ಲೇಖನ










ಹೆಣ್ಣು ಸಮಾಜದ ಕಣ್ಣು


ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ನಿದಿರೆಯಿಂದೆದ್ದು ಅಂದಿನ ದಿನಚರಿಗಳ ಕಡೆಗೆ ಮಗ್ನಗೊಳ್ಳುವ ಮನಸ್ಸು ಸದಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರೆಡೆಗೆ ಇವಳ ಆಲೋಚನೆಗಳು ಸದಾ ಕ್ರಿಯಾಶೀಲವಾಗಿರುತ್ತವೆ.ಮನೆಯ ಎಲ್ಲರ ಆಗು ಹೋಗುಗಳ ಬಗ್ಗೆ ಇಷ್ಟ ಕಷ್ಟಗಳ ಬಗ್ಗೆ ತಿಳಿದು ನಿಭಾಯಿಸುವ  ಹೊಣೆಗಾರಿಕೆಯನ್ನು ಚಾಚೂ ತಪ್ಪದೇ ನಿರ್ವಹಿಸುವ ಮಹಾ ಶಕ್ತಿಯ ಒಡಲು "ಸ್ತ್ರೀ "ಎಂದು ಬಣ್ಣಿಸುವುದರಲ್ಲಿ ಯಾವುದೇ ಅತಿಶಯೋಕ್ತಿ ಅಲ್ಲ.

ಗಂಡ ಮನೆ ಮಕ್ಕಳು ಅವಳು ಕಟ್ಟಿಕೊಂಡಿರುವ ಜಗತ್ತು, ಆದರೊಳಗಿನ ಅವಳ ಸೇವಾ ಕೈಂಕರ್ಯ ಸಮಯದ ಅರಿವಿಲ್ಲದಂತೆ ನಡೆಯುತ್ತಲೇ ಇರುತ್ತದೆ.ಮನೆಯೊಳಗಿನ ಎಲ್ಲ ಸದಸ್ಯರ ವಿಶಿಷ್ಟ ಜವಾಬ್ದಾರಿ ಹೊತ್ತು ಭರವಸೆಯಾಗಿ ಸಂಸಾರ ನೌಕೆಯನ್ನು ಎಡರು ತೊಡರಾಗದಂತೆ ತೇಲಿಸುವ ಗುರುತರ ಹೊಣೆ ಈ ಮಹಿಳೆಗೆ..


"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ

ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ"


ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. 

ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕತೃಥ್ವ, ನೇತೃಥ್ವ, ತಾಯತ್ವವಾಗಿರುತ್ತಾಳೆ. ಇವೆಲ್ಲವೂ ಒಂದು ಹೆಣ್ಣಿನಲ್ಲಿ ಇದ್ದಾಗ ಸಮಾಜದಲ್ಲಿ ಶಾಂತಿ-ನೆಮ್ಮದಿಯ ನೆಲೆಯಾಗುತ್ತದೆ. ಹಾಗೆಯೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ.

ತಾಯಿಯಾಗಿ, ತಂಗಿಯಾಗಿ , ಅಕ್ಕನಾಗಿ, ಪತ್ನಿಯಾಗಿ, ಮಗಳಾಗಿ, ಹೀಗೆ ಬೇರೆ ಬೇರೆ ಸ್ಥಾನಗಳಲ್ಲಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಶಕ್ತ ಒಡಲಂತೆ 

ಕಂಗೊಳಿಸುವ ಸ್ತ್ರೀ ಇಂದು ಮನೆಯಿಂದಾಚೆ ಪುರುಷನಿಗೆ ಸರಿಮಾನಳಾಗಿ ನಿಲ್ಲುವಲ್ಲಿ ಯಶಸ್ಸನ್ನು ಕಂಡಿದ್ದಾಳೆ.ಹೆಣ್ಣೆಂದು ಜರಿವವರ ಮುಂದೆ ಜಗತ್ತೇ ಬೆರಗಾಗುವ ರೀತಿ ಸಾಧನೆಯನ್ನೂ ಮೆರೆದಿದ್ದಾಳೆ.ಶಕುನ ಅಪಶಕುನಳೆಂದು ಹಣೆಪಟ್ಟಿ ಕಟ್ಟುವವರ ಮುಂದೆ ಮಹಾಶಕ್ತಿಯಂತೆ  ಚರಿತ್ರೆಯ ಪುಟಗಳಲ್ಲಿ ಅಚ್ಚಾಗಿ ಉಳಿದಿರುವುದು ನಮಗೆ ತಿಳಿದಿದೆ.

ದಣಿವರಿಯದ ದುಡಿಮೆ ಇವಳ ಕರ್ತವ್ಯ ಕುಟುಂಬವನ್ನು ಪ್ರೀತಿಸುವ ಎಲ್ಲರೊಡನೆ ಬೆರೆತು ನಗುಮೊಗದಿ ನಡೆವ ವಿಶಾಲ ಹೃದಯಿ ಮಮತೆಯ ಮಡಿಲಾಗುತ್ತಾಳೆ. ಸ್ವಾಸ್ಥ್ಯ ಸಮಾಜದಲ್ಲಿ ಶಾಂತಿ ನೆಮ್ಮದಿಗಳು ನೆಲೆಗೊಳ್ಳವಲ್ಲಿ ಮಹತ್ವದ ಪಾತ್ರ ಈಕೆಯದು.ಎಲ್ಲರ ಒಳಿತಿನಲ್ಲಿ ತನ್ನ ಹಿತವನ್ನು ಕಾಣುವ ನಿಸ್ವಾರ್ಥ ಮನದ ಆದರ್ಶ ವ್ಯಕ್ತಿತ್ವವು ಸಮಾಜದಲ್ಲಿ ತೆರಿದಿಡುತ್ತದೆ.ಸಮಾಜದಲ್ಲಿ ಕಟ್ಟು ಪಾಡುಗಳಲ್ಲಿ ಜೀವಿಸುವಂತೆ ವಿಧಿಸಿರುವ ಷರತ್ತುಗಳು, ಇವಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರಗಳು ಇಂದು ಅವಳ ಶಕ್ತಿಯನ್ನು ದುರ್ಬಲಗೊಳಿಸುವ ಸಂಚುಗಳೆಂದು ಇಲ್ಲಿ ಹೇಳಬಹುದು.ಎಲ್ಲರ ಏಳಿಗೆಗಾಗಿ ದುಡಿಯುವ ಶ್ರಮಿಸುವ ಮನಸ್ಸಿಗೆ ಬೇಕಾಗಿರುವುದು ಪ್ರೀತಿ  ವಿಶ್ವಾಸ, ಮತ್ತು ಅವಳ ಭಾವನೆಗಳನ್ನು ಗೌರವಿಸುವ ಇವಿಷ್ಟು ಮನೋಸ್ಥಿತಿಗಳು ಅವಳ ಸುತ್ತ ಮುತ್ತಲೂ ಸಿಗುವುದಾದರೆ ಅವಳ ಶಕ್ತಿ  ಕುಟುಂಬದ, ಸಮಾಜದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಒಂದೆಡೆ ಸ್ತ್ರೀಯರನ್ನು ಶೋಷಿಸುವ ವರ್ಗಗಳಿಗೆ ಸ್ತ್ರೀಯರ ಮನೋಸ್ಥಿತಿ ಗಳು ಅರ್ಥವಾಗಬೇಕಿದೆ.ಪುರುಷನಿಗೆ ಸರಿಸಮಾನಳಾಗಿ ಜೀವಿಸುವ ಹಕ್ಕು ಅವರಿಗಿದೆ,ಒಂದು ಸುಂದರ ಕುಟುಂಬ ಒಂದು ಸ್ವಾಸ್ಥ್ಯ ಸಮುದಾಯ ಅಥವಾ ಸಮಾಜವನ್ನು ಕಟ್ಟುವ ಕಾರ್ಯದ ಹಿಂದೆ ಪರೋಕ್ಷವಾಗಿ ಕಾರಣವಾಗುವ ಈಕೆಗೆ ಮುಕ್ತ ಸ್ವಾತಂತ್ರ್ಯ ಬೇಕು.ಆ ಸ್ವಾತಂತ್ರ್ಯವನ್ನು  ದುರುಪಯೋಗ ಪಡಿಸಿಕೊಳ್ಳುವಂತೆ ಮಾಡುವ ಪುರುಷವರ್ಗಗಳು ಇಂದು ಸ್ತ್ರೀ ಯರ ಬಗ್ಗೆ ಹಗುರವಾಗಿ ಮಾತನಾಡುವುದರೊಂದಿಗೆ ಸಮಾಜದಲ್ಲಿ ಅವಳ ಸ್ಥಾನವನ್ನು ಕುಗ್ಗಿಸುವಂತೆ ಮಾಡುತ್ತದೆ..

ಇದು ಸ್ವಾರ್ಥ ಮನೋಇಚ್ಛೆಗಳ ಕ್ರೂರತೆಗಳು ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕದಡುವಲ್ಲಿ ಮುಖ್ಯವೆನಿಸುತ್ತವೆ.

ಜವಾಬ್ದಾರಿಯಿಂದ ಬದುಕನ್ನು ಸವೆಸುವ ಒಡಲಿಗೆ ಸಹನೆಯು ಅವಳ ಹುಟ್ಟಿನೊಂದಿಗೆ ಬಂದಿರುವಂತೆ ಎಲ್ಲ ಕೆಲಸಗಳಲ್ಲಿ ತಾಳ್ಮೆ ವಹಿಸಿ ನಿರ್ವಹಿಸುವ ಸಾಮರ್ಥ್ಯ ಯಶೋಗಾಥೆಗಳಂತೆ ಉಳಿಯುವ ಶಕ್ತಿ ಇವೆಲ್ಲ ವೂ ಮಹಿಳೆಯರದ್ದಾಗಿರುತ್ತದೆ.ಇಂತಹ ಒಂದು ಸಶಕ್ತ ವರ್ಗಗಳಿಗೆ ನಮ್ಮ ಗುರುತರವಾದ ಗೌರವಗಳು ಸಲ್ಲಬೇಕಿದೆ.ನಿಂದಿಸುವ ಅವಮಾನಿಸುವ ಅಲ್ಲಗೆಳೆಯುವ ಹಿಂಸಿಸುವ ಮನೋವರ್ಗಗಳು ಬದಲಾಗಬೇಕಿದೆ.

ಅವಳ ಹಂಬಲದ ಬದುಕಿಗೆ ನಾವು ಬುನಾದಿಯಾಗಬೇಕು.

ಅವಳ ಭಾವನೆಗಳನ್ನು ಗೌರವಿಸುವ,ಇಷ್ಟಕಷ್ಟಗಳನ್ನು ಹಂಚಿಕೊಳ್ಳುವ ಮನೋಸ್ಥಿತಿ ಗಳು ಬಲಗೊಂಡರೆ ಕುಟುಂಬ, ಸಮುದಾಯ ಮತ್ತು ಸಮಾಜವು ಬಲ್ಲಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಸ್ವಾರ್ಥ ಸೇವೆಯಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣುವ ಒಡಲಿಗೆ ನಮ್ಮ ಗೌರವಗಳು ಸಲ್ಲಲಿ..


Comments

Popular posts from this blog

ಆಧ್ಯಾತ್ಮಿಕ ವಿಚಾರ