ಮನದ ಮಹಲು

 ಶೀರ್ಷಿಕೆ-ಮನದ ಮಹಲು

******************


ಮನದ ಮಹಲಿನಲಿ ಮಧುರ ಕನಸುಗಳು,

ಮೋಹಕ ಮಿಡಿತದ ಸುಂದರ ಬಯಕೆಗಳು.

ಎದೆಯ ತವಕಗಳು ಆಸೆಯಲೆಗಳ  ಕೂಡಿ,

ಮನದ ಪುಳಕಗಳು ಕಣ್ಣ ಕನಸುಗಳ ಕಾಡಿ.


ಒಲವು ಬೆಸೆದ ಗೆಲುವಿನಲಿ ತಂಪು ತಣಿವು,

ಬೆಸುಗೆ ಹಾಕಿದ‌ ಒಲವಿನಲಿ  ಕಂಡ  ನಲಿವು.

ಹೆಜ್ಜೆಹೆಜ್ಜೆಗೂ ಸದ್ದುಮಾಡಿದೆ ಸ್ಪರ್ಶಸುಳಿವು,

ಸಜ್ಜುಗೊಂಡ ಒಲವಿನೆದೆಯ ಪ್ರೀತಿಹೊಳಪು.


ಕಲ್ಪನೆಯ ಕಡಲಲ್ಲಿ ಮಿಂದ ಭಾವ ಹೂವಾಗಿ,

ಅರಳಿದೊಲವ ಕಂಪು, ಸೊಗಸಿನ ಬದುಕಾಗಿ,

ಕನಸ ಸೂರಿನಡಿ ಬೆಸೆದ ಅನುರಾಗ ಅರಳಿತು.

ನನಸಿನ ಮಹಲ,ಒಲವಿನ ಹೃದಯ ಅರಳಿತು.


-ಸಿದ್ದುಮೂರ್ತಿ.






Comments

Popular posts from this blog

ಆಧ್ಯಾತ್ಮಿಕ ವಿಚಾರ