ಇರುಳ ಪರದೆ( ಕವಿತೆ)



 ಇರುಳ ಪರದೆ

***********


ಇರುಳ ಪರದೆಯ ಮಬ್ಬು ಬೆಳಕಿನಲಿ,

ಕರಗದ ನೋವ ಸರಣಿಗಳು ಕಂಗಳಲಿ.


ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು

ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು.


ತಂಪು ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು,

ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು.


ಭರವಸೆಯ ಬೆಳಕಿನುದಯ ಬಯಸಲು ನಿತ್ಯ,

ಭಯದ  ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ.


ಮೌನದ ಸೆರಗಿನೊಳಗೆ ಸರಿದ ಮಾತುಗಳು,

ನೋವಿನ ಹಂದರಕೆ  ಜೋತಿದ ಕನಸುಗಳು.


ಉಸಿರುರುಸಿರು ಪರಿತಪಿಸಿದೆ ಜೀವದ ಜೀವನ ನೆನೆದು

ಉಸಿರೊತ್ತ ತಂಗಾಳಿ ತಂಪು ಹೂಡುವ ದಿನಗಳೆಂದು.?


ಸಾಲು ಸೋಲುಗಳು, ಗೆಲ್ಲವ ಕನಸುಗಳ ಘೋರಿಯು

ಮಿಣುಕು ದೀಪದ ಭರವಸೆಯ ಜಾಡೂ,ಮಾಯವು..


ಮನದ ನೆಮ್ಮದಿಯ ಸುಡುವ ಕಿಡಿಗಳು ಆರಿ, ತಣಿದು

ಇರುಳನು ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.!?


--ಸಿದ್ದುಮೂರ್ತಿ.ತುಮಕೂರು.





Comments

Popular posts from this blog

ಆಧ್ಯಾತ್ಮಿಕ ವಿಚಾರ