ಜೀವನೋತ್ಸಾಹ
ಜೀವನೋತ್ಸಾಹ
**********************
ಛಲದ ಒಲವಿನಲಿ,ನಗುವ ಮನವಿದೆ
ಬತ್ತದ ಒರತೆಯಂತೆ, ಉತ್ಸಾಹ ಜಿನುಗಿದೆ
ನಿಷ್ಠೆಯೊಳಗಿನ ಕಾಯಕ ತನುವ ತಣಿಸಿದೆ.
ಯಾರ ಹಂಗೇಕೆ.?ನಂಬಿಕೆಯ ನೆಲೆಯೊಳಗೆ
ಇಂಬಾದ ಪಯಣ ಬದುಕಿನ ಗುರಿಯೆಡೆಗೆ
ಚೊಕ್ಕ ಜೀವನದ,ಚಿಕ್ಕ ಹಂಬಲ ನೆಮ್ಮದಿಯೆಡೆಗೆ.
ಹಮ್ಮು ಬಿಮ್ಮಗಳಿಲ್ಲದ ತುಂಬು ಮನದೊಳು
ಪ್ರೀತಿಯೊಲುಮೆಯರಳಿ ಸದಾ ನಗುತಿರಲು
ಅಂಜುವ ಎದೆಯ ಸುಳಿವೆಲ್ಲಿ, ಧೈರ್ಯವಿರಲು.
ಇರುವುದೆರೆಡೆಗೆ ಸದಾ ತೃಪ್ತಿಯ ಹೊಂದಿರಲು
ಶುದ್ದ ಕರ್ಮಗಳಲ್ಲಿ ಸಿದ್ದಿಯೊಂದು ಕಾದಿರಲು
ನಿಸ್ವಾರ್ಥ ಸೇವೆಯೋ,ಬದುಕ ಕೈಹಿಡಿದು ನಡೆಸಿದೆ..
ಸುಡುವ ಮತ್ಸರಗಳೇಕೆ,ತಂಪೂಡುವ ಸಹಜೀವನ
ತಂಬೆಲರ ಸೊಗಸಿನಂತೆ ಬದುಕ,ಬಂಧಗಳ ಬೆಸೆದು
ಬೆಳಗುವ ಹೊಂಗಿರಣ ಜೀವನದ ಬೆಳಕಾಗಿಸಲು..
ಮೋಹದ ಮಾಯೆಯ ಗೆಲ್ಲುವ ಮನವಿರಲು
ಆಸೆಯ ಬಲೆಗೆ ಬಲಿಯಾಗದೆ, ಬಲಗೊಂಡಿದೆ
ಸದೃಢ ಮನವೊಂದು ನೆಮ್ಮದಿಯ ಮಹಲಿನಲಿ ..
--ಸಿದ್ದು ಮೂರ್ತಿ,
Comments
Post a Comment