ವ್ಯರ್ಥ ಬದುಕು

 ವ್ಯರ್ಥ ಬದುಕು

**********




ವ್ಯರ್ಥ ಬದುಕು

**************

ಸಾಲು ಸಾಲು ಸೋಲುಗಳು

ಗೆದ್ದೆಂದು  ಬೀಗುವ ಕನಸುಗಳು

ನಿದ್ದೆ ಗೆಡಿಸಿದ ದಿನಗಳು

ಉಳಿದು ಹೋದವು 

ಬೀಡು ಬಿಟ್ಟ ವ್ಯಥೆಯ ವ್ಯರ್ಥ

ಬದುಕಿನಲ್ಲಿ...


ಬೆಳಕು ನಂದಿದ ಕತ್ತಲು ಕಾಡು

ಭರವಸೆಯ ಮಿಣುಕು ಹುಳದ 

ಜಾಡುಹಿಡಿದು ನಡೆದರೂ,

ಉಳಿದ ನಿಟ್ಟುಸಿರು

ಬೀಡು ಬಿಟ್ಟ ಬೇಸರದ

ಬದುಕಿನಲ್ಲಿ...


ದೇಹ ದಂಡಿಸಿದ ಶ್ರಮ

ಬಸಿದ ರಕ್ತದ ಬೆವರಹನಿ

ಮೊಳೆತು ಫಲವಾಗದ ಭ್ರೂಣ

ಕಳೆದು ಹುಸಿಯಾಗಿದೆ

ಕುಸಿದ ಬಿದ್ದ ದೇಹದ ನಿತ್ರಾಣ

ಬೀಡು ಬಿಟ್ಟ ಯಾತನೆಯ

ಬದುಕಿನಲ್ಲಿ...


ಅರಿವ ಬೆಳಕಿನ ಬೀಜ ಬಿತ್ತಲು

ಸಾರತೆಯ ಕೊರತೆಗೆ

ಕರಗಿ ನೀರಾಗಿ ಹರಿದಿದೆ

ಜ್ಞಾನದ ಬೆಳಕೊಂದು ಚದುರಿಯೂ

ಚೆಲುವ ಕಾಣದಾಗಿದೆ.,

ಬೀಡು ಬಿಟ್ಟ ಅಜ್ಞಾನದ ನೆಲೆಯ

ಬದುಕಿನಲ್ಲಿ..


ತನ್ನೊಳಗಿನ ಅರಿವಿನ ಗರ್ಭದಲ್ಲಿ

ಜನಿಸದ ಜಗದ ಒಳಿತಿನ ಗುಣ

ತಾನು ತಾನೆಂದು ಬೀಗಿ

ಬಯಕೆಯ ಬೇಲಿಯೊಳಗೆ

ಬಂಧಿಯಾಗಿ, ಅಂಧನಾಗಿ

ವಿಕೃತಗಳ ಕರ್ಮಗಳಿಗೆ

ಬದುಕು ಶಿಕ್ಷೆಯ ಕೂಪದೊಳಗೆ

ನಲುಗುತ್ತಿದೆ..



ಸಿದ್ದು ಮೂರ್ತಿ,ತುಮಕೂರು











Comments

Popular posts from this blog

ಆಧ್ಯಾತ್ಮಿಕ ವಿಚಾರ