ಕವಿತೆ

 

ಇರುಳ ಪರದೆಯ ಮಬ್ಬು ಬೆಳಕಿನಲಿ
ಕರಗದ ನೋವ ಸರಣಿಗಳು ಕಂಗಳಲಿ

ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು
ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು.

ತಂಪ ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು,
ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು.

ಭರವಸೆಯ ಬೆಳಕಿನುದಯ ಬಯಸಲು ನಿತ್ಯ,
ಕಾಡುವ ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ.

ಮೌನದ ಸೆರಗಿನೊಳಗೆ ಸರಿದ ಮಾತುಗಳು,
ನೋವಿನ ಹಂದರಕೆ  ಜೋತಿದ ಕನಸುಗಳು.

ಆಸೆಯ ಅಲೆಗಳ ತೀರವ ಸಾಗಿ ಸೇರುವುದೆಂತು?
ಇರುಳ ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.!

--ಸಿದ್ದುಮೂರ್ತಿ.


Comments

Popular posts from this blog

ಆಧ್ಯಾತ್ಮಿಕ ವಿಚಾರ