಸಿರು ಉಳಿಯಲಿ,ಕಾಳಜಿ ಬೆಳೆಯಲಿ ಹಸಿರು ಜೀವಗಳ ಉಸಿರು ಉಳಿಸುವ ಗುರಿಯೊಂದು ನಮ್ಮ ಬದುಕ ನೆಲೆಯಾಗಿ ಸಾಗಲಿ ದಿಟ್ಟ ಹೆಜ್ಜೆಗಳ ಇಟ್ಟು.. -ಸಿದ್ದುಮೂರ್ತಿ

ಮನದ ಮಹಲು

 ಶೀರ್ಷಿಕೆ-ಮನದ ಮಹಲು ****************** ಮನದ ಮಹಲಿನಲಿ ಮಧುರ ಕನಸುಗಳು, ಮೋಹಕ ಮಿಡಿತದ ಸುಂದರ ಬಯಕೆಗಳು. ಎದೆಯ ತವಕಗಳು ಆಸೆಯಲೆಗಳ  ಕೂಡಿ, ಮನದ ಪುಳಕಗಳು ಕಣ್ಣ ಕನಸುಗಳ ಕಾಡಿ. ಒಲವು ಬೆಸೆದ ಗೆಲುವಿನಲಿ ತಂಪು ತಣಿವು, ಬೆಸುಗೆ ಹಾಕಿದ‌ ಒಲವಿನಲಿ  ಕಂಡ  ನಲಿವು. ಹೆಜ್ಜೆಹೆಜ್ಜೆಗೂ ಸದ್ದುಮಾಡಿದೆ ಸ್ಪರ್ಶಸುಳಿವು, ಸಜ್ಜುಗೊಂಡ ಒಲವಿನೆದೆಯ ಪ್ರೀತಿಹೊಳಪು. ಕಲ್ಪನೆಯ ಕಡಲಲ್ಲಿ ಮಿಂದ ಭಾವ ಹೂವಾಗಿ, ಅರಳಿದೊಲವ ಕಂಪು, ಸೊಗಸಿನ ಬದುಕಾಗಿ, ಕನಸ ಸೂರಿನಡಿ ಬೆಸೆದ ಅನುರಾಗ ಅರಳಿತು. ನನಸಿನ ಮಹಲ,ಒಲವಿನ ಹೃದಯ ಅರಳಿತು. -ಸಿದ್ದುಮೂರ್ತಿ.

ಪ್ರಬಂಧ

 ಕೊರೋನ ಕಿರುಪ್ರಬಂಧ ಸ್ಪರ್ಧೆ ******************** ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು" ಮೊನ್ನೆಯಷ್ಟೇ ವ್ಯಾಪಾರದಲ್ಲಿ ಚೇತರಿಕೆಯನ್ನು ಕಂಡಿದ್ದ ರಾಘವನಿಗೆ, ಈಗ ಮತ್ತದೇ ಎರಡನೇ ಅಲೆಯ ಕರೋನಾದ ಕಾರಣಕ್ಕೆ ಹೇರಿದ ಜನತಾ ಕರ್ಫ್ಯೂ ನಿಂದ ದಿಗಿಲು ಹುಟ್ಟಿಸಿದೆ...ಉರಿವ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಅವನ ಬದುಕಿನಲ್ಲಿ ನೋವಿನ ಮೇಲೆ ನೋವು ಅಣಿಯಾಗುತ್ತಿರುವುದು, ಊಹಿಸಲಾರದಷ್ಟು ಯಾತನೆಗಳ ಸರಮಾಲೆಯ ಹೊದ್ದು ನರಳಿಸುವಂತೆ ಮಾಡುವುದಂತೂ ಖಚಿತ... ಇದು ಕೇವಲ ರಾಘವನ ಬದುಕಿನಲ್ಲಷ್ಟೇ ಅಲ್ಲ ಎಲ್ಲರ ಬದುಕಿನಲ್ಲೂ ಹಾಗೆ ನೋವಿನ ಸರಣಿ ಹೆಣೆದ ಕಥೆಯಂತೆ ಮುಂದುವರೆದ ಭಾಗವಾಗುವುದು. ಅಸಹನೀಯ ನೋವುಗಳು, ಕಾಡುವ ಭಯದ ಪರಿ ನಿತ್ಯವೂ ಅನುರಣಿಸತೊಡಗಲಿದೆ.....ಮೊದಲನೇ ಅಲೆಗಿಂತಲೂ ಈಗಿನ ಕರೋನಾ ರೂಪಾಂತರಿಯಾಗಿ ಸಿಕ್ಕ ಸಿಕ್ಕಲ್ಲಿ ನುಗ್ಗಿ,ಪ್ರಾಣ ಹರಣ ಮಾಡುತ್ತಿರುವುದು ನಮ್ಮ ಕಣ್ಣಿಗೆ ಕಟ್ಟಿದಂತಿದೆ., ದೃಶ್ಯ ಮಾಧ್ಯಮಗಳ ಸುದ್ದಿ ಪ್ರಸಾರಗಳು ದಂಗು ಬಡಿಸುವ ಧಾರುಣ ಸುದ್ದಿಗಳು ಎಲ್ಲರ ಮನೆ ಮನಗಳಿಗೂ ಇಂದು ಭೋರ್ಗರೆಯುತ್ತಿದೆ. ನಿಧಾನವಾಗಿ ಮರೆಯಾಗುತ್ತಿದ್ದ ಕರೋನಾ ಮತ್ತೆ ವ್ಯಾಪಕವಾಗಿ ಹರಡಲು ಕಾರಣರು ಯಾರು..? ಎಂದು ಒಮ್ಮೆ ನಮ್ಮನ್ನು ಅವಲೋಕಿಸಿದಾಗ ಸಿಗುವ ಉತ್ತರ ಅದು ನಾವುಗಳೇ...!!! ನಮ್ಮ ದಿವ್ಯ ನಿರ್ಲಕ್ಷ್ಯ , ಬೇಜವಾಬ್ದಾರಿ ನಡವಳಿಕೆಗಳು...!!!ಸಾರಾ ಸಗಟಾಗಿ ಕರೋನ ಇಲ್ಲ ಎಂ...

ಮೌನದ ಮರೆಯಲ್ಲಿ

 ಶೀರ್ಷಿಕೆ-ಮೌನದ ಮರೆಯಲ್ಲಿ ******************** ಮನದ ಮಾತುಗಳು ಮೌನದ ಸೆರಗಿನ ಮರೆಯಲಿ ಸುಳಿವ ನೆನಪುಗಳ ಬೆಸೆದ ಇರುಳು  ಬೆಳಕಾಗಿ ಅರಳಿದ ಒಲವು ಕಂಪು ಸೂಸಲು ಹಿತವಾಗಿ ಒಲುಮೆಯ ಒರತೆಯು ಹೊಮ್ಮಿದೆ ನವಿರಾಗಿ ಮನದೊಳಗಿನ ಬಯಕೆಯು ಹೊಳೆವ ಮುತ್ತಂತೆ ರವಿಯು ಬೆಳಕು ಚೆಲ್ಲಿ ಧರಣಿಯು ಹೊಳಯುವಂತೆ ಇರುಳ ಶಶಿಯು ಹೂಡಿದ ಹಾಲು ಬೆಳದಿಂಗಳಂತೆ ಒಲವಿನ ಬೆಳಕ ಹೂಡಿ ರಮಿಸುವೆ ನಿನ್ನ, ಮನದನ್ನೆ ತಿರುಗಿ ನೋಡು ಒಮ್ಮೆ ಕೊಂಕು ಬಿಂಕವ ತೊರೆದು  ಮಿನುಗು ತಾರೆಗಳ ಹೆಕ್ಕಿ ಹೊಳಪ ಧಾರೆ ಎರೆವೆ ಕಡಲ ಮುತ್ತುಗಳ ಹೆಕ್ಕಿ ಮುತ್ತಿನ ಮಾಲೆ ಕೊಡುವೆ ಮೌನ ತೊರೆದು ಮನದ ಮಾತ ಹೇಳು ನನ್ನೊಲವೆ ಮನದ ಮೆಚ್ಚುಗೆಯು ನೀನು, ಇಚ್ಚೆಗಳ ಬೆಸೆದು ಹೊಸತು ಬದುಕಿಗೆ ಒಲವ ಮುನ್ನುಡಿಯ ಬರೆದು ಸನಿಹವಾಗು ಹೃದಯಕೆ ,ಮೌನ ರೂಪವ ಕಳೆದು ಒಲವಿನೆದೆಯಲಿ ಸದಾ ನಲಿವ ಒಲುಮೆಯ ತಳೆದು ಸಿದ್ದು ಮೂರ್ತಿ, ತುಮಕೂರು

ವ್ಯರ್ಥ ಬದುಕು

 ವ್ಯರ್ಥ ಬದುಕು ********** ವ್ಯರ್ಥ ಬದುಕು ************** ಸಾಲು ಸಾಲು ಸೋಲುಗಳು ಗೆದ್ದೆಂದು  ಬೀಗುವ ಕನಸುಗಳು ನಿದ್ದೆ ಗೆಡಿಸಿದ ದಿನಗಳು ಉಳಿದು ಹೋದವು  ಬೀಡು ಬಿಟ್ಟ ವ್ಯಥೆಯ ವ್ಯರ್ಥ ಬದುಕಿನಲ್ಲಿ... ಬೆಳಕು ನಂದಿದ ಕತ್ತಲು ಕಾಡು ಭರವಸೆಯ ಮಿಣುಕು ಹುಳದ  ಜಾಡುಹಿಡಿದು ನಡೆದರೂ, ಉಳಿದ ನಿಟ್ಟುಸಿರು ಬೀಡು ಬಿಟ್ಟ ಬೇಸರದ ಬದುಕಿನಲ್ಲಿ... ದೇಹ ದಂಡಿಸಿದ ಶ್ರಮ ಬಸಿದ ರಕ್ತದ ಬೆವರಹನಿ ಮೊಳೆತು ಫಲವಾಗದ ಭ್ರೂಣ ಕಳೆದು ಹುಸಿಯಾಗಿದೆ ಕುಸಿದ ಬಿದ್ದ ದೇಹದ ನಿತ್ರಾಣ ಬೀಡು ಬಿಟ್ಟ ಯಾತನೆಯ ಬದುಕಿನಲ್ಲಿ... ಅರಿವ ಬೆಳಕಿನ ಬೀಜ ಬಿತ್ತಲು ಸಾರತೆಯ ಕೊರತೆಗೆ ಕರಗಿ ನೀರಾಗಿ ಹರಿದಿದೆ ಜ್ಞಾನದ ಬೆಳಕೊಂದು ಚದುರಿಯೂ ಚೆಲುವ ಕಾಣದಾಗಿದೆ., ಬೀಡು ಬಿಟ್ಟ ಅಜ್ಞಾನದ ನೆಲೆಯ ಬದುಕಿನಲ್ಲಿ.. ತನ್ನೊಳಗಿನ ಅರಿವಿನ ಗರ್ಭದಲ್ಲಿ ಜನಿಸದ ಜಗದ ಒಳಿತಿನ ಗುಣ ತಾನು ತಾನೆಂದು ಬೀಗಿ ಬಯಕೆಯ ಬೇಲಿಯೊಳಗೆ ಬಂಧಿಯಾಗಿ, ಅಂಧನಾಗಿ ವಿಕೃತಗಳ ಕರ್ಮಗಳಿಗೆ ಬದುಕು ಶಿಕ್ಷೆಯ ಕೂಪದೊಳಗೆ ನಲುಗುತ್ತಿದೆ.. ಸಿದ್ದು ಮೂರ್ತಿ,ತುಮಕೂರು

ಪ್ರಶಸ್ತಿ

Image