ಪ್ರಬಂಧ

 ಕೊರೋನ ಕಿರುಪ್ರಬಂಧ ಸ್ಪರ್ಧೆ

********************


ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ

ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು"



ಮೊನ್ನೆಯಷ್ಟೇ ವ್ಯಾಪಾರದಲ್ಲಿ ಚೇತರಿಕೆಯನ್ನು ಕಂಡಿದ್ದ ರಾಘವನಿಗೆ, ಈಗ ಮತ್ತದೇ ಎರಡನೇ ಅಲೆಯ ಕರೋನಾದ ಕಾರಣಕ್ಕೆ ಹೇರಿದ ಜನತಾ ಕರ್ಫ್ಯೂ ನಿಂದ ದಿಗಿಲು ಹುಟ್ಟಿಸಿದೆ...ಉರಿವ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಅವನ ಬದುಕಿನಲ್ಲಿ ನೋವಿನ ಮೇಲೆ ನೋವು ಅಣಿಯಾಗುತ್ತಿರುವುದು, ಊಹಿಸಲಾರದಷ್ಟು ಯಾತನೆಗಳ ಸರಮಾಲೆಯ ಹೊದ್ದು ನರಳಿಸುವಂತೆ ಮಾಡುವುದಂತೂ ಖಚಿತ...

ಇದು ಕೇವಲ ರಾಘವನ ಬದುಕಿನಲ್ಲಷ್ಟೇ ಅಲ್ಲ ಎಲ್ಲರ ಬದುಕಿನಲ್ಲೂ ಹಾಗೆ ನೋವಿನ ಸರಣಿ ಹೆಣೆದ ಕಥೆಯಂತೆ ಮುಂದುವರೆದ ಭಾಗವಾಗುವುದು. ಅಸಹನೀಯ ನೋವುಗಳು, ಕಾಡುವ ಭಯದ ಪರಿ ನಿತ್ಯವೂ ಅನುರಣಿಸತೊಡಗಲಿದೆ.....ಮೊದಲನೇ ಅಲೆಗಿಂತಲೂ ಈಗಿನ ಕರೋನಾ ರೂಪಾಂತರಿಯಾಗಿ ಸಿಕ್ಕ ಸಿಕ್ಕಲ್ಲಿ ನುಗ್ಗಿ,ಪ್ರಾಣ ಹರಣ ಮಾಡುತ್ತಿರುವುದು ನಮ್ಮ ಕಣ್ಣಿಗೆ ಕಟ್ಟಿದಂತಿದೆ., ದೃಶ್ಯ ಮಾಧ್ಯಮಗಳ ಸುದ್ದಿ ಪ್ರಸಾರಗಳು ದಂಗು ಬಡಿಸುವ ಧಾರುಣ ಸುದ್ದಿಗಳು ಎಲ್ಲರ ಮನೆ ಮನಗಳಿಗೂ ಇಂದು ಭೋರ್ಗರೆಯುತ್ತಿದೆ.

ನಿಧಾನವಾಗಿ ಮರೆಯಾಗುತ್ತಿದ್ದ ಕರೋನಾ ಮತ್ತೆ ವ್ಯಾಪಕವಾಗಿ ಹರಡಲು ಕಾರಣರು ಯಾರು..? ಎಂದು ಒಮ್ಮೆ ನಮ್ಮನ್ನು ಅವಲೋಕಿಸಿದಾಗ ಸಿಗುವ ಉತ್ತರ ಅದು ನಾವುಗಳೇ...!!!


ನಮ್ಮ ದಿವ್ಯ ನಿರ್ಲಕ್ಷ್ಯ , ಬೇಜವಾಬ್ದಾರಿ ನಡವಳಿಕೆಗಳು...!!!ಸಾರಾ ಸಗಟಾಗಿ ಕರೋನ ಇಲ್ಲ ಎಂದು ತಳ್ಳಿ ಹಾಕುವ ಮಂದಿ ನಮ್ಮ ಮಧ್ಯೆಯೇ ಇದ್ದು ಈಗ ಎಲ್ಲೆಡೆ ವ್ಯಾಪಕವಾಗಿ  ಹರಡವಂತೆ ಮಾಡಿ ಕಂಟಕದ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟು ನಲುಗುವ ಆರ್ತನಾದಗಳು  ನಮ್ಮ ಸುತ್ತಲೂ ಪ್ರತಿಧ್ವನಿಸುವಂತೆ ಮಾಡಿ,ಸರ್ಕಾರದ ವ್ಯವಸ್ಥೆ, ವೈದ್ಯರನ್ನು ದೂರತ್ತಾ ನಿಂತು ಪ್ರತಿಭಟಿಸಿದರೆ ಏನೂ ಪ್ರಯೋಜನವಿಲ್ಲ.. ಅರ್ಥಾತ್ ನಾವು ಎಚ್ಚೆತ್ತು ಕೊಳ್ಳುವುದು ತುಂಬಾ ಅನಿವಾರ್ಯ...

ಯೋಚನಾ ಶಕ್ತಿ ಇರುವ ಮನುಷ್ಯ ಮೃಗಗಳಿಗಿಂತ ಹೀನ ಬುದ್ಧಿ ತೋರುತ್ತಿರುವುದು  ಖೇದಕರ..

ಸರ್ಕಾರ  ಕೋವಿಡಗೆ ಸಂಬಂಧಿಸಿದಂತೆ ನೀಡಿದ ಮಾರ್ಗಸೂಚಿಗಳನ್ನು ಮೊದಲು ಪಾಲಿಸುವುದು ನಮ್ಮ ಕರ್ತವ್ಯ .! ಹಾಗೆ ನೋಡಿದರೆ ಮಾರ್ಗಸೂಚಿಗಳನ್ನು ಪಾಲಿಸದವರ ಬಹುಪಾಲು ಸಂಖ್ಯೆಯೇ ಇದೆ.. ಒಬ್ಬರು ಅಜಾಗರೂಕತೆಯಿಂದ ಇದ್ದರೆ ಸಾಕು ಅದು ಸೋಂಕು ಹರಡಲು ಮೂಲ...ಒಬ್ಬರ ಅಜಾಗರೂಕತೆಯನ್ನು ನೋಡಿ ಅದನ್ನೆ ಅನುಸರಿಸುವ ಬಹು ಪಾಲು ಮಂದಿ ನಮ್ಮಲ್ಲಿ ಹೆಚ್ಚು..

ಒಳ್ಳೆಯದನ್ನು ಅನುಕರಣೆ ಮಾಡುವ ಮಂದಿಗಿಂತಲೂ ಬೇಡದ ವರ್ತನೆ, ಗುಣಗಳನ್ನು ಅನುಸರಿಸುವುದಂತೂ ಇಲ್ಲಿ ಮಾಮೂಲು..ಇದು ಯಾವುದರ ಪ್ರಭಾವ ಎಂದು ತಿಳಿಯುವುದು ಕಷ್ಟ..!! ಒಳ್ಳೆಯದನ್ನು ಅನುಕರಣೆ ಮಾಡಿ ಅದರಂತೆ ನಡೆಯುವುದು ಒಳಿತಿನ ಗುಣ.. ಇದರಿಂದ ನಮ್ಮನ್ನೆ ನಂಬಿಕೊಂಡಿರುವ ಕುಟುಂಬಕ್ಕೂ ಒಳ್ಳೆಯದು


ಅವಶ್ಯಕತೆ ಇಲ್ಲದೇ ಇದ್ದರೂ ಹೊರಗಡೆ ತಿರುಗಾಟ,ಮಾಸ್ಕ ಬಳಸದೇ ಇರುವುದು ಸ್ಯಾನಿಟೈಸ ಮಾಡಿಕೊಳ್ಳದೇ ಇರುವುದು.ಸಾಮಾಜಿಕ ಅಂತರ ಪಾಲಿಸದೆ ಇರುವುದು ಸೋಂಕು ಹರಡಲು ಮೂಲಕಾರಣ...

ಇವುಗಳನ್ನು ಕಟ್ಟುನಿಟ್ಟಾಗಿ ಸರಿಯಾಗಿ ಪಾಲಿಸುವುದು ನಮ್ಮ ಮುಂದಿರುವ ಒಂದೇ ಒಂದು ದಾರಿ ..

ಮೈಮರೆತರೆ ಪ್ರತೀದಿನ ದ್ವಿಗುಣಗೊಳ್ಳತ್ತಿರುವ ಸೋಂಕು ನಾಳೆ ಎಲ್ಲರ ಮನೆ ಮನೆಗೂ ದಾಳಿಇಡುವ ದಿನಗಳೂ ದೂರ ಇಲ್ಲ.. ಸರ್ಕಾರ ಜಾರಿಗೆ ತಂದಿರುವ ಜನತಾಕರ್ಪ್ಯೂವನ್ನು ಸರಿಯಾಗಿ ಪಾಲಿಸೋಣ..

ಸರ್ಕಾರದ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು..ಸಾಮಾಜಿಕ ಅರಿವು,ಪ್ರಜ್ಞೆಗಳೊಂದಿಗೆ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲೇ ಬೇಕು.


ಕೊರೋನಾವನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿ ಇದೆ..ಆ ಜವಾಬ್ದಾರಿಯನ್ನು ನಿರ್ವಹಿಸುವ ಗುರುತರ ಹೊಣೆಯನ್ನು ಹೊರುವುದು ಅನಿವಾರ್ಯ..

ಶ್ರಮಿಕವರ್ಗದ ಬದುಕು,ಬೀದಿಬದಿಯ ವ್ಯಾಪಾರಿಗಳು,ಚಾಲಕರು, ಹೀಗೆ ವಿವಿಧ ವರ್ಗಗಳಿಗೆ ,ಬಡಕುಟುಂಬಗಳಿಗೆ

ಸರ್ಕಾರವು ಲಾಕ್ಡೌನ್ ನಂತ ಸಮಯದಲ್ಲಿ ಆರ್ಥಿಕ ಸಹಾಯನೀಡುವ ,ಅಥವಾ ಆಹಾರ ಸಾಮಗ್ರಿಗಳನ್ನು ಪೊರೈಸುವ ಯೋಜನೆಗಳನ್ನು ರೂಪಿಸಿ ಅದರ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದು ಅನಿವಾರ್ಯವಾಗಿದೆ., ಕರ್ಪ್ಯೂವಿನ ಸಮಯದಲ್ಲಿ ನಮ್ಮ ಕೈಲಾದಷ್ಟು ನಾವು ಕೂಡ ಆ ವರ್ಗಗಳಿಗೆ ಸಹಾಯ ಮಾಡುವ ಮನಸ್ಸು ಮಾಡೋಣ..!

ಇನ್ನೂ ಸರ್ಕಾರವೂ ಕೂಡ ಜಾಗತಿಕ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟಲು ಜಾರಿಗೆ ತಂದಿರುವ ಬಹುತೇಕ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು,ಅದಕ್ಕೆ ಜನತಾ ಸಹಕಾರ

ಪೂರಕವಾಗಿ ಇರಬೇಕಾದುದು ಅತೀ ಅವಶ್ಯಕ ..

ಸರ್ಕಾರ ಹಾಗೂ ಜನತೆ ತಮ್ಮ ತಮ್ಮಜವಾಬ್ದಾರಿಗಳನ್ನು ಅರಿತು ನಿರ್ವಹಣೆ ಮಾಡುವುದರಿಂದ ಮಾತ್ರ ಕಂಟಕವನ್ನು ನಿರ್ಮೂಲನೆ ಮಾಡಲು ಸಾಧ್ಯ..!!


ಸಿದ್ದು ಮೂರ್ತಿ ,ತುಮಕೂರ



Comments

Popular posts from this blog

ಆಧ್ಯಾತ್ಮಿಕ ವಿಚಾರ