Posts

Showing posts from 2022

ಕವಿತೆ

 ಬದುಕು ಕಟ್ಟಿಕೊಳ್ಳಲು  ಅಪ್ಪನಿಗೆ ಹೆಗಲಾಗಿ, ಒದಗುವ  ಬವಣೆಗೆ ಎದೆಯೊಡ್ಡಿ ಛಲವಾಗಿ...., ತೊಡಕಿನ ನೋವಿನೆಳೆಗೆ  ಅಂಜದೆ ಬದುಕ ಅಪ್ಪಿದಾಕೆ ಒಡಲ ದನಿಯೊಳಗೆ, ಒಲುಮೆರಾಗ ಹೊಮ್ಮಿಸಿದಾಕೆ..! ಬಿಕ್ಕುವ ಯಾತನೆಗಳ ಬದಿಗೊತ್ತಿ,  ಆಡಿಸಿ,ನಕ್ಕುನಲಿಸಿ ಉಕ್ಕುವ ಭಾವನೆಯ ಕಟ್ಟಿ, ಮಮತೆಯ ಎರೆದು ಪೋಷಿಸಿ ಎದೆಯ ಕನಸುಗಳ ಕರಗಿಸಿ,  ಎರಕ ಹೊಯ್ದ ಹೊಳಪು ನಮ್ಮ ಬದುಕಿನ ಮೆರುಗು, ಜಿನುಗಿದ ನನಸ ಕಣ್ಣ ಹನಿಯು ಬದುಕ ಉಳುಕುಗಳ, ಸುಳಿವ ನೋವುಗಳ ನಡುವೆ ನಲುಗಿದ ಜೀವ, ದುಗುಡಗಳ ಹೊದ್ದರೂ ಸದ್ದಿಲ್ಲದೆ, ನಗೆಯ ಮಿಂಚು ಮೊಗದಿ ಬೀರಿ,  ನಡೆದವಳು ಈಕೆ. ಬೊಗಸೆಯಲಿ ಮೊಗೆದು ಪ್ರೀತಿ ವಾತ್ಸಲ್ಯಗಳ ನೀಡಿದಾಕೆ! ಒಡಲ ಕರುಳುಗಳು ಮರುಗುವ ನೋವ ಕುರುಹುಗಳು ಮೊಗದಿ ನಗವಿನೆಸಳ ಮುಡಿದು ಮೌನದೊಳು ಜೊತೆಯಾಗಲು ನಿತ್ಯದ ತಾಲೀಮು ಹೊಸತೇನಲ್ಲ ಈ ಹೆಂಗರುಳಿಗೆ.. ಕೊನರುವ ತನ್ನದೇ ಆಸೆಯ ಚಿವುಟಿ ಕುಡಿಗಳ ಚಂದದಿ ಕೊನರಿಸುವ ಕಾಳಜಿ ತಳೆದಳು ಸಹನೆಗೆ ಹೆಸರಾಗಿ ಉಳಿದಳು ಬವಣೆಯ ಹೊತ್ತ ಬದುಕಿನೊಳಗೆ..!!! ---✍️ಸಿದ್ದುಮೂರ್ತಿ, 

ಹನಿಗವನ

Image
 

ಲೇಖನ

Image
 

ಲೇಖನ

Image
 

ಲೇಖನ

Image
 

ಲೇಖನ

Image
ಹೆಣ್ಣು ಸಮಾಜದ ಕಣ್ಣು ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ನಿದಿರೆಯಿಂದೆದ್ದು ಅಂದಿನ ದಿನಚರಿಗಳ ಕಡೆಗೆ ಮಗ್ನಗೊಳ್ಳುವ ಮನಸ್ಸು ಸದಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರೆಡೆಗೆ ಇವಳ ಆಲೋಚನೆಗಳು ಸದಾ ಕ್ರಿಯಾಶೀಲವಾಗಿರುತ್ತವೆ.ಮನೆಯ ಎಲ್ಲರ ಆಗು ಹೋಗುಗಳ ಬಗ್ಗೆ ಇಷ್ಟ ಕಷ್ಟಗಳ ಬಗ್ಗೆ ತಿಳಿದು ನಿಭಾಯಿಸುವ  ಹೊಣೆಗಾರಿಕೆಯನ್ನು ಚಾಚೂ ತಪ್ಪದೇ ನಿರ್ವಹಿಸುವ ಮಹಾ ಶಕ್ತಿಯ ಒಡಲು "ಸ್ತ್ರೀ "ಎಂದು ಬಣ್ಣಿಸುವುದರಲ್ಲಿ ಯಾವುದೇ ಅತಿಶಯೋಕ್ತಿ ಅಲ್ಲ. ಗಂಡ ಮನೆ ಮಕ್ಕಳು ಅವಳು ಕಟ್ಟಿಕೊಂಡಿರುವ ಜಗತ್ತು, ಆದರೊಳಗಿನ ಅವಳ ಸೇವಾ ಕೈಂಕರ್ಯ ಸಮಯದ ಅರಿವಿಲ್ಲದಂತೆ ನಡೆಯುತ್ತಲೇ ಇರುತ್ತದೆ.ಮನೆಯೊಳಗಿನ ಎಲ್ಲ ಸದಸ್ಯರ ವಿಶಿಷ್ಟ ಜವಾಬ್ದಾರಿ ಹೊತ್ತು ಭರವಸೆಯಾಗಿ ಸಂಸಾರ ನೌಕೆಯನ್ನು ಎಡರು ತೊಡರಾಗದಂತೆ ತೇಲಿಸುವ ಗುರುತರ ಹೊಣೆ ಈ ಮಹಿಳೆಗೆ.. "ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ" ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ.  ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕತೃಥ್ವ, ನೇತೃಥ್ವ, ತಾಯತ್ವವಾಗಿರುತ್ತಾಳೆ. ಇವೆಲ್ಲವೂ ...

ಕವಿತೆ

 ಆ ನೆನಪುಗಳೇ ಹಾಗೆ --------------------------- ಆ ನೆನಪುಗಳೇ ಹಾಗೆ ತಂಗಾಳಿ ಬೀಸಿ ತಂಪೂಡಿ ರಮಿಸಿ ಬಿಡುತ್ತವೆ. ಒಮ್ಮೆ ಹಿಂಡಿ ಬಸಿದು  ಬೆವರಿಳಿಸಿದಂತೆ ಒಡಲ ಕುಲುಮೆಯಾಗಿ ಕುದಿಸಿ ಬಿಡುತ್ತವೆ. ಆ ನೆನಪುಗಳೇ ಹಾಗೆ ಒಂಟಿಯಾಗಿರಲು  ಜೊತೆಯಾಗಿ  ರೆಕ್ಕೆಗಳ ಹಚ್ಚಿ ಬಾನೆತ್ತರಕ್ಕೆ ಹಾರಿಸಿ ಮುದನೀಡುತ್ತವೆ. ಒಮ್ಮೆ  ನೋವ ಕಡಲಲ್ಲಿ ಏಳುವ ಅಲೆಗಳಂತೆ,  ಮನದ ದಡಕ್ಕೆ ಅಪ್ಪಳಿಸುತ್ತದೆ ದು:ಖವ ಉಮ್ಮಳಿಸಿ.. ಆ ನೆನಪುಗಳೇ ಹಾಗೆ ಭರವಸೆಯ ಮಿತ್ರನಂತೆ.. ಸಾಂತ್ವನದ ಮಾತುಗಳಾಗಿ ಒಮ್ಮೆ ಹುಸಿಯಾದ ನಂಬಿಕೆ ಹಸನಾಗಿ ದಹಿಸಿ  ಗಹ ಗಹಿಸುತ್ತವೆ.. ಆ ನೆನಪುಗಳೇ ಹಾಗೆ ಉಳಿದು ಕೊಳೆತು  ನಾರುವಂತೆ..!!! ತೆಗೆದುಬರಿದು ಮಾಡವುದೊಳಿತು.. ಮಧುರ ನೆನಪಿನ  ಖಣಜವೊಂದಿರಲಿ  ಸಿಹಿ ಹೊರಣದಂತೆ  ಆಗಾಗ ಸವಿಯಲು ..!! ಸಿದ್ದು ಮೂರ್ತಿ, ತುಮಕೂರು