ಕವಿತೆ

 ಆ ನೆನಪುಗಳೇ ಹಾಗೆ

---------------------------



ಆ ನೆನಪುಗಳೇ ಹಾಗೆ

ತಂಗಾಳಿ ಬೀಸಿ ತಂಪೂಡಿ

ರಮಿಸಿ ಬಿಡುತ್ತವೆ.

ಒಮ್ಮೆ ಹಿಂಡಿ ಬಸಿದು

 ಬೆವರಿಳಿಸಿದಂತೆ

ಒಡಲ ಕುಲುಮೆಯಾಗಿ

ಕುದಿಸಿ ಬಿಡುತ್ತವೆ.


ಆ ನೆನಪುಗಳೇ ಹಾಗೆ

ಒಂಟಿಯಾಗಿರಲು 

ಜೊತೆಯಾಗಿ 

ರೆಕ್ಕೆಗಳ ಹಚ್ಚಿ ಬಾನೆತ್ತರಕ್ಕೆ

ಹಾರಿಸಿ ಮುದನೀಡುತ್ತವೆ.

ಒಮ್ಮೆ  ನೋವ ಕಡಲಲ್ಲಿ

ಏಳುವ ಅಲೆಗಳಂತೆ, 

ಮನದ ದಡಕ್ಕೆ ಅಪ್ಪಳಿಸುತ್ತದೆ

ದು:ಖವ ಉಮ್ಮಳಿಸಿ..


ಆ ನೆನಪುಗಳೇ ಹಾಗೆ

ಭರವಸೆಯ ಮಿತ್ರನಂತೆ..

ಸಾಂತ್ವನದ ಮಾತುಗಳಾಗಿ

ಒಮ್ಮೆ ಹುಸಿಯಾದ ನಂಬಿಕೆ

ಹಸನಾಗಿ ದಹಿಸಿ 

ಗಹ ಗಹಿಸುತ್ತವೆ..



ಆ ನೆನಪುಗಳೇ ಹಾಗೆ

ಉಳಿದು ಕೊಳೆತು 

ನಾರುವಂತೆ..!!!

ತೆಗೆದುಬರಿದು ಮಾಡವುದೊಳಿತು..

ಮಧುರ ನೆನಪಿನ 

ಖಣಜವೊಂದಿರಲಿ 

ಸಿಹಿ ಹೊರಣದಂತೆ 

ಆಗಾಗ ಸವಿಯಲು ..!!



ಸಿದ್ದು ಮೂರ್ತಿ, ತುಮಕೂರು





Comments

Popular posts from this blog

ಆಧ್ಯಾತ್ಮಿಕ ವಿಚಾರ